ಮೊದಲ ಬಾರಿಗೆ ರಾಜ್ಯಸಭಾ ಕಲಾಪದ ಅಧ್ಯಕ್ಷತೆ ವಹಿಸಿಕೊಂಡ ಪಿ.ಟಿ ಉಷಾ

ಮೊದಲ ಬಾರಿಗೆ ರಾಜ್ಯಸಭಾ ಕಲಾಪದ ಅಧ್ಯಕ್ಷತೆ ವಹಿಸಿಕೊಂಡ ಪಿ.ಟಿ ಉಷಾ

ರಾಜ್ಯಸಭೆಯ ಸದಸ್ಯೆಯಾಗಿರುವ ಪಿ.ಟಿ ಉಷಾ ಗುರುವಾರ ಮೊದಲ ಬಾರಿಗೆ ಕಲಾಪದ ಅಧ್ಯಕ್ಷತೆ ವಹಿಸಿಕೊಂಡಿದ್ದಾರೆ. ರಾಜ್ಯಸಭೆ ಸ್ಪೀಕರ್ ಹಾಗೂ ಉಪರಾಷ್ಟ್ರಪತಿ ಜಗದೀಪ್ ದನಕರ್ ಅವರ ಅನುಪಸ್ಥಿತಿಯಲ್ಲಿ ಗುರುವಾರ ಮೊದಲ ಬಾರಿಗೆ ಪಿ.ಟಿ ಉಷಾ ಕಲಾಪದ ಅಧ್ಯಕ್ಷತೆ ವಹಿಸಿದ್ದರು. ಈ ಬಗ್ಗೆ ಸಂತಸ ಹಂಚಿಕೊಂಡಿರುವ ಅವರು ಇದೊಂದು ಮೈಲಿಗಲ್ಲು ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:  ಸುಪ್ರೀಂ ಕೋರ್ಟ್​ಗೆ ಮತ್ತಿಬ್ಬರು ನ್ಯಾಯಾಧೀಶರ ನೇಮಕ – 34 ಸ್ಥಾನಗಳೂ ಭರ್ತಿ..!

ರಾಜ್ಯಸಭೆಯ ಕಲಾಪದ ಅಧ್ಯಕ್ಷತೆ ವಹಿಸಿಕೊಂಡ ನಂತರ ಸೋಶಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡಿರುವ ಪಿ.ಟಿ ಉಷಾ,  ಫ್ರಾಂಕ್ಲಿನ್ ಡಿ. ರೂಸ್‍ವೆಲ್ಟ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಬರೆದುಕೊಂಡಿದ್ದಾರೆ. ‘ದೊಡ್ಡ ಅಧಿಕಾರ ದೊಡ್ಡ ಜವಬ್ದಾರಿಯನ್ನು ಒಳಗೊಂಡಿರುತ್ತದೆ ಎಂದು ನಾನು ಅಧಿಕಾರ ವಹಿಕೊಂಡಾಗಲೇ ತಿಳಿದಿತ್ತು. ಜನ ನನ್ನ ಮೇಲಿಟ್ಟ ನಂಬಿಕೆಯಿಂದ ನಾನು ಈ ಸ್ಥಾನಕ್ಕೇರಲು ಸಾಧ್ಯವಾಗಿದೆ’ ಎಂದು ಬರೆದುಕೊಂಡಿದ್ದಾರೆ.

ಪಿ.ಟಿ ಉಷಾ ಅವರು ಕ್ರೀಡಾ ಕ್ಷೇತ್ರದಲ್ಲಿ ಏಷ್ಯಾ ಹಾಗೂ ಅಂತರಾಷ್ಟ್ರಿಯ ಮಟ್ಟದ ಅನೇಕ ದಾಖಲೆಗಳನ್ನು ಬರೆದಿದ್ದಾರೆ. ಏಷ್ಯನ್ ಕ್ರೀಡಾಕೂಟದಲ್ಲಿ ಪಾಲ್ಗೊಂಡು ನಾಲ್ಕು ಬಂಗಾರದ ಹಾಗೂ ಏಳು ಬೆಳ್ಳಿಯ ಪದಕಗಳನ್ನು ಬಾಚಿಕೊಂಡಿದ್ದಾರೆ.

 

suddiyaana