ಭಾರತ ಮತ್ತು ಕೆನಡಾ ನಡುವೆ ಮುಂದುವರಿದ ಗುದ್ದಾಟ – ಖಲಿಸ್ತಾನಿ ಉಗ್ರರ ಹತ್ಯೆ ಬಳಿಕ ಪರಿಸ್ಥಿತಿ ಮತ್ತಷ್ಟು ಉದ್ವಿಘ್ನ

ಭಾರತ ಮತ್ತು ಕೆನಡಾ ನಡುವೆ ಮುಂದುವರಿದ ಗುದ್ದಾಟ – ಖಲಿಸ್ತಾನಿ ಉಗ್ರರ ಹತ್ಯೆ ಬಳಿಕ ಪರಿಸ್ಥಿತಿ ಮತ್ತಷ್ಟು ಉದ್ವಿಘ್ನ

ಭಾರತ ಮತ್ತು ಕೆನಡಾ ನಡುವಿನ ಮುಸುಕಿನ ಗುದ್ದಾಟ ಹೆಚ್ಚಾಗಿದೆ. ಖಲಿಸ್ತಾನ್‌ ಉಗ್ರನ ಹತ್ಯೆ ನಂತರ ಕೆನಡಾದಲ್ಲಿ ಸಿಖ್ಖರು ಒಟ್ಟಾವಾ, ಟೊರೊಂಟೊ ಮತ್ತು ವ್ಯಾಂಕೋವರ್‌ನಲ್ಲಿರುವ ಭಾರತೀಯ ರಾಜತಾಂತ್ರಿಕ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕುತ್ತಿದ್ದಾರೆ.

ಇದನ್ನೂ ಓದಿ: ಪಾತಾಳಕ್ಕೆ ಕುಸಿದ ಪಾಪಿ ಪಾಕಿಸ್ತಾನ! – ದೇಶದಲ್ಲಿ ಕಡುಬಡತನ ಶೇ. 39.4ಕ್ಕೆ ಏರಿಕೆ!

ಮಂಗಳವಾರ ಬೆಳಿಗ್ಗೆ ಟೊರೊಂಟೊದಲ್ಲಿರುವ ಭಾರತೀಯ ಹೈಕಮಿಷನರ್ ಕಚೇರಿಯ ಮುಂದೆ ಹಾಗೂ ವ್ಯಾಂಕೋವರ್‌ನಲ್ಲಿ ಪ್ರತಿಭಟನೆ ನಡೆಯುತ್ತಿದೆ. ನೂರಾರು ಮಂದಿ ಬೀದಿಗಿಳಿದು ಭಾರತದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.  ಈ ವೇಳೆ, “ಖಾಲಿಸ್ತಾನ್” ಧ್ವಜಗಳನ್ನು ಹಾರಿಸಿದ್ದಾರೆ ಎಂದು ವರದಿಯಾಗಿದೆ.

ಈ ಪ್ರತಿಭಟನೆ ಸಮಯದಲ್ಲಿ ಖಾಲಿಸ್ತಾನಿಗಳ ಪರವಾಗಿ ನಿಂತ ಕೆನಡಾದ ಪ್ರಧಾನಿ ಜಸ್ಟಿನ್​​ ಟ್ರುಡೊ ಅವರಿಗೆ ಧನ್ಯವಾದ ತಿಳಿಸಿದರು. ಇನ್ನು ಹತ್ಯೆ ಆಗಿರುವ ಖಾಲಿಸ್ತಾನಿಗಳಿಗೆ ನ್ಯಾಯ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಇದರಲ್ಲಿ ಒಬ್ಬ ಪ್ರತಿಭಟನಕಾರ ಕೆನಡಾದ ಪ್ರಧಾನಿ ಜಸ್ಟಿನ್​​ ಟ್ರುಡೊ ಅವರಿಗೆ ಕೃತಜ್ಞರಾಗಿರುತ್ತೇವೆ. ಇಂತಹ ಹೇಡಿತನದ ಕೃತ್ಯಕ್ಕೆ ಸರಿಯಾದ ಉತ್ತರ ನೀಡಬೇಕು ಎಂದು ಹೇಳಿದ್ದಾರೆ.

ಕೆನಡಾದ ಸಿಖ್ ಪ್ರತ್ಯೇಕತಾವಾದಿ ನಾಯಕನ ಹತ್ಯೆ ನಂತರ ಕೆನಡಾ ಮತ್ತು ಭಾರತದ ನಡುವಿನ ರಾಜತಾಂತ್ರಿಕ ಸಂಬಂಧದಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿದೆ. ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಸಾವಿಗೆ ಭಾರತವೇ ಕಾರಣ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿದ್ದಾರೆ. ಆದರೆ ಭಾರತ ಇದು ಆಧಾರ ರಹಿತ ಆರೋಪ ಎಂದು ಹೇಳಿದೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನಡಾ ಸರ್ಕಾರ ಗುಪ್ತಚರ ಸಂಸ್ಥೆ ಮೂಲಕ ತನಿಖೆಯನ್ನು ನಡೆಸುತ್ತಿದೆ ಎಂದು ಹೇಳಿದೆ.

Shwetha M