PSL ಪಂದ್ಯಗಳಿಗೆ ಬ್ಲಾ*ಸ್ಟ್ ಬೆದರಿಕೆ – ಪಾಕಿಸ್ತಾನದಲ್ಲಿ ನಡೆಯಲ್ಲ ಲೀಗ್?
ಕೈಕೊಟ್ಟ ಬಾಂಗ್ಲಾ.. ವಿದೇಶಿಗರು ವಿತ್ ಡ್ರಾ!

PSL ಪಂದ್ಯಗಳಿಗೆ ಬ್ಲಾ*ಸ್ಟ್ ಬೆದರಿಕೆ – ಪಾಕಿಸ್ತಾನದಲ್ಲಿ ನಡೆಯಲ್ಲ ಲೀಗ್?ಕೈಕೊಟ್ಟ ಬಾಂಗ್ಲಾ.. ವಿದೇಶಿಗರು ವಿತ್ ಡ್ರಾ!

ಪಾಕಿಸ್ತಾನ ಸೂಪರ್ ಲೀಗ್ ಆರಂಭಕ್ಕೆ ಇನ್ನೆರಡೇ ದಿನ ಬಾಕಿ. ಮಾರ್ಚ್ 26ರಿಂದ ಟೂರ್ನಿ ಆರಂಭ ಆಗ್ಬೇಕಿದೆ. ಆದ್ರೆ ಈಗಿರೋ ಕಂಡೀಷನ್ ನೋಡಿದ್ರೆ ಸೀಸನ್ ಸ್ಟಾರ್ಟ್ ಆಗೋ ಮೊದ್ಲೇ ಕ್ಲೋಸ್ ಆಗುತ್ತಾ ಅನ್ನೋ ಚರ್ಚೆ ಶುರುವಾಗಿದೆ. ಯಾಕಂದ್ರೆ ಪ್ಲೇಯರ್​ಗಳಿಗೆ ಪಂದ್ಯಗಳನ್ನ ಬಾಯ್ಕಾಟ್ ಮಾಡುವಂತೆ ಓಪನ್ ವಾರ್ನಿಂಗ್ ಕೊಟ್ಟಿದ್ದಾರೆ. ಬೆದರಿಕೆ ಮೆಸೇಜ್​ಗಳು ಪಾಸ್ ಆಗ್ತಿದೆ. ಪಾಕಿಸ್ತಾನದಲ್ಲಿ 11ನೇ ಸೀಸನ್ ಪಿಎಸ್​ಎಲ್​ಗೆ ಸಿದ್ಧತೆ ಮಾಡಿಕೊಂಡಿರೋ ಪಿಸಿಬಿ ಮತ್ತೆ ಶೇಪ್​ಔಟ್ ಆಗೋ ಟೆನ್ಷನ್​ನಲ್ಲಿದೆ. ಈಗಾಗ್ಲೇ ಸೆಕ್ಯೂರಿಟಿ ಇಶ್ಯೂ, ಫೈನಾನ್ಶಿಯಲ್ ಪ್ರಾಬ್ಲಂ, ಯುದ್ಧದ ಎಫೆಕ್ಟ್​ನಿಂದಾಗಿ ಲಾಹೋರ್ ಮತ್ತು ಕರಾಚಿಯಲ್ಲಿ ಮಾತ್ರವೇ ಅದೂ ಕೂಡ ಅಭಿಮಾನಿಗಳೇ ಇಲ್ಲದೆ ಪಂದ್ಯಗಳನ್ನ ನಡೆಸ್ಬೇಕು ಅನ್ಕೊಂಡಿದ್ದಾರೆ. ಆದ್ರೆ ಈಗ ಪಂದ್ಯಗಳನ್ನ ನಡೆಸೋಕೆ ಆಟಗಾರರೇ ಇರೋದಿಲ್ವಾ ಅನ್ನೋ ಅನುಮಾನ ಶುರುವಾಗಿದೆ.

ಇದನ್ನೂ ಓದಿ : ಚೆನ್ನೈ ತಂಡದಲ್ಲಿ ಸಂಜುಗೆ ಹೊಸ ಅನುಭವ – ಚೇಟಾ ಕೈ ಖಾಲಿ.. ಖಾಲಿ.. ಹೇಗಿರಲಿದೆ ಫೀಲ್ಡಿಂಗ್?

ವಿದೇಶಿ ಆಟಗಾರರು ಲೀಗ್ ನಲ್ಲಿ ಭಾಗಿಯಾಗದಂತೆ ಎಚ್ಚರಿಕೆ!

ಆಲ್ರೆಡಿ ಐಪಿಎಲ್, ಭದ್ರತೆ ಇಶ್ಯೂ ಅನ್ಕೊಂಡು ಸಾಕಷ್ಟು ವಿದೇಶಿ ಆಟಗಾರರು ಪಾಕಿಸ್ತಾನ ಸೂಪರ್ ಲೀಗ್​ಗೆ ಗುಡ್ ಬೈ ಹೇಳಿದ್ದಾರೆ. ಇರೋರನ್ನೇ ಇಟ್ಕೊಂಡು ಲೀಗ್ ಆರಂಭ ಮಾಡೋಣ ಅಂದ್ರೆ ಪಾಕಿಸ್ತಾನಕ್ಕೆ ಅದೂ ಆಗಲ್ಲ.  ಯುದ್ಧದಿಂದಾಗಿ ಪಾಕ್​ನಲ್ಲಿ ಅನಿಲ ಮತ್ತು ಇಂಧನ ಸಮಸ್ಯೆ ಒಂದ್ಕಡೆ, ಇನ್ನೊಂದ್ಕಡೆ ಅಫ್ಘಾನಿಸ್ತಾನ ದಾಳಿ ಮಾಡೋ ಭಯ ಕಾಡ್ತಿದೆ. ಇದು ಸಾಲ್ದು ಅಂತಾ ಪಾಕಿಸ್ತಾನದ ಉಗ್ರಗಾಮಿ ಸಂಘಟನೆಯೊಂದು ವಿದೇಶಿ ಆಟಗಾರರು ಈ ಲೀಗ್​ನಲ್ಲಿ ಪಾಲ್ಗೊಳ್ಳದಂತೆ ಎಚ್ಚರಿಕೆ ನೀಡಿದೆ. ಅಷ್ಟೇ ಅಲ್ಲದೆ ಲೀಗ್ ನಡೆಯುವ ವೇಳೆ ವಿದೇಶಿ ಆಟಗಾರರಿಗೆ ಪ್ರಾಣಾಪಾಯ ಎದುರಾದರೆ ಅದಕ್ಕೆ ನಾವು ಜವಾಬ್ದಾರರಲ್ಲ ಎಂಬ ಬೆದರಿಕೆಯೊಡ್ಡಿದೆ. ಜಗತ್ತಿನ ಎಲ್ಲಾ ಕ್ರಿಕೆಟ್ ಮಂಡಳಿಗಳು ತಮ್ಮ ಆಟಗಾರರನ್ನು ಪಾಕಿಸ್ತಾನಕ್ಕೆ ಕಳುಹಿಸದಂತೆ ನಾವು ಸಲಹೆ ನೀಡುತ್ತೇವೆ. ನಮ್ಮ ಎಚ್ಚರಿಕೆಯನ್ನೂ  ಮೀರಿ ವಿದೇಶಿ ಆಟಗಾರರು ಪಾಕಿಸ್ತಾನಕ್ಕೆ ಬಂದು ಪಂದ್ಯಾವಳಿಯಲ್ಲಿ ಭಾಗವಹಿಸಿದರೆ, ಅವರಿಗೆ ಇಲ್ಲಿ ಏನಾದರೂ ಆದ್ರೆ ನಾವು ಜವಾಬ್ದಾರರಾಗಿರುವುದಿಲ್ಲ. ನಾವು ಈಗಾಗಲೇ ಎಚ್ಚರಿಕೆ ನೀಡಿದ್ದೇವೆ. ಇದರ ಹೊರತಾಗಿಯೂ ಆಟಗಾರರು ಪಂದ್ಯಾವಳಿಯಿಂದ ಹಿಂದೆ ಸರಿಯದಿದ್ದರೆ, ಪಂದ್ಯಗಳು ನಡೆಯದಂತೆ ತಡೆಯಲು ನಾವು ಏನು ಬೇಕಾದರೂ ಮಾಡುತ್ತೇವೆ. ಆಟಗಾರರು ಮೈದಾನಕ್ಕೆ ಪ್ರವೇಶಿಸುವುದನ್ನು ತಡೆಯಲು ನಾವು ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ ಎಂದು ವಾರ್ನ್ ಮಾಡಿದ್ದಾರೆ. ಸೋ ಅಲ್ಲಿಗೆ ಫಾರಿನ್ ಪ್ಲೇಯರ್ಸ್ ಆಡ್ಬೇಡಿ ಅಂತಾ ಡೈರೆಕ್ಟ್ ಆಗಿ ವಾರ್ನಿಂಗ್ ಕೊಟ್ಟಿದ್ದಾರೆ.

ಐಪಿಎಲ್ ಗಾಗಿ ಪಿಎಸ್ ಎಲ್ ಗೆ ಗುಡ್ ಬೈ ಹೇಳಿದ ಸ್ಟಾರ್ಸ್!

ಇನ್ನು ಈ ವರ್ಷದ PSL ನಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ ಮತ್ತು ಆಡಮ್ ಜಂಪಾ ಸೇರಿದಂತೆ ಸಾಕಷ್ಟು ಅಂತರರಾಷ್ಟ್ರೀಯ ಆಟಗಾರರು ಭಾರವಹಿಸ್ತಾರೆ. ಇಂಗ್ಲೆಂಡ್‌ನ ಮೊಯಿನ್ ಅಲಿ ಮತ್ತು ನ್ಯೂಜಿಲೆಂಡ್‌ನ ಡೆವೊನ್ ಕಾನ್ವೇ ಕೂಡ ಇದ್ದಾರೆ. ಹೀಗಿದ್ರೂ ಕೆಲ ಆಟಗಾರರು ಟೂರ್ನಿ ಆರಂಭಕ್ಕೂ ಮೊದ್ಲೇ ಕೈಕೊಟ್ಟಿದ್ದಾರೆ. ಅದ್ರಲ್ಲೂ ಪಿಎಸ್‌ಎಲ್‌ಗೆ ಅತಿದೊಡ್ಡ ಪೆಟ್ಟು ಬಿದ್ದಿರುವುದು ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ. ಐಪಿಎಲ್‌ನಲ್ಲಿ ಕೆಲವು ಆಟಗಾರರು ಗಾಯಗೊಂಡು ಹೊರಬಿದ್ದಿರುವುದರಿಂದ, ಅಲ್ಲಿ ಬದಲಿ ಆಟಗಾರರಾಗಿ ಅವಕಾಶ ಪಡೆಯಲು ಪಿಎಸ್ಎಲ್ ಒಪ್ಪಂದ ಮಾಡಿಕೊಂಡಿದ್ದ ವಿದೇಶಿ ಆಟಗಾರರು ಈಗ ಪಾಕಿಸ್ತಾನದಿಂದ ಹಿಂದೆ ಸರಿಯುತ್ತಿದ್ದಾರೆ. ಐಪಿಎಲ್​​​ನಲ್ಲಿ ರಿಪ್ಲೇಸ್​ಮೆಂಟ್​ ಪ್ಲೇಯರ್​ ಆಗಿ​​​ ಅವಕಾಶ ಸಿಗ್ತಿದ್ದಂತೆ ಪಿಎಸ್​​ಎಲ್​​ನ ಕಾಂಟ್ರ್ಯಾಕ್ಟ್​ ಬ್ರೇಕ್​ ಮಾಡಿ ಐಪಿಎಲ್​ ಅಖಾಡಕ್ಕೆ ಧುಮುಕಿದ್ದಾರೆ. ಬ್ಲೆಸಿಂಗ್ ಮುಝರಬಾನಿ, ದಶುನ್​ ಶನಕ, ಗುದಕೇಶ್​ ಮೋಡಿ ಸೇರಿ ಒಟ್ಟು 9 ಮಂದಿ ಆಟಗಾರರು ಐಪಿಎಲ್​ಗೆ ಎಂಟ್ರಿ ಕೊಟ್ಟಿದ್ದಾರೆ. ಇತ್ತ ಬಾಂಗ್ಲಾದೇಶ ಕೂಡ ಕೈಕೊಡೋ ಎಲ್ಲಾ ಚಾನ್ಸಸ್ ಇದೆ.

ಪಿಎಸ್ ಎಲ್ ಬಿಟ್ಟು ಹೊರ ಬರಲು ಬಾಂಗ್ಲಾ ಪ್ಲೇಯರ್ಸ್ ರೆಡಿ!

ಇನ್ನು ವಿಶ್ವಕಪ್ ಟೈಮಲ್ಲಿ ಕುಚಿಕು ಕುಚಿಕು ಅನ್ಕೊಂಡಿದ್ದ ಬಾಂಗ್ಲಾ ಕೂಡ ಪಿಎಸ್​ಎಲ್​​ಗೆ ಕೈಕೊಡೋದು ಪಕ್ಕಾ ಆಗಿದೆ. ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ಪಾಕಿಸ್ತಾನ ಸೂಪರ್ ಲೀಗ್ ಪಂದ್ಯಾವಳಿಯಿಂದ ತನ್ನ ಆಟಗಾರರನ್ನು ದೂರವಿಡುವ ಬಗ್ಗೆ ಬಿಸಿಬಿ ಪ್ಲ್ಯಾನ್ ಮಾಡಿದೆ.  2026ರ ಪಿಎಸ್‌ಎಲ್ ಋತುವಿನಲ್ಲಿ ಭಾಗವಹಿಸಲು ಮುಸ್ತಾಫಿಜುರ್ ರೆಹಮಾನ್, ಪರ್ವೇಜ್ ಹೊಸೈನ್, ಶೋರಿಫುಲ್ ಇಸ್ಲಾಂ, ನಹಿದ್ ರಾಣಾ, ತಂಜಿದ್ ಹಸನ್ ತಮೀಮ್ ಮತ್ತು ರಿಷಾದ್ ಹೊಸೈನ್ ಸೇರಿದಂತೆ ಬಾಂಗ್ಲಾದೇಶಿ ಆಟಗಾರರಿಗೆ ಪಿಎಸ್​ಎಲ್ ಆಡುವುದಕ್ಕಾಗಿ ಬಿಸಿಬಿ ಈ ಹಿಂದೆ ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು ನೀಡಿತ್ತು. ಆದ್ರೀಗ ಥ್ರೆಟ್ ಇರೋದ್ರಿಂದ ಬಾಂಗ್ಲಾದೇಶ ಸರ್ಕಾರ ಈಗ ತನ್ನ ಆಟಗಾರರನ್ನು ಪಾಕಿಸ್ತಾನಕ್ಕೆ ಕಳುಹಿಸಲು ಹಿಂದೆ ಮುಂದೆ ನೋಡ್ತಿದೆ. ಬಾಂಗ್ಲಾದೇಶದ ಕ್ರೀಡಾ ಸಚಿವ ಅಮೀನುಲ್ ಹಕ್ ಈ ಬಗ್ಗೆ ಮಾತ್ನಾಡಿದ್ದಾರೆ. ನಮ್ಮ ಆಟಗಾರರ ಸುರಕ್ಷತೆಯ ಬಗ್ಗೆ ಸ್ವಲ್ಪ ಸಂದೇಹ ಬಂದರೂ, ನಾವು ಅವರನ್ನು ಪಾಕಿಸ್ತಾನಕ್ಕೆ ಕಳುಹಿಸುವುದಿಲ್ಲ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಮೊದಲು ಪರಿಸ್ಥಿತಿಯ ಸಮಗ್ರ ವಿಶ್ಲೇಷಣೆ ನಡೆಸಿ ವರದಿಯನ್ನು ಸಲ್ಲಿಸಬೇಕು. ನಂತರ, ರಾಷ್ಟ್ರೀಯ ಭದ್ರತಾ ಸಂಸ್ಥೆಗಳು ನೀಡುವ ಸಲಹೆಯ ಆಧಾರದ ಮೇಲೆ ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದಿದ್ದಾರೆ. ಅಲ್ದೇ ಸಾಕಷ್ಟು ವಿದೇಶಿ ಪ್ಲೇಯರ್ಸ್ ವಿತ್ ಡ್ರಾ ಮಅಡಿಕೊಳ್ಳೋಕೆ ಮುಂದಾಗಿದ್ದಾರೆ.

Shantha Kumari