ಮತ್ತೆ ರಿಲೀಸ್ ಆಯ್ತು ‘ಜಾಕಿ’ ಸಿನಿಮಾ – ಮಧ್ಯರಾತ್ರಿಯಿಂದಲೇ ಥಿಯೇಟರ್‌ಗಳಲ್ಲಿ ಹಬ್ಬ  

ಮತ್ತೆ ರಿಲೀಸ್ ಆಯ್ತು ‘ಜಾಕಿ’ ಸಿನಿಮಾ – ಮಧ್ಯರಾತ್ರಿಯಿಂದಲೇ ಥಿಯೇಟರ್‌ಗಳಲ್ಲಿ ಹಬ್ಬ  

ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ನಟನೆಯ ಜಾಕಿ ಸಿನಿಮಾ ರೀ ರಿಲೀಸ್‌ ಆಗಿದೆ. ರೀ ರಿಲೀಸ್‌ ಆದ ಸಿನಿಮಾ ಥಿಯೇಟರ್‌ಗಳಲ್ಲಿ ಭಾರಿ ಸದ್ದು ಮಾಡ್ತಾ ಇದೆ. ಹೊಸದಾಗಿ ಅಪ್ಪು ಸಿನಿಮಾ ಬಿಡುಗಡೆಯಾದಾಗ ಸಿಗುವ ರೆಸ್ಪಾನ್ಸ್  ಈಗಲೂ ಸಿಕ್ಕಿದೆ. ತೆರೆಮೇಲೆ ಮತ್ತೆ ನೆಚ್ಚಿನ ನಟನನ್ನು ನೋಡಿ ಅಭಿಮಾನಿಗಳು ಫುಲ್‌ ಖುಷಿಯಾಗಿದ್ದಾರೆ.

ಹೌದು, ಭಾನುವಾರ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಜಾಕಿ ಸಿನಿಮಾವನ್ನು ರೀ ರಿಲೀಸ್‌ ಮಾಡಲಾಗಿದೆ. ರಾಜ್ಯಾದ್ಯಂತ ದೊಟ್ಟಮಟ್ಟದಲ್ಲೇ ‘ಜಾಕಿ’ ಸಿನಿಮಾ ತೆರೆಗಪ್ಪಳಿಸಿದೆ. ಅಡ್ವಾನ್ಸ್‌ ಬುಕ್ಕಿಂಗ್‌ಗೂ ಕೂಡ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಬೆಂಗಳೂರು, ಮೈಸೂರಿನಲ್ಲಿ ಸಿನಿಮಾ ಬಿಡುಗಡೆಗೂ ಮುನ್ನ ತಲಾ 2 ಶೋ ಸೋಲ್ಡೌಟ್ ಆಗಿದೆ.

ಇದನ್ನೂ ಓದಿ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಬಿಎಸ್‌ ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

ಚಿತ್ರಮಂದಿರಗಳಲ್ಲಿ ‘ಜಾಕಿ’ ಆರ್ಭಟ ಜೋರಾಗಿದೆ. ಕೆಲ ಶೋಗಳು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಸಿನಿಮಾ ರೀ ರಿಲೀಸ್‌ ಆದ್ರೂ ಜನರು ಥಿಯೇಟರ್‌ಗೆ ಬಂದು ಸಿನಿಮಾ ವೀಕ್ಷಿಸುತ್ತಿದ್ದಾರೆ. ಕಟೌಟ್‌, ಬ್ಯಾನರ್, ಹಾರ, ಪಟಾಕಿ, ಜೈಕಾರ ಸೇರಿ ಥಿಯೇಟರ್‌ಗಳಲ್ಲಿ ‘ಜಾಕಿ’ ಸಡಗರ ಮುಗಿಲುಮುಟ್ಟಿದೆ.  ನಗರದ ಕೆ. ಜಿ ರಸ್ತೆಯ ನರ್ತಕಿ ಹಾಗೂ ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರಗಳಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ ಜೋರಾಗಿದೆ. ಈ ಎರಡು ಥಿಯೇಟರ್‌ಗಳಲ್ಲಿ ಸೂರ್ಯ ಹುಟ್ಟುವ ಮುನ್ನ ‘ಜಾಕಿ’ ಸಿನಿಮಾ ಶೋಗಳು ಆರಂಭವಾಗಿತ್ತು. ಚಿತ್ರದಲ್ಲಿ ಜಾನಕಿರಾಮ ಅಲಿಯಾಸ್ ಜಾಕಿಯನ್ನು ನೋಡಿ ಅಭಿಮಾನಿಗಳು ಸಂತಸ ಪಟ್ಟಿದ್ದಾರೆ. ‘ಜಾಕಿ’ ಸಿನಿಮಾ ನೋಡ್ತಾ ನೋಡ್ತಾ ಸಂಭ್ರಮಾಚರಣೆ ವೇಳೆ ಕೆಲ ಅಭಿಮಾನಿಗಳು ಅಪ್ಪು ನೆನೆದು ಕಣ್ಣೀರು ಹಾಕಿದ್ದಾರೆ.

ಹಲವು ವರ್ಷಗಳ ಹಿಂದೆ ‘ಜಾಕಿ’ ಸಿನಿಮಾ ಬಿಡುಗಡೆಯಾದಾಗ ಇದೇ ರೀತಿಯ ರೆಸ್ಪಾನ್ಸ್, ಸೆಲೆಬ್ರೇಷನ್ ಕಂಡು ಬಂದಿತ್ತು. ಇದೀಗ ಅದು ಪುನರಾವರ್ತನೆ ಆಗುತ್ತಿದೆ. ಸ್ಯಾಂಡಲ್‌ವುಡ್‌ನಲ್ಲಿ ಪವರ್ ಸ್ಟಾರ್ ‘ಜಾಕಿ’ ಫೀವರ್ ಜೋರಾಗಿದೆ. ಥಿಯೇಟರ್‌ಗಳ ಮುಂದೆ ಹೌಸ್‌ಫುಲ್ ಬೋರ್ಡ್‌ಗಳು ಬಿದ್ದಿವೆ. ಕನ್ನಡ ಸಿನಿಮಾಗಳನ್ನು ನೋಡಲು ಪ್ರೇಕ್ಷಕರು ಥಿಯೇಟರ್‌ಗೆ ಬರುತ್ತಿಲ್ಲ ಎನ್ನುವ ಚರ್ಚೆ ನಡುವೆ ‘ಜಾಕಿ’ಯನ್ನು ನೋಡಲು ಜನ ಮುಗಿಬಿದ್ದಿದ್ದಾರೆ.

Shwetha M