ದಾಸನಿಗೆ ಜೈಲಿನಲ್ಲಿ ಸಾಲು ಸಾಲು ಸಂಕಷ್ಟ! – ಕೋರ್ಟ್ ಆದೇಶವಿದ್ರೂ ದರ್ಶನ್‌ಗೆ ಮನೆಯ ಬ್ಲಾಂಕೆಟ್ ಸಿಗಲ್ಲ!

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಪಾಲಾಗಿರುವ ನಟ ದರ್ಶನ್‌ಗೆ ನೆಮ್ಮದಿಯೇ ಇಲ್ಲದಂತಾಗಿದೆ. ಜೈಲಿನಲ್ಲಿ ದರ್ಶನ್‌ನನ್ನ ಸಾಮಾನ್ಯ ಖೈದಿಯಂತೆ ನಡೆಸಿಕೊಳ್ಳಲಾಗ್ತಿದೆ. ಇತ್ತೀಚೆಗೆ ದರ್ಶನ್ ಮನೆಯಿಂದ ಬ್ಲಾಂಕೆಟ್ ಕೇಳಿದ್ದರು. ಆದ್ರೀಗ ದರ್ಶನ್ ಗೆ ಬ್ಲಾಂಕೆಟ್ ಸಿಗೋದು ಡೌಟ್ ಅಂತ ಹೇಳಲಾಗ್ತಿದೆ.
ಬೆಂಗಳೂರಿನಲ್ಲಿ ಮೈಕೊರೆಯುವ ಚಳಿಯಿಂದೆ. ಈ ಹಿನ್ನೆಲೆ ಮನೆಯಿಂದ ನೀಡಿರುವ ಬ್ಲಾಂಕೆಟ್ ಕೊಡಿಸುವಂತೆ ದರ್ಶನ್ ಕೋರ್ಟ್ ಬಳಿ ಮನೆ ಮಾಡಿದ್ರು. ಕೋರ್ಟ್ ಆದೇಶದಂತೆ ಬ್ಲಾಂಕೆಟ್ ಜೈಲಿಗೆ ತಲುಪಿಸಲಾಗಿದೆ. ಆದ್ರೆ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಡಿಜಿಪಿ ಅಲೋಕ್ ಕುಮಾರ್ ತಮ್ಮ ಅಧಿಕಾರ ಬಳಸಿಕೊಂಡು ಜೈಲಿನ ನಿಯಮಗಳ ಪ್ರಕಾರವೇ ಎಲ್ಲರಿಗೂ ಒಂದೇ ಮಾದರಿಯ ಬ್ಲಾಂಕೆಟ್ ನೀಡಲು ಮುಂದಾಗಿದ್ದಾರೆ. ಚಳಿಗಾಲ, ಮಳೆಗಾಲ ಇವೆಲ್ಲವಕ್ಕೂ ಹೊಂದಾಣಿಕೆ ಆಗುವಂತಹ ಬ್ಲಾಂಕೆಟ್ ವಿತರಣೆಗೆ ಆದೇಶ ಹೊರಡಿಸಲು ತಯಾರಿ ನಡೆಸಲಾಗಿದೆ. ಈ ಆದೇಶ ಹೊರಡಿಸಿದರೆ ದರ್ಶನ್ ಬ್ಲಾಂಕೆಟ್‌ಗೆ ಕುತ್ತು ಬರುವ ಸಾಧ್ಯತೆ ಇದೆ.
ಇನ್ನು ಜೈಲಿನಲ್ಲಿ ಒಳ್ಳೆಯ ಊಟ ಇಲ್ಲ, ಇದರಿಂದ ಅನಾರೋಗ್ಯ ಉಂಟಾಗುತ್ತಿದೆ. ಹೀಗಾಗಿ ಮನೆಯೂಟ ಬೇಕೆಂದು ಆರೋಪಿ ಪವಿತ್ರ ಗೌಡ ಮನವಿ ಮಾಡಿದ್ದರು. ಜೊತೆಗೆ ನಾಗರಾಜು, ಲಕ್ಷ್ಮಣ್ ಕೂಡ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಮೂವರಿಗೆ ದಿನಕ್ಕೊಂದು ಬಾರಿ ಮನೆಯೂಟ ನೀಡಲು ಅವಕಾಶ ನೀಡಿತ್ತು. ಆದ್ರೆ ಪವಿತ್ರಾಗೆ ಮನೆ ಊಟ ನೀಡಲು ಕೋರ್ಟ್ ಅನುಮತಿ ನೀಡಿದ್ರೂ, ಜೈಲಾಧಿಕಾರಿಗಳು ಮನೆ ಊಟ ನೀಡದಿರಲು ತೀರ್ಮಾನಿಸಿದ್ದಾರೆ. ಜೈಲಿನಲ್ಲಿ ವಿಚಾರಣಾಧೀನ ಕೈದಿಗಳಿಗೆ ಈ ರೀತಿಯಲ್ಲಿ ಮನೆ ಊಟವನ್ನು ನೀಡಿದರೆ ಮುಂದೆ ಎಲ್ಲಾ ಆರೋಪಿಗಳು ಇದೇ ಆದೇಶದ ಮೇಲೆ ಮನೆ ಊಟವನ್ನು ಕೇಳುವ ಸಾಧ್ಯತೆ ಇರುವುದರಿಂದ ಮನೆ ಊಟ ನೀಡದೇ ಇರಲು ಜೈಲಾಧಿಕಾರಿಗಳು ಮುಂದಾಗಿದ್ದಾರೆ.
ಮನೆ ಊಟ ಬಂದರೆ ಪರಿಶೀಲನೆ ಮಾಡಿದ ಬಳಿಕ ಜೈಲಿನ ಒಳಗೆ ಕೊಡಬೇಕಾಗುತ್ತದೆ. ಅದಕ್ಕಾಗಿಯೇ ಪ್ರತ್ಯೇಕವಾಗಿ ತಂಡ ಬೇಕಾಗುತ್ತದೆ. ಪರಪ್ಪನ ಅಗ್ರಹಾರದಲ್ಲಿ ಇರುವ 3 ಸಾವಿರ ಆರೋಪಿಗಳು ಇದೇ ಆದೇಶದ ಮೇಲೆ ಅರ್ಜಿ ಹಾಕಿದ್ದರೆ ಕಷ್ಟ ಆಗುತ್ತದೆ. ಹೀಗಾಗಿ ಮನೆ ಊಟ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಲು ಕಾರಾಗೃಹ ಇಲಾಖೆ ನಿರ್ಧಾರ ಮಾಡಿದೆ.

ನೋಡಿರಿ

