ಕೆನಡಾದ ಹಿಂದೂ ದೇಗುಲದ ಮೇಲೆ ವಿಧ್ವಂಸಕ ಬರಹ – ದುಷ್ಕೃತ್ಯದ ಹಿಂದೆ ಯಾರ ಕೈವಾಡ..?

ಕೆನಡಾದ ಹಿಂದೂ ದೇಗುಲದ ಮೇಲೆ ವಿಧ್ವಂಸಕ ಬರಹ – ದುಷ್ಕೃತ್ಯದ ಹಿಂದೆ ಯಾರ ಕೈವಾಡ..?

ಕೆನಡಾದಲ್ಲಿ ಮತ್ತೆ ಹಿಂದೂ ದೇವಾಲಯವನ್ನ ಟಾರ್ಗೆಟ್ ಮಾಡಿ ದಾಳಿ ನಡೆಸಲಾಗಿದೆ. ಬ್ರಾಂಪ್ಟನ್​ನ ಜನಪ್ರಿಯ ದೇವಾಲಯದ ಮೇಲೆ ಹಿಂದೂ ವಿರೋಧಿ, ಭಾರತ ವಿರೋಧಿ ಘೋಷಣೆಗಳನ್ನು ಬರೆಯಲಾಗಿದೆ.

ಇದನ್ನೂ ಓದಿ : ಕಾರು ಚಲಿಸುವಾಗಲೇ ನಾಲ್ವರಿಂದ ಫೈರಿಂಗ್ – ಅಮೆರಿಕದಲ್ಲಿ ಆಟಿಕೆಯ ವಸ್ತುವಾಯ್ತಾ ಪಿಸ್ತೂಲ್..?

ಬ್ರಾಂಪ್ಟನ್​ನ ಜನಪ್ರಿಯ ಗೌರಿಶಂಕರ ದೇವಸ್ಥಾನದಲ್ಲಿ ಈ ವಿಧ್ವಂಸಕ ಕೃತ್ಯ ನಡೆದಿದೆ. ಈ ಘಟನೆಯನ್ನ ಟೊರೊಂಟೊದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಖಂಡಿಸಿದ್ದಾರೆ. ಇದು ಭಾರತೀಯ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ. ದೇವಾಲಯಕ್ಕೆ ಹಾನಿ ಮಾಡಿದ ಕೃತ್ಯ ಕೆನಡಾದಲ್ಲಿರುವ ಭಾರತೀಯ ಸಮುದಾಯಗಳ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಹೇಳಿದ್ದಾರೆ. ಹಾಗೇ ಭಾರತೀಯ ಪರಂಪರೆಯ ಪ್ರತೀಕವಾಗಿರುವ ಈ ದೇವಾಲಯದ ಗೋಡೆಗಳ ಮೇಲೆ ಭಾರತದ ವಿರುದ್ಧ ದ್ವೇಷಪೂರಿತ ವಿಷಯಗಳನ್ನು ಬರೆಯಲಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಹಿಂದೂ ವಿರೋಧಿ ಬರಹದ ಬಗ್ಗೆ ಕೆನಡಾದ ಆಡಳಿತಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ ನಿಷೇಧಿತ ಎಸ್​ಎಫ್​ಜೆ ಉಗ್ರ ಸಂಘಟನೆ ಅಥವಾ ಖಲಿಸ್ತಾನಿಗಳ ಗುಂಪು ಈ ಕೃತ್ಯ ಎಸಗಿರೋ ಶಂಕೆ ವ್ಯಕ್ತವಾಗಿದೆ.

suddiyaana