ನಿರ್ಮಾಪಕ ಚಿನ್ನೇಗೌಡರ ಪತ್ನಿ ಜಯಮ್ಮ ನಿಧನ- ನಟ ವಿಜಯ್ ರಾಘವೇಂದ್ರ, ಶ್ರೀಮುರಳಿಗೆ ಮಾತೃ ವಿಯೋಗ

ನಿರ್ಮಾಪಕ ಚಿನ್ನೇಗೌಡರ ಪತ್ನಿ ಜಯಮ್ಮ ನಿಧನ- ನಟ ವಿಜಯ್ ರಾಘವೇಂದ್ರ, ಶ್ರೀಮುರಳಿಗೆ ಮಾತೃ ವಿಯೋಗ

ಫಿಲ್ಮ್ ಚೇಂಬರ್ ನ ಮಾಜಿ ಅಧ್ಯಕ್ಷ ಹಾಗೂ ನಿರ್ಮಾಪಕ ಚಿನ್ನೇಗೌಡ ಅವರ ಪತ್ನಿ ಜಯಮ್ಮ ಅವರು ನಿಧನರಾಗಿದ್ದಾರೆ. ಜಯಮ್ಮ ಅವರು ನಟರಾದ ವಿಜಯ್ ರಾಘವೇಂದ್ರ ಹಾಗೂ ಶ್ರೀಮುರಳಿ ಅವರ ತಾಯಿ.

ಇದನ್ನೂ ಓದಿ:ಮದುವೆಯಾಗಿ 10 ವರ್ಷದ ನಂತರ ಮತ್ತೊಬ್ಬಳ ಮೇಲೆ ಆಸೆ – ಗುಟ್ಟಾಗಿ ತಾಳಿ ಕಟ್ಟಿ, ಪ್ರೇಯಸಿಯನ್ನೇ ಕೊಂದ ಪಾಪಿ

ಕನ್ನಡ ಚಿತ್ರರಂಗದ ಖ್ಯಾತ ನಟರಾದ ಶ್ರೀಮುರಳಿ ಹಾಗೂ ವಿಜಯ್ ರಾಘವೇಂದ್ರ ಅವರ ತಾಯಿ ಜಯಮ್ಮ ವಿಧಿವಶರಾಗಿದ್ದಾರೆ. ಜಯಮ್ಮ ಚಿನ್ನೇಗೌಡ ಅವರು ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ವಯೋಸಹಜ ಕಾಯಿಲೆಗಳು ಮತ್ತು ಆರೋಗ್ಯದಲ್ಲಿನ ಏರುಪೇರಿನಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಜಯಮ್ಮನವರು ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ಎ. ಚಿನ್ನೇಗೌಡ ಅವರ ಪತ್ನಿ. ಹಿರಿಯ ನಟ ಡಾ. ರಾಜ್‌ಕುಮಾರ್ ಅವರ ಕುಟುಂಬಕ್ಕೆ ಸಂಬಂಧಿಯಾಗಿದ್ದರು. ಎಸ್​ಎ ಚಿನ್ನೇ ಗೌಡ ಅವರು ಸ್ಯಾಂಡಲ್​ವುಡ್​ನ ಪ್ರಸಿದ್ಧ ಸಿನಿಮಾ ನಿರ್ಮಾಪಕರು ಹಾಗೂ ವಿತರಕರು. ಜಯಮ್ಮ ಅವರೂ ಕೂಡಾ ನಿರ್ಮಾಪಕಿಯಾಗಿದ್ದು ಅವರು ಸೇವಂತಿ ಸೇವಂತಿ ಸಿನಿಮಾ ನಿರ್ಮಿಸಿದ್ದಾರೆ. ಚಿನ್ನೇ ಗೌಡ ಅವರು ಕರ್ನಾಟಕ ಫಿಲ್ಮ್ ಚೇಂಬರ್​​ನ ಖಜಾಂಚಿಯಾಗಿ ಹಾಗೂ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ನಟ ವಿಜಯ್ ರಾಘವೇಂದ್ರ ಅವರು ಪತ್ನಿ ಸ್ಪಂದನಾಳನ್ನು ಕಳೆದುಕೊಂಡ ಕೆಲವೇ ವರ್ಷಗಳಲ್ಲಿ ಈಗ ಹೆತ್ತಮ್ಮನನ್ನೂ ಕಳೆದುಕೊಂಡಿದ್ದಾರೆ.

Sulekha

Leave a Reply

Your email address will not be published. Required fields are marked *