ಸರ್ಕಾರಿ ಬ್ಯಾಂಕ್‌ ನೌಕರರಿಗೆ ಗುಡ್‌ನ್ಯೂಸ್‌! – ಉದ್ಯೋಗಿಗಳಿಗೆ 2,500 ರೂವರೆಗೆ ದೀಪಾವಳಿ ಗಿಫ್ಟ್!

ಸರ್ಕಾರಿ ಬ್ಯಾಂಕ್‌ ನೌಕರರಿಗೆ ಗುಡ್‌ನ್ಯೂಸ್‌! – ಉದ್ಯೋಗಿಗಳಿಗೆ 2,500 ರೂವರೆಗೆ ದೀಪಾವಳಿ ಗಿಫ್ಟ್!

ದೀಪಾವಳಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ದೇಶದಾದ್ಯಂತ ಸಂಭ್ರಮ ಮನೆಮಾಡಿದೆ. ಜನರು ಹಬ್ಬದ ತಯಾರಿಯಲ್ಲಿ ತೊಡಗಿದ್ದಾರೆ. ಇದೀಗ ದೀಪಾವಳಿ ಹಬ್ಬದ ಹಿನ್ನೆಲೆ ಬ್ಯಾಂಕ್ ನೌಕರರಿಗೆ ಬೊಂಬಾಟ್ ಗಿಫ್ಟ್ ಸಿಗಲಿದೆ.

ಹೌದು, ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಇಂಡಿಯಾ, ಕೆನರಾ ಬ್ಯಾಂಕ್, ಇಂಡಿಯನ್ ಓವರ್ಸೀಸ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್  ಮೊದಲಾದ ಸರ್ಕಾರಿ ಸ್ವಾಮ್ಯದಲ್ಲಿರುವ ಬ್ಯಾಂಕುಗಳಲ್ಲಿ ಸಿಹಿತಿಂಡಿಯ ಜೊತೆಗೆ ಉಡುಗೊರೆಯಾಗಿ ಪ್ರತಿಯೊಬ್ಬ ಉದ್ಯೋಗಿಗೂ 2,500 ರೂವರೆಗೆ ಬೋನಸ್‌  ನೀಡುತ್ತಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ಸುಪ್ರೀಂ ಕೋರ್ಟ್‌ನಿಂದ ಮಹತ್ವದ ಆದೇಶ – ದೇಶದೆಲ್ಲೆಡೆ ಪಟಾಕಿ ನಿಷೇಧ!

ಎಸ್‌ಬಿಐ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಉದ್ಯೋಗಿಗೂ 2,500 ರೂಗಳಷ್ಟು ದೀಪಾವಳಿ ಬೋನಸ್ ಅನ್ನು ಘೋಷಣೆ ಮಾಡಿದೆ. ಸಿಹಿತಿಂಡಿಯ ಜೊತೆಗೆ ಎಲ್ಲಾ ಎಸ್ಬಿಐ ಉದ್ಯೋಗಿಗಳಿಗೂ ಗ್ರೀಟಿಂಗ್ ಕಾರ್ಡ್ ಕೂಡ ನೀಡಲಾಗುತ್ತಿದೆ. ಇದರ ಜೊತೆಗೆ, ಸಿಹಿ ತಿಂಡಿ, ಡ್ರೈಫ್ರೂಟ್ ಇತ್ಯಾದಿ ಖರೀದಿಸಿ ಉದ್ಯೋಗಿಗಳಿಗೆ ವಿತರಿಸುವ ಸಲುವಾಗಿ ಪ್ರತಿಯೊಬ್ಬ ಎಸ್‌ಬಿಐ ಬ್ಯಾಂಕ್ ನೌಕರರಿಗೆ 2,500 ರೂನಂತೆ ಹಣ ಬಿಡುಗಡೆ ಮಾಡಲಾಗಿದೆ. ಇದಲ್ಲದೇ, ದೀಪಾವಳಿ ಹಬ್ಬಕ್ಕೆ ಮುನ್ನ ಸಿಹಿ ಡಬ್ಬಿಗಳನ್ನು ಉದ್ಯೋಗಿಗಳಿಗೆ ಹಂಚಬೇಕೆಂದು ಸೂಚನೆ ನೀಡಲಾಗಿದೆ.

ಇನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಉದ್ಯೋಗಿಗಳಿಗೆ 1,000 ರೂ ಮೌಲ್ಯದ ಸಿಹಿ ತಿಂಡಿಯನ್ನು ದೀಪಾವಳಿ ಗಿಫ್ಟ್ ನೀಡಲು ಯೋಜನೆ ಹಾಕಿಕೊಂಡಿದೆ ಎನ್ನಲಾಗಿದೆ. ಇದರ ಜೊತೆಗೆ ಸರ್ಕಾರಿ ಬ್ಯಾಂಕುಗಳ ಉದ್ಯೋಗಿಗಳಿಗೂ 2,500 ರೂವರೆಗೆ ಹಣವನ್ನು ನೀಡಲಾಗುತ್ತಿದೆ. ನವೆಂಬರ್ 10ರಿಂದ 14ರವರೆಗೆ ಇರುವ ದೀಪಾವಳಿ ಹಬ್ಬಕ್ಕೆ ಮನೆಗೆ ಸಿಹಿತಿಂಡಿ, ಬಟ್ಟೆ ವಗೈರೆ ಖರೀದಿಸಲು ನೆರವಾಗುವ ನಿಟ್ಟಿನಲ್ಲಿ ಹಣ ಬಿಡುಗಡೆ ಮಾಡಲಾಗಿದೆ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ ಪ್ರತಿಯೊಬ್ಬ ಉದ್ಯೋಗಿಗೂ 1,500 ರೂ ಯನ್ನು ದೀಪಾವಳಿ ಹಬ್ಬಕ್ಕೆ ಗಿಫ್ಟ್ ಆಗಿ ನೀಡಲಿದೆ. ಕೆನರಾ ಬ್ಯಾಂಕ್ ಕೂಡ ತನ್ನ ಉದ್ಯೋಗಿಗಳಿಗೆ ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ 2,500 ರೂ ನೀಡಿದ್ದು, ಇಂಡಿಯನ್ ಓವರ್ಸೀಸ್ ಬ್ಯಾಂಕ್‌ನ ಉದ್ಯೋಗಿಗಳಿಗೆ ಹಬ್ಬದ ಸಂಭ್ರಮ ಇಮ್ಮಡಿ ಮಾಡಲು 2,000 ರೂ. ದೀಪಾವಳಿ ಗಿಫ್ಟ್ ನೀಡಲಾಗಿದೆ ಎಂದು ವರದಿಯಾಗಿದೆ.

Shwetha M