ಉತ್ತಮ ಆರೋಗ್ಯಕ್ಕೆ ಸೂಪರ್ಫುಡ್ – ಡೊಳ್ಳು ಹೊಟ್ಟೆ ಕರಗಲು ಕುಂಬಳಕಾಯಿ ಬೀಜ ಪರಿಹಾರ

ಈಗಿನ ಕಾಮನ್ ಸಮಸ್ಯೆಯಿಂದ ಹೊಟ್ಟೆ.. ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಡೊಳ್ಳು ಹೊಟ್ಟೆ ಇರುತ್ತೆ.. ಆದ್ರೆ ಡೊಳ್ಳು ಹೊಟ್ಟೆ ಕರಗಿಸೋಕೆ ಒಂದು ಪರಿಹಾರವಿದೆ. ಕುಂಬಳಕಾಯಿ ಬೀಜದಿಂದ ಡೊಳ್ಳು ಹೊಟ್ಟೆಯನ್ನು ಬೆಣ್ಣೆಯಂತೆ ಕರಗಿಸಬಹುದು .. ಆರೋಗ್ಯದ ದೃಷ್ಟಿಯಿಂದ ತರಕಾರಿಗಳನ್ನು ಆಹಾರದ ಭಾಗವಾಗಿಸಿದರೂ ಸಹ ಅದರ ಬೀಜಗಳನ್ನು ತಿನ್ನುವುದನ್ನು ಜನ ನಿರ್ಲಕ್ಷಿಸುತ್ತಾರೆ. ಆದರೆ, ಹಣ್ಣು-ತರಕಾರಿಗಳ ಬೀಜಗಳು ಆರೋಗ್ಯದ ಗಣಿಯಾಗುದ್ದು ಆರೋಗ್ಯಕರವಾಗಿ ತೂಕ ಇಳಿಕೆಯನ್ನು ಉತ್ತೇಜಿಸುತ್ತದೆ ಎಂದು ಹಲವು ಸಂಶೋಧನೆಗಳು ತಿಳಿಸಿವೆ. ಗಾತ್ರದಲ್ಲಿ ಚಿಕ್ಕದಾಗಿರುವ ಕುಂಬಳಕಾಯಿ ಬೀಜಗಳಲ್ಲಿ ಪ್ರೋಟೀನ್, ಆರೋಗ್ಯಕರ ಕೊಬ್ಬುಗಳು, ಫೈಬರ್, ಮೆಗ್ನೀಸಿಯಮ್, ಸತು, ಕಬ್ಬಿಣ, ಸೆಲೆನಿಯಮ್, ವಿಟಮಿನ್ ಇ ಮತ್ತು ಉತ್ಕರ್ಷಣ ನಿರೋಧಕಗಳು ಹೇರಳವಾಗಿ ಕಂಡು ಬರುತ್ತದೆ. ಹಾಗಾಗಿ, ಇದನ್ನು ಉತ್ತಮ ಆರೋಗ್ಯಕ್ಕೆ ಸೂಪರ್ಫುಡ್ ಎಂದು ಪರಿಗಣಿಸಲಾಗಿದೆ.
ಹಲವು ಸಂಶೋಧನೆಗಳ ಬಳಿಕ ಕುಂಬಳಕಾಯಿ ಬೀಜಗಳಲ್ಲಿರುವ ಪೋಷಕಾಂಶಗಳು ರಕ್ತದಲ್ಲಿ ಬ್ಲಡ್ ಶುಗರ್ ಅನ್ನು ಕಂಟ್ರೋಲ್ ನಲ್ಲಿಡುತ್ತದೆ. ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದಲ್ಲದೆ, ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಅಷ್ಟೇ ಅಲ್ಲ, ಕ್ಯಾನ್ಸರ್ನಂತರ ಮಾರಕ ರೋಗವನ್ನು ತಡೆಗಟ್ಟುವಲ್ಲಿಯೂ ಸಹ ಇದು ಪರಿಣಾಮಕಾರಿ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿದುಬಂದಿದೆ. ಕುಂಬಳಕಾಯಿ ಬೀಜಗಳಲ್ಲಿ ಫೈಬರ್ ಅಧಿಕವಾಗಿದೆ. ಇದನ್ನು ತಿನ್ನುವುದರಿಂದ ದೀರ್ಘಕಾಲದವರೆಗೆ ಹಸಿವನ್ನು ನಿಯಂತ್ರಿಸಬಹುದು. ಅಲ್ಲದೆ, ಇದು ಅತಿಯಾಗಿ ತಿನ್ನುವುದನ್ನು ಸಹ ತಪ್ಪಿಸುತ್ತದೆ. ಇದರ ಹೊರತಾಗಿ ಕುಂಬಳ ಬೀಜಗಳಲ್ಲಿ ಪ್ರೊಟೀನ್ ಸಹ ಉತ್ತಮ ಪ್ರಮಾಣದಲ್ಲಿದ್ದು ಇದು ತೂಕ ನಷ್ಟದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಕುಂಬಳಕಾಯಿ ಸೀಡ್ಸ್ ನಲ್ಲಿ ಆರೋಗ್ಯಕರ ಕೊಬ್ಬುಗಳು ಎಂದರೆ ಅಪರ್ಯಾಪ್ತ ಕೊಬ್ಬುಗಳು ಹೇರಳವಾಗಿರುವುದರಿಂದ ಇವು ದೇಹಕ್ಕೆ ದೀರ್ಘಕಾಲದವರೆಗೆ ಶಕ್ತಿಯನ್ನು ಒದಗಿಸುತ್ತದೆ. ಜೊತೆಗೆ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನಗೊಳಿಸುವಲ್ಲಿಯೂ ಇದು ಸಹಕಾರಿ ಆಗಿದೆ. ಕುಂಬಳ ಸೀಡ್ಸ್ ಬಳಕೆಯಿಂದ ದೇಹದಲ್ಲಿ ಹೆಚ್ಚುವರಿ ಕೊಬ್ಬು ಕರಗುತ್ತದೆ, ಹೊಟ್ಟೆಯ ಸುತ್ತಲಿನ ಫ್ಯಾಟ್ ಕೂಡ ವೇಗವಾಗಿ ಕರಗುತ್ತದೆ.
ಆರೋಗ್ಯಕರ ತೂಕ ಇಳಿಕೆಗೆ ಪ್ರತಿದಿನ ಕೇವಲ 20-30 ಗ್ರಾಂ ನಷ್ಟು ಕುಂಬಳ ಬೀಜಗಳನ್ನು ತಿನ್ನುವುದು ಉತ್ತಮವಾಗಿದೆ. ತೂಕ ಇಳಿಕೆಗಾಗಿ ಕುಂಬಳಕಾಯಿ ಬೀಜಗಳನ್ನು ಹಲವು ವಿಧಾನಗಳಲ್ಲಿ ಸೇವಿಸಬಹುದಾಗಿದ್ದು, ಇದನ್ನು ಲಘುವಾಗಿ ಹುರಿದು ನೇರವಾಗಿ ಸೇವಿಸಬಹುದು. ತರಕಾರಿ ಸಲಾಡ್ ಗಳೊಂದಿಗೆ ತಿನ್ನಬಹುದು. ಸ್ಮೂಥಿಗಳು ಅಥವಾ ಶೇಕ್ಗಳಲ್ಲಿ ಮಿಕ್ಸ್ ಮಾಡಿಯೂ ಬಳಸಬಹುದು.

ನೋಡಿರಿ

