ಶಾರುಖ್ ಖಾನ್ ಮನೆ ಮುಂದೆ ಭಾರಿ ಪ್ರತಿಭಟನೆ – ನಟನ ಮನೆಗೆ ಪೊಲೀಸರಿಂದ ಹೆಚ್ಚಿನ ಭದ್ರತೆ

ಶಾರುಖ್ ಖಾನ್ ಮನೆ ಮುಂದೆ ಭಾರಿ ಪ್ರತಿಭಟನೆ – ನಟನ ಮನೆಗೆ ಪೊಲೀಸರಿಂದ ಹೆಚ್ಚಿನ ಭದ್ರತೆ

ಬಾಲಿವುಡ್‌ ನಟ ಶಾರುಖ್‌ ಖಾನ್‌ ಅವರ ಮನೆ ಮುಂದೆ ಭಾರಿ ಪ್ರತಿಭಟನೆ ನಡೆದ ಬೆನ್ನಲ್ಲೇ ಹೆಚ್ಚಿನ ಭದ್ರತೆ ನೀಡಲಾಗಿದೆ. ಮುಂಬೈನಲ್ಲಿರುವ ಮನ್ನತ್ ನಿವಾಸಕ್ಕೆ ಮುಂಬೈ ಪೊಲೀಸರು ಹೆಚ್ಚಿನ ಭದ್ರತೆ ನೀಡಲಾಗಿದ್ದು, ಮನೆ ಮುಂದೆ ಜನರು ಜಮಾಯಿಸಬಾರದು ಎಂದು ಸೂಚನೆ ನೀಡಲಾಗಿದೆ.

ಶಾರುಖ್‌ ಖಾನ್‌ ಅವರು ಇತ್ತೀಚೆಗೆ ಅನೇಕ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಆನ್‌ಲೈನ್‌ ಆಟಗಳ ಜಾಹಿರಾತುಗಳನ್ನು ಒಪ್ಪಿಕೊಂಡಿದ್ದಾರೆ. ಆ ಆಟಗಳನ್ನು ಆಡಿದ ಹಲವರ ಜೀವನವೇ ಸರ್ವನಾಶವಾಗಿದೆ. ಇಂತಹ ಜಾಹೀರಾತುಗಳನ್ನು ಒಪ್ಪಿಕೊಳ್ಳಬಾರದು ಎಂಬ ಆಗ್ರಹ ಕೇಳಿಬಂದಿದೆ. ಈ ಹಿನ್ನೆಲೆ ಅನ್ ಟಚ್ ಯೂತ್ ಫೆಡರೇಷನ್ ಶಾರುಖ್ ಖಾನ್ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಶಾರುಖ್ ಅವರು ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳದೇ ತಮ್ಮ ಸಿನಿಮಾದ ಪ್ರಮೋಷನ್ ಮಾಡುವಲ್ಲಿ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ: ಬಾಕ್ಸಾಫೀಸ್ ನಲ್ಲಿ ₹300 ಕೋಟಿ ಬಾಚಿಕೊಂಡ ‘ಗದರ್ 2’ – ಸನ್ನಿ ಡಿಯೋಲ್ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್

ಅನ್ ಟಚ್ ಯೂತ್ ಫೆಡರೇಷನ್ ನ ಅಧ್ಯಕ್ಷ ಕೃಷ್ಣ ಚಂದ್ರ ಅಡಾಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಸಾಕಷ್ಟು ಜನರು ಈ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿಯೇ ಶಾರುಖ್ ಮನೆಗೆ ಭದ್ರತೆ ನೀಡಲಾಗಿದೆ. ಹೋರಾಟಗಾರರ ಮನವೊಲಿಸುವ ಪ್ರಯತ್ನವನ್ನೂ ಮಾಡಲಾಗುತ್ತಿದೆ.

ಶಾರುಖ್ ನಟಿಸಿ, ನಿರ್ಮಾಣ ಮಾಡುತ್ತಿರುವ ಜವಾನ ಸಿನಿಮಾದ ಪ್ರಮೋಷನ್ ಭರ್ಜರಿಯಾಗಿ ನಡೆಯುತ್ತಿದೆ. ಶಾರುಖ್ ಮತ್ತು ಟೀಮ್ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಅತ್ತ ಶಾರುಖ್ ನಾನಾ ರಾಜ್ಯಗಳಿಗೆ ಭೇಟಿ ನೀಡಿ ಸಿನಿಮಾ ಪ್ರಚಾರ ಮಾಡುತ್ತಿದ್ದರೆ, ಇತ್ತ ಮನೆಯ ಮುಂದೆ ಪ್ರತಿಭಟನೆ ನಡೆಯುತ್ತಿದೆ.

suddiyaana