ಇನ್ಮುಂದೆ ಬೆಳಗ್ಗೆ 7.30ಕ್ಕೆ ಸರ್ಕಾರಿ ಕಚೇರಿಗಳು ಓಪನ್! – ಯಾಕೆ ಇಂತಹ ಬದಲಾವಣೆ?
ಸರ್ಕಾರಿ ಕಚೇರಿಗಳಲ್ಲಿ ಕೆಲಸದ ಸಮಯದಲ್ಲಿ ಬದಲಾವಣೆ ಮಾಡಲಾಗಿದ್ದು, ಹೊಸ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. ಇನ್ನು ಮುಂದೆ ಬೆಳಗ್ಗೆ 7.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡಬೇಕು ಎಂದು ಪಂಜಾಬ್ ಸರ್ಕಾರ ಆದೇಶ ಹೊರಡಿಸಿದೆ.
ಪಂಜಾಬ್ ಸರ್ಕಾರಿ ಕಚೇರಿಗಳಲ್ಲಿ ಇಷ್ಟು ದಿನಗಳ ಕಾಲ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದರು. ಆದರೆ ಇನ್ನು ಮುಂದೆ ಬೆಳಗ್ಗೆ 7.30ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕೆಲಸ ಮಾಡಬೇಕು ಭಗವಂತ್ ಮಾನ್ ಸರ್ಕಾರ ಆದೇಶ ನೀಡಿದೆ. ಇದರಿಂದಾಗಿ ನೌಕರರು ಮೊದಲಿಗಿಂತ ಒಂದು ಗಂಟೆ ಕಡಿಮೆ ಕೆಲಸ ಮಾಡುತ್ತಾರೆ ಎಂದು ಸರ್ಕಾರ ಹೇಳಿದೆ. ಆದರೆ ಅರ್ಧ ಗಂಟೆ ಊಟದ ವಿರಾಮವನ್ನು ಈ ಆದೇಶದಲ್ಲಿ ತೆಗೆದುಹಾಕಿದೆ.
ಇದನ್ನೂ ಓದಿ: ಮೇ 10ರಂದು ಚುನಾವಣೆ – ಎಲ್ಲಾ ಖಾಸಗಿ ಕಚೇರಿಗಳು, ಕಾರ್ಖಾನೆಗಳು ಬಂದ್..!
ಪಂಜಾಬ್ ನಲ್ಲಿ ವಿದ್ಯುತ್ ಅಭಾವ ಉಂಟಾಗಿದೆ. ಹೀಗಾಗಿ ವಿದ್ಯುತ್ ವೆಚ್ಚವನ್ನು ಉಳಿಸಲು ಮತ್ತು ಉತ್ಪಾದಕತೆಯನ್ನು ಸುಧಾರಿಸಲು ಈ ಪ್ಲಾನ್ ಮಾಡಿದೆ. ಹೊಸ ಕೆಲಸದ ಅವಧಿಯು ಜುಲೈ 15 ರವರೆಗೆ ಜಾರಿಯಲ್ಲಿರುತ್ತದೆ ಮತ್ತು ಇದರ ಪರಿಣಾಮವಾಗಿ ಅಂದಾಜು 40-42 ಕೋಟಿ ರೂಪಾಯಿ ಉಳಿತಾಯವಾಗಲಿದೆ. ಕೆಲಸದ ಸಮಯ ಬದಲಾವಣೆ ಆದೇಶ ಹೊರಡಿಸುವ ಮೊದಲು ನೌಕರರು ಮತ್ತು ಜನರ ಅಭಿಪ್ರಾಯವನ್ನು ಪಡೆದಿದ್ದೇವೆ. ಅವರು ಈ ನಿರ್ಧಾರಕ್ಕೆ ಒಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರಿ ನೌಕರರು, ಐಎಎಸ್, ಐಪಿಎಸ್ ಅಧಿಕಾರಿಗಳಿಂದ ಹಿಡಿದು ಸೂಪರಿಂಟೆಂಡೆಂಟ್‌ಗಳು ಮತ್ತು ಪ್ಯೂನ್‌ಗಳವರೆಗೆ, ಪಂಜಾಬ್‌ನ ಹಲವು ಸ್ಥಳಗಳಲ್ಲಿ ಬೆಳಿಗ್ಗೆ 7:30 ರ ಗಡುವಿನ ಮೊದಲು ತಮ್ಮ ತಮ್ಮ ಕಚೇರಿಗಳಿಗೆ ಹೋಗುತ್ತಿರುವುದು ಕಂಡುಬಂದಿದೆ. ಕ್ಯಾಬಿನೆಟ್ ಮಂತ್ರಿಗಳು ಸಮಯಕ್ಕಿಂತ ಮುಂಚಿತವಾಗಿ ತಮ್ಮ ಕಚೇರಿಗಳನ್ನು ತಲುಪಿದ ಕಾರಣ ಹೊಸ ಟೈಮ್‌ಲೈನ್‌ಗೆ ಬದ್ಧರಾಗಿದ್ದರು.