ಪಾಕ್‌ ಪರ ಘೋಷಣೆ ಪ್ರಕರಣ – ಪೊಲೀಸರಿಂದ ನಾಸೀರ್‌ ಹುಸೇನ್‌ ಬೆಂಬಲಿಗನ ವಿಚಾರಣೆ

ಪಾಕ್‌ ಪರ ಘೋಷಣೆ ಪ್ರಕರಣ – ಪೊಲೀಸರಿಂದ ನಾಸೀರ್‌ ಹುಸೇನ್‌ ಬೆಂಬಲಿಗನ ವಿಚಾರಣೆ

ರಾಜ್ಯಸಭೆ ಚುನಾವಣೆ ಫಲಿತಾಂಶದ ಸಂಭ್ರಮಾಚರಣೆ ವಿಜೇತ ಅಭ್ಯರ್ಥಿ ನಾಸಿರ್‌ ಹುಸೇನ್‌ ಬೆಂಬಲಿಗರು ಪಾಕ್‌ ಪರ ಘೋಷಣೆ ಕೂಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ವಿಧಾನಸೌಧ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಸೀರ್‌ ಹುಸೇನ್‌ ಬೆಂಬಲಿಗನನ್ನು ಪೊಲೀಸರು ವಿಚಾರಣೆಗೆ ಕರೆದೊಯ್ದಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಪಾಕಿಸ್ತಾನ ಜಿಂದಾಬಾದ್ ಜ್ವಾಲೆ ಹಚ್ಚಿದ್ಯಾರು?  -ವಿವಾದವನ್ನು ಮುಚ್ಚಿ ಹಾಕುತ್ತಿದ್ಯಾ ಸರ್ಕಾರ?

ಬುಧವಾರ ತಡರಾತ್ರಿ ನಾಸೀರ್‌ ಹುಸೇನ್‌ ಅವರ ಬೆಂಬಲಿಗ ಮಹಮ್ಮದ್‌ ಶಫಿ ನಾಶಿಪುಡಿ ಎಂಬ ವ್ಯಕ್ತಿಯನ್ನು ಧ್ವನಿ ಪರೀಕ್ಷೆಗಾಗಿ ಪೊಲೀಸರು ಕರೆದೊಯ್ದಿದ್ದಾರೆ. ಬ್ಯಾಡಗಿ ತಾಲೂಕು ಮೋಟೆಬೆನ್ನೂರ ಬಳಿಯಿರುವ ತಮ್ಮ SAN ಕೋಲ್ಡ್ ಸ್ಟೋರೇಜ್‌ನಲ್ಲಿದ್ದರು. ಅಲ್ಲಿಂದ ಪೊಲೀಸರು ವಿಚಾರಣೆಗೆ ಕರೆತಂದಿದ್ದಾರೆ.

ಧ್ವನಿ ಹೋಲಿಕೆ ವಿಚಾರಣೆ ಹಿನ್ನೆಲೆಯಲ್ಲಿ‌ ವಿಚಾರಣೆ ನಡೆಸಲಾಗುತ್ತಿದೆ. ಪಾಕಿಸ್ತಾನದ ಪರ ಫೋಷಣೆ ಕೂಗಿದ್ದಾರೆಂದು ಮಹಮ್ಮದ್ ಶಫಿ ವಿರುದ್ಧ ಬ್ಯಾಡಗಿ ಬಿಜೆಪಿ ಮುಖಂಡರು ಆರೋಪ ಮಾಡಿದ್ದರು. ಪ್ರಕರಣ ಸಂಬಂಧ ಸ್ಪಷ್ಟನೆ ನೀಡಿರುವ ಮಹಮ್ಮದ್‌ ಶಫಿ, ನಾನು ನಾಸೀರ್ ಸಾಬ್ ಜಿಂದಾಬಾದ್ ಎಂದು ಕೂಗಿದ್ದೇನೆ. ನನ್ನ ತಾಯಾಣೆಗೂ ಆ ರೀತಿ ದೇಶದ್ರೋಹಿ ಘೋಷಣೆ ಕೂಗಿಲ್ಲ. ಯಾವ ತನಿಖೆಗೂ ಸಿದ್ಧನಿದ್ದೇನೆ ಎಂದು ತಿಳಿಸಿದ್ದಾರೆ.

Shwetha M