ಸಿಕ್ಕೇ ಬಿಡ್ತು ಚೀಪ್ ಚೀಪ್ ಸಾಂಗ್ ಮೀನಿಂಗ್! -ಫ್ಯಾನ್ಸ್ ತಲೆಗೆ ಹುಳ ಬಿಟ್ಟ ಉಪ್ಪಿ!
ಉಪ್ಪಿ ಸಾರ್ ಮತ್ತೊಂದು ಹಿಟ್ ಸಾಂಗ್ ಮೂಲಕ ಫ್ಯಾನ್ಸ್‌ಗೆ ಕಿಕ್ಕೇರಿಸಿದ್ದಾರೆ.. ಆದ್ರೆ ಮತ್ತದೇ ವರಸೆ ಇಲ್ಲಿದೆ.. ಏನ್ ಸಾಂಗ್ ಗುರೂ ಅಂತ ಹೇಳ್ತಿರುವವರು ಕೂಡ ತಲೆಗೆ ಹುಳ ಬಿಟ್ಕೊಂಡು ಯಾವುದು ಚೀಪ್.. ಅಂತ ಯೋಚಿಸುವಂತಾಗಿದೆ.. ಅಷ್ಟಕ್ಕೂ ಈ ಸಾಂಗ್ ಮೀನಿಂಗ್ ಏನು ಅಂತಾ ತಲೆಕೆಡಿಸಿಕೊಂಡಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ ಈಗ ಎಲ್ಲಾ ಚೀಪ್ ಚೀಪ್ ಅಂತಿದ್ದಾರೆ.. ಉಪ್ಪಿಗಿಂತ ರುಚಿ ಬೇರೆಯಿಲ್ಲ.. ಒಪ್ಪಿಕೊಂಡೋರು ದಡ್ಡರಲ್ಲ ಅಂತಾ ಇಪ್ಪತ್ತೈದು ವರ್ಷಕ್ಕೂ ಮುಂಚೆಯೇ, ಉಪೇಂದ್ರ ಅವರು ಹೇಳಿರೋದ್ರಿಂದ, ಈಗ ಉಪ್ಪಿ ಎಲ್ಲಾ ಚೀಪ್ ಚೀಪ್ ಅಂತಾ ಹೇಳ್ತಿದ್ರೆ, ಎಲ್ಲರೂ ಒಪ್ಪಿಕೊಳ್ಳಲೇಬೇಕು.. ಲಹರಿ ಫಿಲಂಸ್ ಬಿಡುಗಡೆ ಮಾಡಿರುವ, ಯುಐ ಸಿನಿಮಾದ ಎಲ್ಲಾ ಚೀಪ್‌ಚೀಪ್ ಸಾಂಗ್ ಈಗಾಗಲೇ ಸಿಕ್ಕಾಪಟ್ಟೆ ವೈರಲ್ ಆಗಿದೆ.. ಈ ಹಾಡು ಹಿಟ್ ಆಗಿದ್ದಕ್ಕಿಂತಲೂ, ಅಭಿಮಾನಿಗಳ ತಲೆಗೆ ಕಿಕ್ ಕೊಟ್ಟಿರೋದೇ ಹೆಚ್ಚು.
ಇದನ್ನೂ ಓದಿ: ಕೋಲ, ನೇಮೋತ್ಸವದ ರೀತಿ ಬಣ್ಣ ಹಚ್ಚಿ ಸಿನಿಮಾ, ಧಾರಾವಾಹಿಯಲ್ಲಿ ಅನುಕರಣೆ – ಕರಾವಳಿ ಭಾಗದ ದೈವಾರಾಧಕರಿಂದ ಹೋರಾಟ
ಯೂಟ್ಯೂಬ್ ನಲ್ಲಿ ಅಲೆಯೆಬ್ಬಿಸಿರುವ ಎಲ್ಲಾ ಚೀಪ್ ಚೀಪ್ ಹಾಡಿನ ಕಾಮೆಂಟ್ ನೋಡಿದ್ರೆನೆ ಫ್ಯಾನ್ಸ್ ಯಾವ ಸ್ವರೂಪದಲ್ಲಿ ತಲೆ ಕೆಡಿಸಿಕೊಂಡಿದ್ದಾರೆ ಗೊತ್ತಾಗುತ್ತೆ.. ಕೆಲವ್ರು ಉಪ್ಪಿಸಾರ್ ನೀವು ಸೂಪರ್ ಬಿಡಿ ಅಂತ ಹೊಗಳ್ತಿದ್ರೆ ಇನ್ನು ಕೆಲವರು..”ಎಲ್ರೂ ಮಾಡೋದನ್ನ ಉಪೇಂದ್ರ ಮಾಡಲ್ಲ..ಉಪೇಂದ್ರ ಮಾಡೋದನ್ನ ಯಾರೂ ಮಾಡಲ್ಲ. ಬುದ್ದಿವಂತನ ಮಾಯಾ ಪ್ರಪಂಚ”..ಅಂತಿದ್ದಾರೆ. ಇನ್ನೊಬ್ರೂ “ನಾವು ಹೇಗೆ ಥಿಂಕ್ ಮಾಡ್ತೀವಿ ಅನ್ನೋದರ ಮೇಲೆ ಯಾರು ಚೀಪ್ ಅನ್ನೋದು ಗೊತ್ತಾಗತ್ತೆ.. ಸೂಪರ್ ಸ್ಟಾರ್ ಉಪ್ಪಿ ಸರ್”..ಅಂದ್ರೆ ಮತ್ತೆ ಕೆಲವರು “ಉಪ್ಪಿ ಸರ್ ನಿಮ್ಮ ಸಾಹಿತ್ಯದಿಂದ ನೋಡೋರಿಗೆ ಮತ್ತೆ ಕುತೂಹಲ ಜಾಸ್ತಿ ಆಯ್ತು. ಯಾಕೆಂದರೆ ಏನ್ ಚಿಕ್ಕದು ಏನ್ ದೊಡ್ಡದು ಅಂತ ಮೂವೀ ನೋಡೇ ತಿಳ್ಕೊಬೇಕು ಅನ್ಸುತ್ತೆ..ಅಂದಿದ್ದಾರೆ.. ಇನ್ನೊಬ್ಬ ಅಭಿಮಾನಿ “ವಿಶ್ವದ 17ನೇ ಅತ್ಯದ್ಭುತ ನಿರ್ದೇಶಕ.. ಉಪ್ಪಿ ಡೈರೆಕ್ಷನ್ ಯಾವತ್ತೂ ನಿರಾಸೆಗೊಳಿಸಲ್ಲ.. ರವಿ ಕಾಣದ್ದನ್ನು.. ಕವಿ ಕಂಡ.. ಕವಿ ಕಾಣದ್ದನ್ನು ಉಪೇಂದ್ರ ಕಂಡ.. ಉಪ್ಪಿ ನಡೆದದ್ದೆ ಹಾದಿ”.. ಅಂತಾ ಹೊಗಳಿದ್ದಾರೆ.. ಚೀಪ್ ಸಾಂಗ್ ಕೇಳ್ತಿದ್ರೆ ನಗು ಬರ್ತಿದೆ. ಆದ್ರೆ ಟ್ರೆಂಡಿಂಗ್ ಆಗೊದ್ರಲ್ಲಿ ಡೌಟ್ ಇಲ್ಲಾ. ಉಪ್ಪಿ ಬಾಸ್ ಕೈಲಿ ಮಾತ್ರಾ ಸಾಧ್ಯ” ಅಂತಾ ಉಪೇಂದ್ರ ಅವರನ್ನು ಬಿಟ್ರೆ ಈ ಹಾಡು ಅರ್ಥ ಆಗಿದ್ದು ತಮಗೇನೇ ಎಂಬ ರೀತಿಯಲ್ಲಿ ಬಿಲ್ಡಪ್ ಕೊಡ್ತಿದ್ದಾರೆ.
ಇಲ್ಲಿ ಇರೋದೇ 48 ಸೆಕೆಂಡ್ ಗಳ ಹಾಡಿನ ಸಣ್ಣ ಕ್ಲಿಪಿಂಗ್ ಮಾತ್ರ. ಹೀಗಿರುವಾಗ ಇಲ್ಲಿ ಏನು ಅರ್ಥ ಮಾಡಿಕೊಳ್ಳೋಕೆ ಸಾಧ್ಯ ಅನ್ನೋ ಪ್ರಶ್ನೆಯೂ ಇದೆ.. ಹಾಗಿದ್ದರೂ ಯು ಮತ್ತು ಐ ನಡುವೆ ಅಂದ್ರೆ ನೀನು ಮತ್ತು ನಾನು ನಡುವೆ ಯಾರದು ದೊಡ್ಡದು ಯಾರದು ಚಿಕ್ಕದು ಎಂಬ ರೀತಿಯಲ್ಲಿ ನಡೆಯೋ ತಿಕ್ಕಾಟವನ್ನೇ ಉಪೇಂದ್ರ ಅವರು ಎಲ್ಲಾ ಚೀಪ್ ಚೀಪ್ ಅಂತ ಗೇಲಿ ಮಾಡುವಂತಿದೆ.. ಹಾಗಿದ್ದರೂ ಉಪೇಂದ್ರ ಅವರ ಇಂತಹ ಹಾಡುಗಳು ಅಭಿಮಾನಿಗಳಿಗೆ ಪೂರ್ತಿಯಾಗಿ ಅರ್ಥ ಆಗೋಕೆ ಎಷ್ಟು ವರ್ಷ ಬೇಕೋ.. ಈ ಹಾಡನ್ನ ರೀಲ್ಸ್ ನಲ್ಲಿ ಹೇಗೆಲ್ಲ ಬಳಸ್ತಾರೋ ಕಾದುನೋಡಬೇಕು.