ಹೋಟೆಲ್‌ನಲ್ಲಿ ಫುಡ್ ವೇಸ್ಟ್ ಮಾಡ್ತೀರಾ? – ಈ ರೆಸ್ಟೋರೆಂಟ್ ನಲ್ಲಿ ಊಟ ಚೆಲ್ಲಿದ್ರೆ ಬೀಳುತ್ತೆ ದಂಡ!

ನಮ್ಮಲ್ಲಿ ಆಹಾರ ತಿನ್ನೋದಿಕ್ಕಿಂದ ಜಾಸ್ತಿ ವ್ಯರ್ಥ ಮಾಡುವವರೇ ಹೆಚ್ಚು. ಇನ್ನು ಹೋಟೆಲ್ ಹಾಗೂ ರೆಸ್ಟೋರೆಂಟ್‌ಗೆ ಹೋದಾಗಲೂ ಎಲ್ಲವನ್ನು ಆರ್ಡರ್ ಮಾಡಿ ಕೊನೆಗೆ ಫುಡ್ ವೇಸ್ಟ್ ಮಾಡ್ತಾರೆ. ಇದೀಗ ಇಲ್ಲೊಂದು ರೆಸ್ಟೋರೆಂಟ್‌ನಲ್ಲಿ ಆಹಾರ ವ್ಯರ್ಥ ಮಾಡಿದವರಿಗೆ ದಂಡ ವಿಧಿಸುತ್ತಿದೆ.
ಇದನ್ನೂ ಓದಿ: IPL ಸ್ಟಾರ್ಸ್ ಏಷ್ಯಾಕಪ್ ನಲ್ಲಿ FAIL – ಕೆಎಲ್, ಸಾಯಿ, ಶ್ರೇಯಸ್ ಗೆ ಮೋಸ!
ಸಾಮಾನ್ಯವಾಗಿ ಹೋಟೆಲ್‌ಗೆ ಹೋದ ವೇಳೆ ಮೆನು ನೋಡಿ ಎಲ್ಲಾ ಬಗೆಯ ಆಹಾರವನ್ನು ಆರ್ಡರ್ ಬಿಡುವವರೇ ಹೆಚ್ಚು. ಆದರೆ ಸ್ವಲ್ಪ ತಿನ್ನುತ್ತಿದ್ದಂತೆ ಹೊಟ್ಟೆ ತುಂಬಿ ಹೋಗುತ್ತದೆ. ಮತ್ತೇನು ಮಾಡೋದು ಅಂತ ಮನಸ್ಸಿನಲ್ಲಿ ಅಂದುಕೊಂಡು ಪ್ಲೇಟ್ ಖಾಲಿ ಮಾಡದೇ ಹಾಗೆಯೇ ಬಿಟ್ಟು ಬರುತ್ತಾರೆ. ಅಂತಹವರಿಗೆ ಇದೀಗ ಪುಣೆಯ ಸೌತ್ ಇಂಡಿಯಾ ರೆಸ್ಟೋರೆಂಟ್ ಒಂದೊಳ್ಳೆ ನಿಯಮವನ್ನು ಜಾರಿಗೆ ತಂದಿದೆ. ಈ ರೆಸ್ಟೋರೆಂಟ್ ಮೆನು ಬೋರ್ಡ್‌ನಲ್ಲಿ ಯಾರು ಫುಡ್ ವೇಸ್ಟ್ ಮಾಡ್ತಾರೋ ಅವರಿಗೆ 20 ರೂ ದಂಡ ವಿಧಿಸಲಾಗುವುದು ಎಂದು ಉಲ್ಲೇಖಿಸಿದೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
@rons1212 ಹೆಸರಿನ ಎಕ್ಸ್ ಖಾತೆಯಲ್ಲಿ ರೆಸ್ಟೋರೆಂಟ್ ಹ್ಯಾಂಡ್ ರೈಟಿಂಗ್ ಮೆನು ಫೋಟೋ ಹಂಚಿಕೊಂಡಿದ್ದಾರೆ. ಪುಣೆಯ ಒಂದು ಹೋಟೆಲ್ ಆಹಾರವನ್ನು ವ್ಯರ್ಥ ಮಾಡಿದರೆ ಹೆಚ್ಚುವರಿಯಾಗಿ 20 ರೂ ಶುಲ್ಕ ವಿಧಿಸುತ್ತಿದೆ. ಪ್ರತಿಯೊಂದು ರೆಸ್ಟೋರೆಂಟ್ ಕೂಡ ಇದೇ ರೀತಿ ಮಾಡಬೇಕು, ಮದುವೆ ಮತ್ತು ಸಮಾರಂಭಗಳಿಗೂ ದಂಡ ವಿಧಿಸಲು ಪ್ರಾರಂಭಿಸಬೇಕು ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ಮೆನು ಬೋರ್ಡ್‌ನಲ್ಲಿ ರೆಸ್ಟೋರೆಂಟ್‌ನಲ್ಲಿ ಲಭ್ಯವಿರುವ ವಿವಿಧ ಆಹಾರ ಪದಾರ್ಥಗಳ ಲಿಸ್ಟ್ ಇದೆ. ಆದರೆ ಕೊನೆಗೆ ಆಹಾರ ವ್ಯರ್ಥ ಮಾಡಿದರೆ ನಿಮಗೆ 20 ರೂ. ಶುಲ್ಕ ವಿಧಿಸಲಾಗುತ್ತದೆ ಎಂಬ ದೊಡ್ಡದಾದ ಅಕ್ಷರದಲ್ಲಿ ಬರೆಯಲಾಗಿದೆ. ಇದ್ರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಇದೀಗ ಆಹಾರ ವೇಸ್ಟ್ ಮಾಡುವುದನ್ನು ತಪ್ಪಿಸಲು ಇದೊಂದು ಒಳ್ಳೆಯ ಕ್ರಮ. ಒಳ್ಳೆಯ ರೂಲ್ಸ್, ಹೀಗೆ ಮಾಡಿಯಾದ್ರು ಆಹಾರ ವೇಸ್ಟ್ ಆಗೋದನ್ನು ತಪ್ಪಿಸೋಣ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.

ನೋಡಿರಿ

