ದೇಶಿ ಟೂರ್ನಿಯಲ್ಲೂ NO ಚಾನ್ಸ್ – ರಹಾನೆ, ಪೂಜಾರ ಕರಿಯರ್ ಎಂಡ್?
ಸಿನಿಯರ್ಸ್‌ಗೆ ಗೇಟ್ಪಾಸ್ ಕೊಟ್ಟ Juniors

ದೇಶಿ ಟೂರ್ನಿಯಲ್ಲೂ NO ಚಾನ್ಸ್  –  ರಹಾನೆ, ಪೂಜಾರ ಕರಿಯರ್ ಎಂಡ್?ಸಿನಿಯರ್ಸ್‌ಗೆ ಗೇಟ್ಪಾಸ್ ಕೊಟ್ಟ Juniors

ಯುವ ಆಟಗಾರರ ಆರ್ಭಟಕ್ಕೆ ಸಿನಿಯರ್ ಪ್ಲೇಯರ್ಸ್ ಮೂಲೆ ಗುಂಪಾಗುತ್ತಿದ್ದಾರಾ ಅನ್ನೋ ಪ್ರಶ್ನೆ ಹುಟ್ಟುಕೊಂಡಿದೆ. ಇದ್ದಕ್ಕೆ ಕಾರಣ ದಿಗ್ಗಜ ಆಟಗಾರರಾದ ಅಂಜಿಕ್ಯ ರಹಾನೆ ಮತ್ತು ಚೇತೇಶ್ವರ್ ಪೂಜಾರ.. ಟೆಸ್ಟ್‌ ಸ್ಪೆಷಲಿಸ್ಟ್‌ ಖ್ಯಾತಿಗೆ ಚ್ಯುತಿ ತಂದುಕೊಂಡು ಭಾರತ ತಂಡದಲ್ಲಿ ಚಾನ್ಸ್ ಸಿಗದೇ ವಂಚಿತರಾಗಿರುವ ಚೇತೇಶ್ವರ್‌ ಪೂಜಾರ  ಮತ್ತು ಅಜಿಂಕ್ಯ ರಹಾನೆಯನ್ನ ದೇಶೀಯ ಕ್ರಿಕೆಟ್‌ನಿಂದಲೂ ಅವಕಾಶ ವಂಚಿತರಾಗಿದ್ದಾರೆ.

2010 ರ ದಶಕದಲ್ಲಿ ಭಾರತೀಯ ಟೆಸ್ಟ್ ತಂಡದ ಆಧಾರಸ್ತಂಭಗಳಾಗಿದ್ದ ಪೂಜಾರ ಮತ್ತು ರಹಾನೆ 2023 ರ ಜೂನ್‌ನಿಂದ ಅಂತಾರಾಷ್ಟ್ರೀಯ ರೆಡ್-ಬಾಲ್ ಕ್ರಿಕೆಟ್ ಆಡಿಲ್ಲ. ಈ ಇಬ್ಬರೂ ಆಟಗಾರರು ಕೊನೆಯ ಬಾರಿಗೆ 2023ರ ಜೂನ್‌ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ  ಪೂಜಾರ  ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್  ರಹಾನೆ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಆಮೇಲೆ ಇವರಿಗೆ ಅವಕಾಶಗಳು ಸಿಕ್ಕಿರಿಲ್ಲ.. ಈಗ ಬೌಲಿಂಗ್ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ನಾಯಕರಾಗಿರುವ ದುಲೀಪ್ ಟ್ರೋಫಿಯ ಪಶ್ಚಿಮ ವಲಯ ತಂಡದಿಂದ ರಹಾನೆ ಮತ್ತು ಪೂಜಾರರನ್ನ ಕೈಬಿಡಲಾಗಿದೆ.

ಯಶಸ್ವಿ ಜೈಸ್ವಾಲ್ , ಶ್ರೇಯಸ್ ಅಯ್ಯರ್ , ಮತ್ತು ಸರ್ಫರಾಜ್ ಖಾನ್‌ರಂತಹ ಯುವ ಆಟಗಾರರ ಉಪಸ್ಥಿತಿಯಿಂದಾಗಿ ತಂಡದಲ್ಲಿ ಸ್ಥಾನಕ್ಕೆ ತೀವ್ರ ಸ್ಪರ್ಧೆ ಇದೆ. ಅಲ್ಲದೆ ರಹಾನೆ ಮತ್ತು ಪೂಜಾರರ ಇತ್ತೀಚಿನ ರಣಜಿ ಟ್ರೋಫಿ ಪ್ರದರ್ಶನವು ಆಯ್ಕೆಗಾರ ಗಮನ ಸೆಳೆದಿಲ್ಲ. ರಹಾನೆ 2024-25ರ ರಣಜಿ ಟ್ರೋಫಿಯಲ್ಲಿ 9 ಪಂದ್ಯಗಳಲ್ಲಿ 467 ರನ್‌  ಗಳಿಸಿದ್ದರು, ಆದರೆ 2023-24ರಲ್ಲಿ 214 ರನ್‌ಗಳು   ಮಾತ್ರ ಗಳಿಸಿದ್ದರು. ಪೂಜಾರ, ಸೌರಾಷ್ಟ್ರದ ಪರ 2024-25ರ ರಣಜಿ ಟ್ರೋಫಿಯಲ್ಲಿ 7 ಪಂದ್ಯಗಳಲ್ಲಿ 402 ರನ್‌ಗಳನ್ನು  ಗಳಿಸಿದ್ದರು. ಆದರೂ, ಇವರನ್ನ ಕೈ ಬಿಟ್ಟು ಆಯ್ಕೆಗಾರರು ಯುವ ಆಟಗಾರರಿಗೆ ಆದ್ಯತೆ ನೀಡಿದ್ದಾರೆ.

ಪೂಜಾರ ಪ್ರಸ್ತುತ ಭಾರತ vs ಇಂಗ್ಲೆಂಡ್ ಟೆಸ್ಟ್ ಸರಣಿಯ ಕುರಿತು ಕಾಮೆಂಟರಿ ಮಾಡುತ್ತಿದ್ದರೆ. ಅಜಿಂಕ್ಯ ರಹಾನೆ ತಮ್ಮ ಯೂಟ್ಯೂಬ್ ವೃತ್ತಿಜೀವನದತ್ತ ಗಮನ ಹರಿಸುತ್ತಿದ್ದಾರೆ. ಕಳೆದ ಋತುವಿನಲ್ಲಿ ಆಟಗಾರರು ರಣಜಿ ಟ್ರೋಫಿಯಲ್ಲಿ ಆಡಿದ್ದರು. ಆದ್ರೆ ಈಗ  ದೇಶೀಯ ಟೂರ್ನಿಯಲ್ಲಿಯೂ ಅವಕಾಶ ಕಳೆದುಕೊಂಡ ಕಾರಣ ಉಭಯ ಆಟಗಾರರ ಟೆಸ್ಟ್ ವೃತ್ತಿಜೀವನ ಬಹುತೇಕ ಕೊನೆಗೊಂಡಿದೆ.

ವೆಸ್ಟ್ ಝೋನ್ ತಂಡದ ನಾಯಕತ್ವ  ಶಾರ್ದೂಲ್ ಠಾಕೂರ್‌ಗೆ ನೀಡಲಾಗಿದೆ. ವೆಸ್ಟ್ ಝೋನ್ ತಂಡದಲ್ಲಿ ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಸರ್ಫರಾಜ್ ಖಾನ್, ರುತುರಾಜ್ ಗಾಯಕ್ವಾಡ್ ಮತ್ತು ಪೃಥ್ವಿ ಶಾ ರಂತಹ ಯುವ ಮತ್ತು ಅನುಭವಿ ಆಟಗಾರರಿದ್ದಾರೆ. ಶಾರ್ದೂಲ್ ಠಾಕೂರ್, ಭಾರತದ ಟೆಸ್ಟ್ ಆಲ್‌ರೌಂಡರ್, ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಈ ಆಯ್ಕೆಯು ಠಾಕೂರ್‌ರ ನಾಯಕತ್ವದ ಕೌಶಲ್ಯ ಮತ್ತು ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್‌ನಲ್ಲಿ ಅವರ ಚೊಚ್ಚಲ ಆಟಕ್ಕೆ ಮತ್ತಷ್ಟು ಗಮನ ಸೆಳೆದಿದೆ. ಯುವ ಆಟಗಾರರು ಇರೋದ್ರಿಂದಲೇ ವೆಸ್ಟ್‌ ಝೋನ್‌ನಿಂದ ಪೂಜಾರ ಮತ್ತು ರಹಾನೆಯನ್ನ ಕೈ ಬಿಟ್ಟಿರೋದು.. ಹೀಗಾಗಿ ಇವರಿಬ್ಬರು ಅಧಿಕೃತವಾಗಿ ಕ್ರಿಕೆಟ್‌ಗೆ ನಿವೃತ್ತಿ ನೀಡುವುದು ಬಾಕಿಯಿದ್ದು, ಸದ್ಯದಲ್ಲೇ  ಷೋಷಣೆ ಮಾಡೋ ಸಾಧ್ಯತೆ ಇದೆ.

Kishor KV