ಪಿ.ಟಿ. ಉಷಾ ಪತಿ ವಿ. ಶ್ರೀನಿವಾಸನ್ ನಿಧನ – ಪ್ರಧಾನಿ ಮೋದಿ ಸಂತಾಪ

ಪಿ.ಟಿ. ಉಷಾ ಪತಿ ವಿ. ಶ್ರೀನಿವಾಸನ್ ನಿಧನ – ಪ್ರಧಾನಿ ಮೋದಿ ಸಂತಾಪ

ಭಾರತದ ದಿಗ್ಗಜ ಅಥ್ಲೀಟ್‌ ಪಿ.ಟಿ. ಉಷಾ ಅವರ ಪತಿ ವಿ. ಶ್ರೀನಿವಾಸನ್ ಅವರು ಇಂದು ಮುಂಜಾನೆ 67 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಶ್ರೀನಿವಾಸನ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: ರಾತ್ರೋರಾತ್ರಿ ಕಿಂಗ್‌ ಕೊಹ್ಲಿ ಶಾಕಿಂಗ್‌ ನಿರ್ಧಾರ! – ಕೋಟ್ಯಂತರ ಅಭಿಮಾನಿಗಳಿಗೆ ಶಾಕ್ ಕೊಟ್ಟ ವಿರಾಟ್!‌

ಜನವರಿ 30 ರ ಬೆಳಗಿನ ಜಾವ ವಿ. ಶ್ರೀನಿವಾಸನ್ ಅವರು ಕುಟುಂಬದ ನಿವಾಸದಲ್ಲಿ ಕುಸಿದು ಬಿದ್ದಾರೆ. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದ್ರೆ  ಚಿಕಿತ್ಸೆ ಫಲಕಾರಿಯಾಗದೇ ಶ್ರೀನಿವಾಸ್ ನಿಧನರಾಗಿದ್ದಾರೆ ಎಂದು ಕುಟುಂಬ ಮೂಲಗಳು ದೃಢಪಡಿಸಿದೆ.

ಶ್ರೀನಿವಾಸ್ ನಿಧನ‌ಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಮೋದಿ ಪಿಟಿ ಉಷಾಗೆ ಕರೆ ಮಾಡಿ ಅವರ ಪತಿಯ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ. ಮಾಜಿ ಕೇಂದ್ರ ಸರ್ಕಾರಿ ಉದ್ಯೋಗಿಯಾಗಿದ್ದ ಶ್ರೀನಿವಾಸನ್, ಉಷಾ ಅವರ ಅತ್ಯುತ್ತಮ ಕ್ರೀಡಾ ಜೀವನದುದ್ದಕ್ಕೂ ಅವರಿಗೆ ಬೆಂಬಲವಾಗಿ ನಿಂತಿದ್ದರು.

ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ಪಿ.ಟಿ. ಉಷಾ, 1984ರ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ನ 400 ಮೀ. ಹರ್ಡಲ್ಸ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದರು. ಎರಡು ದಶಕಗಳ ಕಾಲ ಭಾರತ ಮತ್ತು ಏಷ್ಯಾ ಅಥ್ಲೆಟಿಕ್ಸ್‌ನಲ್ಲಿ ಮಿಂಚಿದ್ದ ಅವರು 2000ನೇ ಇಸ್ವಿಯಲ್ಲಿ ಹಲವು ಪದಕಗಳೊಂದಿಗೆ ನಿವೃತ್ತರಾಗಿದ್ದರು. ‘ಪಯ್ಯೋಳಿ ಎಕ್ಸ್‌ಪ್ರೆಸ್‌‘ ಖ್ಯಾತಿಯ ಕೇರಳದ ಉಷಾ ಅವರನ್ನು ಭಾರತೀಯ ಜನತಾ ಪಕ್ಷವು 2022ರಲ್ಲಿ ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನ ಮಾಡಿತ್ತು.

Shwetha M