‘ಚಾಟ್‌ಜಿಪಿಟಿ’ ಎಡವಟ್ಟು – ಇಡೀ ತರಗತಿಯನ್ನೇ ಫೇಲ್‌ ಮಾಡಿದ ಪ್ರಾಧ್ಯಾಪಕ!

‘ಚಾಟ್‌ಜಿಪಿಟಿ’ ಎಡವಟ್ಟು – ಇಡೀ ತರಗತಿಯನ್ನೇ ಫೇಲ್‌ ಮಾಡಿದ ಪ್ರಾಧ್ಯಾಪಕ!

ಟೆಕ್ಸಾಸ್: ಕೃತಕ ಬುದ್ಧಿಮತ್ತೆಯ ಶಕ್ತಿ-ಸಾಮರ್ಥ್ಯಗಳ ಅನಾವರಣದ ಮೂಲಕ ‘ಚಾಟ್‌ಜಿಪಿಟಿ’ ವಿಶ್ವಾದ್ಯಂತ ಸಂಚಲನ ಮೂಡಿಸಿದೆ. ಇದೀಗ ಪ್ರಾಧ್ಯಾಪಕರೊಬ್ಬರು ಮಕ್ಕಳು ಬರೆದ ಅಸೈನ್​ಮೆಂಟ್​ ತಿದ್ದಲು’ಚಾಟ್‌ಜಿಪಿಟಿ’ಯನ್ನು ಬಳಸಿ ಪೇಚಿಗೆ ಸಿಲುಕಿದ್ದಾರೆ.

ಇದನ್ನೂ ಓದಿ: ಚಾಟ್‌ಜಿಪಿಟಿ ಮಾದರಿಯ ‘ಆ್ಯಪ್‌’ ಗೀಳು – ಹೆಂಡತಿ, ಮಕ್ಕಳ ಬಗ್ಗೆ ಭವಿಷ್ಯ ಕೇಳಿದವನು ಮಾಡಿದ್ದೇನು?

ಟೆಕ್ಸಾಸ್ ನಗರದ A&M ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಮಮ್ ಎಂಬುವವರು ತಮ್ಮ ವಿದ್ಯಾರ್ಥಿಗಳು ಅಂತಿಮ ಪರೀಕ್ಷೆಗಾಗಿ ತಮ್ಮ ಅಸೈನ್​ಮೆಂಟ್​ಗಳನ್ನು ಪೂರ್ಣಗೊಳಿಸಲು AI ಅನ್ನು ಬಳಸುತ್ತಿದ್ದಾರೆಯೇ ಎಂದು ಪತ್ತೆ ಹಚ್ಚಲು ಮುಂದಾಗಿದ್ದಾರೆ. ಹೀಗಾಗಿ ಅವರು ವಿದ್ಯಾರ್ಥಿಗಳ ಪ್ರಬಂಧಗಳನ್ನು ChatGPT ಗೆ ಸಲ್ಲಿಸಿದ್ದರು. ಪ್ರಬಂಧಗಳನ್ನು ಸ್ಕ್ಯಾನ್‌ ಮಾಡದಾಗ ಚಾಟ್ ಜಿಟಿಪಿ ಅರ್ಧಕ್ಕಿಂತ ಹೆಚ್ಚು ಪ್ರಬಂಧಗಳನ್ನು ಕೃತಕ ಬುದ್ಧಿಮತ್ತೆಯೇ ಬರೆದಿರುವ ಹೆಚ್ಚಿನ ಸಂಭವನೀಯತೆ ಇದೆ ಎಂದು ಹೇಳಿದೆ. ಹೀಗಾಗಿ ಈ ಪ್ರಾಧ್ಯಾಪಕರು ಇಡೀ ಕ್ಲಾಸ್‌ ನ ವಿದ್ಯಾರ್ಥಿಗಳನ್ನು ಫೇಲ್‌ ಮಾಡಿದ್ದಾರೆ. ಬಳಿಕ ಮತ್ತೆ ಮರುಪರೀಕ್ಷೆ ಮಾಡಿದ್ದಾರೆ.

ಈ ಘಟನೆ ಸಾಕಷ್ಟು ವಿವಾದಕ್ಕೆ ಕಾರಣವಾಯಿತು. ವಿದ್ಯಾರ್ಥಿಗಳು ಚಾಟ್‌ ಜಿಪಿಟಿಯನ್ನು ಬಳಸಿಲ್ಲವೆಂದು ಸಾಬೀತುಪಡಿಸಲು ತಮ್ಮ ಟೈಮ್‌ಸ್ಟ್ಯಾಂಪ್ ಮಾಡಿದ ಗೂಗಲ್ ಡಾಕ್ಸ್ ಅನ್ನು ತೋರಿಸಿದ್ದಾರೆ. ಈ ವೇಳೆ Al ಚಾಟ್‌ಬಾಟ್ ಸುಳ್ಳು ಹೇಳಿಕೆ ನೀಡಿರುವುದು ಬಹಿರಂಗವಾಗಿದೆ. ಬಳಿಕ ಆ ಪ್ರಾಧ್ಯಾಪಕ ವಿದ್ಯಾರ್ಥಿಗಳಲ್ಲಿ ಕ್ಷಮೆಯಾಚಿಸಿದ್ದಾರೆ.

ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಬರೆದ ಇ-ಮೇಲ್​ನಲ್ಲಿ “ನಾನು ನಿಮ್ಮ ಅಸೈನ್​ಮೆಂಟ್​ಗಳನ್ನು ಚಾಟ್​ ಜಿಪಿಟಿ ಖಾತೆಯಲ್ಲಿ ಸ್ಕ್ಯಾನ್​ ಮಾಡುತ್ತೇನೆ. ಆಗ ಪ್ರಬಂಧಗಳನ್ನು ಚಾಟ್​ ಜಿಪಿಟಿ ಕೃತಕ ಬುದ್ಧಿಮತ್ತೆಯೇ ಬರೆದದ್ದು ಎಂದು ಹೇಳಿದೆ. ಹೀಗಾಗಿ ನಿಮಗೆ ಸೊನ್ನೆ ಅಂಕಗಳನ್ನು ನೀಡಲಾಗುವುದು” ಎಂದು ಬರೆದಿದ್ದಾರೆ.

suddiyaana