ಕಾಂಗ್ರೆಸ್ ನಾಯಕನನ್ನು ಗುಂಡಿಕ್ಕಿ ಹತ್ಯೆಗೈದ ಮಹಿಳೆ – ಸಂಬಂಧವೇ ಶಾಪವಾಯ್ತಾ?
ಅಮೃತಸರ: ಪಂಜಾಬ್ ನ ಕಾಂಗ್ರೆಸ್ ನಾಯಕ ಮೇಜರ್ ಸಿಂಗ್ ಧಲಿವಾಲ್ ರನ್ನು ಸೋಮವಾರ ಮಹಿಳೆಯೊಬ್ಬಳು ಗುಂಡಿಕ್ಕಿ ಹತ್ಯೆಗೈದಿದ್ದಾಳೆ ಎಂದು ವರದಿಯಾಗಿದೆ.
ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ತರ್ನ್ ತರಣ್ ಈ ಬಗ್ಗೆ ಮಾಹಿತಿ ನೀಡಿದ್ದು, ಹತ್ಯೆಗೈದ ಮಹಿಳೆ ಧಲಿವಾಲ್ ಅವರೊಂದಿಗೆ ಸಂಬಂಧ ಹೊಂದಿದ್ದರು. ಅಲ್ಲದೇ ಕೆಲವು ವೈಯಕ್ತಿಕ ಕಾರಣಗಳಿಂದ ಕೊಲೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಿವಾಹಿತನ ಜೊತೆ ಪತ್ನಿ ಪರಾರಿ – ಆತನ ಹೆಂಡ್ತಿಯನ್ನೇ ಮದುವೆಯಾದ ಭೂಪ..!
ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಅಮನದೀಪ್ ಕೌರ್ ಎಂಬ ಮಹಿಳೆ ಮೇಜರ್ ಸಿಂಗ್ ಕಚೇರಿಗೆ ಬಂದು ಕಚೇರಿಯಲ್ಲಿಟ್ಟಿದ್ದ ಮೇಜರ್ ಸಿಂಗ್ ಅವರ ರಿವಾಲ್ವರ್ ತೆಗೆದುಕೊಂಡು ಗುಂಡು ಹಾರಿಸಿದ್ದಾರೆ. ಗುಂಡು ತಗುಲಿ ರಕ್ತಸಿಕ್ತರಾಗಿ ಬಿದ್ದಿದ್ದ ಸಿಂಗ್ ರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದರು. ಆದರೆ ಮೇಜರ್ ಸಿಂಗ್ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಇದೀಗ ಅಮನ್‌ದೀಪ್ ಕೌರ್ ರನ್ನು ಬಂಧಿಸಲು ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಘಟನೆಯ ನಂತರ ಸ್ಥಳಕ್ಕಾಗಮಿಸಿದ ಡಿಎಸ್ಪಿ ಪಟ್ಟಿ ಸತ್ನಾಮ್ ಸಿಂಗ್, ಆರೋಪಿ ಮಹಿಳೆ ಅಮನದೀಪ್ ಕೌರ್ ಪ್ರಸ್ತುತ ತಲೆಮರೆಸಿಕೊಂಡಿದ್ದಾರೆ. ಆಕೆಯೊಂದಿಗೆ ಮೇಜರ್ ಸಿಂಗ್ ಅವರ ರಿವಾಲ್ವರ್ ಅನ್ನು ಸಹ ತೆಗೆದುಕೊಂಡು ಹೋಗಿದ್ದಾರೆ. ಅಮನದೀಪ್ ಕೌರ್ ರನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ.