ಜೀವದಾನ ಸಿಕ್ಕರೂ ಬೀಸಲಿಲ್ಲ ಬ್ಯಾಟ್- ಶತಕದ ಪಂದ್ಯದಲ್ಲಿ ಶೂನ್ಯಕ್ಕೆ ಪೂಜಾರ ಔಟ್

ಜೀವದಾನ ಸಿಕ್ಕರೂ ಬೀಸಲಿಲ್ಲ ಬ್ಯಾಟ್- ಶತಕದ ಪಂದ್ಯದಲ್ಲಿ ಶೂನ್ಯಕ್ಕೆ ಪೂಜಾರ ಔಟ್

ಆಸ್ಟ್ರೇಲಿಯ ವಿರುದ್ಧದ ಎರಡನೇ ಟೆಸ್ಟ್ ನಲ್ಲಿ ಕಣಕ್ಕಿಳಿಯುವ ಮೂಲಕ ತನ್ನ ವೃತ್ತಿ ಜೀವನದಲ್ಲಿ 100ನೇ ಟೆಸ್ಟ್ ಪಂದ್ಯವನ್ನಾಡಿದ ದಾಖಲೆ ಮಾಡಿದ ಟೀಂ ಇಂಡಿಯಾ ಆಟಗಾರ ಚೇತೇಶ್ವರ್ ಪೂಜಾರ ಅಭಿಮಾನಿಗಳಿಗೆ ನಿರಾಸೆ ಮಾಡಿಸಿದ್ದಾರೆ. ಟೀಂ ಇಂಡಿಯಾ ಇನ್ನಿಂಗ್ಸ್​ನ ಎರಡನೇ ದಿನದಾಟದ ಮೊದಲ ಸೆಷನ್​ನಲ್ಲಿ ಬ್ಯಾಟಿಂಗ್​ಗೆ ಬಂದ ಪೂಜಾರ, ಶೂನ್ಯಕ್ಕೆ ಔಟಾಗಿ ಪೆವಿಲಿಯನ್ ಸೇರಿದರು. ಪೂಜಾರ ಮೇಲೆ ಸಾಕಷ್ಟು ನಿರೀಕ್ಷೆಯಿಟ್ಟುಕೊಂಡಿದ್ದ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:  ಸೆಲ್ಫಿ ಕೊಡಲು ನಿರಾಕರಿಸಿದ್ದಕ್ಕೆ ಸಿಟ್ಟು- ಟೀಮ್ ಇಂಡಿಯಾ ಆಟಗಾರ ಪೃಥ್ವಿ ಶಾ ಕಾರಿನ ಮೇಲೆ ದಾಳಿ

ತನ್ನ 100ನೇ ಟೆಸ್ಟ್ ಆಡುತ್ತಿರುವ ಪೂಜಾರ ಶತಕ ಗಳಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಪೂಜಾರ ಖಾತೆ ಕೂಡಾ ತೆರೆಯಲಿಲ್ಲ. ಇದರೊಂದಿಗೆ 100ನೇ ಟೆಸ್ಟ್ ನಲ್ಲಿ ಶೂನ್ಯಕ್ಕೆ ಔಟಾದ 8ನೇ ಆಟಗಾರ ಎನಿಸಿಕೊಂಡಿದ್ದಾರೆ. 20ನೇ ಓವರ್​ನ ನಾಲ್ಕನೇ ಎಸೆತದಲ್ಲಿ ಆಸೀಸ್ ಸ್ಪಿನ್ನರ್ ನಾಥನ್ ಲಿಯನ್ ಎಸೆತದಲ್ಲಿ ಪೂಜಾರ ಎಲ್ ಬಿಡಬ್ಲ್ಯೂ ಆಗಿ ಔಟಾದರು. ಆದಾಗ್ಯೂ, ತನ್ನ ಶತಕದ ಟೆಸ್ಟ್ ಪಂದ್ಯದಲ್ಲಿ ಸಿಕ್ಕ ಜೀವದಾನವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾದ ಪೂಜಾರಗೆ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. 18ನೇ ಓವರ್‌ನ ಮೂರನೇ ಎಸೆತದಲ್ಲಿ ಅಂಪೈರ್ ನಾಟ್ ಔಟಾಗಿ ನೀಡಿದ ಎಲ್‌ಬಿಡಬ್ಲ್ಯೂ ಔಟ್‌ಗೆ ಮೇಲ್ಮನವಿ ಸಲ್ಲಿಸಲಾಯಿತು. ರೀಪ್ಲೇಗಳಲ್ಲಿ ಪೂಜಾರ ಔಟಾಗಿರುವುದು ಸ್ಪಷ್ಟವಾಗಿ ಗೋಚರಿಸಿತು. ಹೀಗಾಗಿ ಮೊದಲೇ ಔಟಾಗುವುದರಿಂದ ಪೂಜಾರ ಬಚಾವ್ ಆಗಿದ್ದರು.

suddiyaana