ಬುಲ್ಸ್ READY TO FIGHT – ಕೆಂಪು, ಹಳದಿ ಜೆರ್ಸಿಯೇ ಹೈಲೆಟ್
ಪ್ರದೀಪ್, ಅಜಿಂಕ್ಯ ಪವರ್ ಹೇಗಿದೆ?

2025ರ ಐಪಿಎಲ್ಗೆ ಭರ್ಜರಿ ಸಿದ್ಧತೆಗಳು ನಡೀತಾ ಇರುವಾಗ್ಲೇ ಪ್ರೋ ಕಬಡ್ಡಿ ಲೀಗ್ ಪ್ರಿಪರೇಷನ್ಸ್ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಈಗಾಗ್ಲೇ ಟೀಂಗಳೆಲ್ಲಾ ಫಾರ್ಮ್ ಆಗಿದ್ದು, ಕದನ ಕಣದಲ್ಲಿ ತೊಡೆ ತಟ್ಟೋಕೆ ತಾಲೀಮು ನಡೆಸ್ತಿದ್ದಾರೆ. ಅದ್ರಲ್ಲೂ ನಮ್ಮ ಬೆಂಗಳೂರು ಬುಲ್ಸ್ ಕಸರತ್ತು ನೋಡಿದ್ರೆ ಈ ಸಲ ನಾವೇ ಚಾಂಪಿಯನ್ ಅಂತಾ ಅಭಿಮಾನಿಗಳು ಮೆಂಟಲಿ ಫಿಕ್ಸ್ ಆಗ್ತಿದ್ದಾರೆ. ಕನ್ನಡಮ್ಮನ ಕೆಂಪು ಹಳದಿ ರಂಗಿನಲ್ಲಿ ರೆಡಿಯಾಗಿರೋ ಆ ಜೆರ್ಸಿಯಂತೂ ಮತ್ತಷ್ಟು ಕಣ್ಣು ಕುಕ್ಕುವಂತಿದೆ. ಪಿಕೆಎಲ್ ಸೀಸನ್ 11ಗೆ ಸಿದ್ಧತೆಗಳು ಹೇಗಿದೆ? ಬೆಂಗಳೂರು ತಂಡದ ಆಟಗಾರರ ತರಬೇತಿ ಹೇಗೆ ನಡೀತಿದೆ? ಫ್ಯಾನ್ಸ್ ಈ ಬಾರಿ ಜೋಶ್ನಲ್ಲಿ ಇರೋದ್ಯಾಕೆ? ಈ ಬಗೆಗಿನ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ದುಲೀಪ್ ಟ್ರೋಫಿ.. KLಗೆ ಅಗ್ನಿಪರೀಕ್ಷೆ – ರಾಹುಲ್ ಟೆಸ್ಟ್ ಭವಿಷ್ಯ ನಿರ್ಧರಿಸುತ್ತಾ?
ಈಗಾಗ್ಲೇ 10 ಸೀಸನ್ಗಳನ್ನ ಸಕ್ಸಸ್ಫುಲ್ ಆಗಿ ಕಂಪ್ಲೀಟ್ ಮಾಡಿರೋ ಪ್ರೋ ಕಬಡ್ಡಿ ಲೀಗ್ ಸೀಸನ್ 11ಗೆ ರೆಡಿಯಾಗ್ತಿದೆ. ವಿಶ್ವದ ಅತಿದೊಡ್ಡ ಕಬಡ್ಡಿ ಲೀಗ್ಗೆ ಅಕ್ಟೋಬರ್ 18ರಂದು ಅದ್ಧೂರಿ ಚಾಲನೆ ಸಿಗಲಿದೆ. ಈ ಲೀಗ್‌ನಲ್ಲಿ ಜಬರ್ದಸ್ತ್ ಪ್ರದರ್ಶನ ನೀಡಲು ಆಟಗಾರರೆಲ್ಲಾ ಬೆವರು ಹರಿಸ್ತಿದ್ದಾರೆ. ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದ ಫ್ರಾಂಚೈಸಿಗಳು ಮತ್ತೊಮ್ಮೆ ಚಾಂಪಿಯನ್ ಆಗುವ ಟಾರ್ಗೆಟ್ ಇಟ್ಕೊಂಡಿವೆ. ನಮ್ಮ ಬೆಂಗಳೂರು ಬುಲ್ಸ್ ಸಹ ಎರಡನೇ ಬಾರಿಗೆ ಕಬಡ್ಡಿ ಲೀಗ್ ಟ್ರೋಫಿಯನ್ನ ಎತ್ತಿ ಹಿಡಿಯೋ ಪಣ ತೊಟ್ಟಿದೆ. ಅದ್ರಲ್ಲೂ ಐಪಿಎಲ್‌ನಲ್ಲಿ ಆರ್ಸಿಬಿ ಫ್ರಾಂಚೈಸಿ ಹೇಗೆ ಸ್ಟಾರ್ ಆಟಗಾರರನ್ನು ಪಿಕ್ ಮಾಡುತ್ತೋ ಹಾಗೇ ಬುಲ್ಸ್ ಸಹ ಖ್ಯಾತ ನಾಮರಿಗೆ ಮೊದಲಿನಿಂದಲೂ ರೆಡ್ ಕಾರ್ಪೆಟ್ ಹಾಕುತ್ತಲೇ ಬರ್ತಿದೆ. ಪ್ರೊ ಕಬಡ್ಡಿ ಇತಿಹಾಸದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡಗಳಲ್ಲಿ ಬುಲ್ಸ್ ಸಹ ಒಂದು. ಈ ಬಾರಿಯೂ ಅದೇ ಆಗಿದೆ.
ಬುಲ್ಸ್ ಗ್ಯಾಂಗ್ ನಲ್ಲಿ ರೆಕಾರ್ಡ್ ಬ್ರೇಕರ್ ಪ್ರದೀಪ್ ನರ್ವಾಲ್
ಸೀಸನ್ 17 ಪಿಕೆಎಲ್ಗೆ ಬಲಿಷ್ಠ ತಂಡವನ್ನೇ ಕಟ್ಟಿರೋ ನಮ್ಮ ಬೆಂಗಳೂರಿನ ಗೂಳಿಗಳ ಗ್ಯಾಂಗ್ಗೆ ಡುಬ್ಕಿ ಸ್ಪೆಷಲಿಸ್ಟ್ ಪ್ರದೀಪ್ ನರ್ವಾಲ್ ರೀ ಎಂಟ್ರಿ ಕೊಟ್ಟಿದ್ದಾರೆ. ಇವರ ಎಂಟ್ರಿಯಿಂದ ಆನೆಬಲ ಬಂದಂತಾಗಿದೆ. ಪ್ರೋ ಕಬಡ್ಡಿ ಇತಿಹಾಸದಲ್ಲೇ ಅತೀ ಹೆಚ್ಚು ರೈಡ್ ಪಾಯಿಂಟ್‌ಗಳನ್ನು ಹೊಂದಿರುವ ಡುಬ್ಕಿ ಕಿಂಗ್ ಪರ್ದೀಪ್ ನರ್ವಾಲ್ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದಾರೆ. ಪ್ರೊ ಕಬಡ್ಡಿಯಲ್ಲಿ 170 ಪಂದ್ಯಗಳನ್ನ ಆಡಿರುವ ಪ್ರದೀಪ್ 1,690 ರೇಡ್ ಪಾಯಿಂಟ್‌ಗಳೊಂದಿಗೆ ಅಗ್ರ ರೈಡರ್ ಆಗಿದ್ದಾರೆ. ಲೀಗ್‌ನಲ್ಲಿ ಪ್ರತಿ ಪಂದ್ಯಕ್ಕೆ ಸರಾಸರಿ 10 ಕ್ಕೂ ಅಧಿಕ ರೇಡ್ ಪಾಯಿಂಟ್‌ಗಳನ್ನು ಹೊಂದಿದ್ದಾರೆ. ಪಿಕೆಎಲ್ 2024ರ ಮೆಗಾ ಹರಾಜಿನಲ್ಲಿ ಬೆಂಗಳೂರು ಬುಲ್ಸ್ 70 ಲಕ್ಷ ರೂಪಾಯಿಗೆ ರೆಕಾರ್ಡ್ ಬ್ರೇಕರ್ ಖ್ಯಾತಿಯ ಪರ್ದೀಪ್ ನರ್ವಾಲ್ ಅವರನ್ನು ಖರೀದಿ ಮಾಡಿದೆ. ಈ ಹಿಂದೆ 2ನೇ ಆವೃತ್ತಿಯಲ್ಲಿ ಪ್ರದೀಪ್ ಬೆಂಗಳೂರು ತಂಡದಲ್ಲೇ ಇದ್ರು. ಇದೀಗ ಕಮ್ ಬ್ಯಾಕ್ ಮಾಡುವ ಮೂಲಕ ಮತ್ತಷ್ಟು ದಾಖಲೆಗಳನ್ನು ಸೃಷ್ಟಿಸಲು ಸಜ್ಜಾಗಿದ್ದಾರೆ.
ಬೆಂಗಳೂರು ತಂಡಕ್ಕೆ ಅಜಿಂಕ್ಯ ಪವಾರ್ ಪವರ್
ಪ್ರದೀಪ್ ನರ್ವಾಲ್ ಜೊತೆ ಬೆಂಗಳೂರು ತಂಡದಲ್ಲಿರೋ ಮತ್ತೊಬ್ಬ ಸ್ಟಾರ್ ಆಟಗಾರ ಅಜಿಂಕ್ಯ ಪವಾರ್. ಪವಾರ್ ಬಂದಿರೋದು ಬುಲ್ಡ್ ಪಡೆಗೆ ಮತ್ತಷ್ಟು ಸ್ಟ್ರೆಂಥ್ ಹೆಚ್ಚಿಸಿದೆ. ಬೆಂಗಳೂರು ಬುಲ್ಸ್ 1.17 ಕೋಟಿ ರೂಪಾಯಿ ನೀಡಿದೆ. ಇಲ್ಲಿವರೆಗೆ ನಡೆದ ಹರಾಜು ಪ್ರಕ್ರಿಯೆಗಳಲ್ಲಿ ಬೆಂಗಳೂರು ಬುಲ್ಸ್ ಆಟಗಾರನೊಬ್ಬನಿಗೆ ಇಷ್ಟೊಂದು ಹಣ ನೀಡಿ ಖರೀದಿ ಮಾಡಿರೋದು ಇದೇ ಮೊದಲು. ಅಜಿಂಕ್ಯ ಪವಾರ್ ಇವರು ಪ್ರೋ ಕಬಡ್ಡಿ ಲೀಗ್‌ನಲ್ಲಿ 92 ಪಂದ್ಯಗಳಲ್ಲಿ 484 ಪಾಯಿಂಟ್ ಹೊಂದಿದ್ದಾರೆ. ಕಳೆದ ಆವೃತ್ತಿಯಲ್ಲಿ ಇವರು ತಮಿಳು ತಲೈವಾಸ್ ತಂಡದ ಪರ 21 ಪಂದ್ಯಗಳನ್ನು ಆಡಿದ್ದು 133 ಪಾಯಿಂಟ್ ಗಳಿಸಿದ್ದರು.
ಕನ್ನಡ ಧ್ವಜ ಹೋಲುವ ಹಳದಿ, ಕೆಂಪು ಬಣ್ಣದ ಜೆರ್ಸಿ!
11ನೇ ಆವೃತ್ತಿಯಲ್ಲಿ ನಮ್ಮ ಬೆಂಗಳೂರಿನ ಗೂಳಿಗಳನ್ನ ಮತ್ತಷ್ಟು ರಂಗುಗೊಳಿಸ್ತಾ ಇರೋದು ಜೆರ್ಸಿ. ಬೆಂಗಳೂರು ಬುಲ್ಸ್ ಈ ಸೀಸನ್ಗಾಗಿ ತನ್ನ ಹೊಸ ಜೆರ್ಸಿ ಬಿಡುಗಡೆ ಮಾಡಿದೆ. ಜೆರ್ಸಿ ನೋಡಿದ ಬುಲ್ಸ್ ಫ್ಯಾನ್ಸ್ ಅಂತೂ ಸಿಕ್ಕಾಪಟ್ಟೆ ಫಿದಾ ಆಗಿದ್ದಾರೆ. ಕರ್ನಾಟಕದ ಹಳದಿ ಮತ್ತು ಕೆಂಪು ಬಣ್ಣದ ಧ್ವಜವನ್ನು ಹೊತ್ತು ಮೆರೆಸಿದಂತಿದೆ. ಹಳದಿ-ಕೆಂಪು ಜರ್ಸಿಯಲ್ಲಿ ಸಿಂಗಾರಗೊಂಡ ಗೂಳಿಗಳಂತೆ ಆಟಗಾರರು ಕಂಗೊಳಿಸುತ್ತಿದ್ದಾರೆ. ಬೆಂಗಳೂರು ಬುಲ್ಸ್ ಆನಾವರಣಗೊಳಿಸಿರುವ ಹೊಸ ಜೆರ್ಸಿಗೆ ಸೋಶಿಯಲ್ ಮೀಡಿಯಾದಲ್ಲೂ ಪಾಸಿಟಿವ್ ರೆಸ್ಪಾನ್ಸ್ ವ್ಯಕ್ತವಾಗ್ತಿದೆ. ಕನ್ನಡ ಧ್ವಜ ಹೋಲುವ ಜೆರ್ಸಿ ಮೂಲಕ ಬುಲ್ಸ್ ತಂಡ ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾಗ್ತಿದೆ.
6ನೇ ಸೀಸನ್ ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದ್ದ ಬುಲ್ಸ್
ಪ್ರೋ ಕಬಡ್ಡಿ ಲೀಗ್ ಆರಂಭವಾದಾಗಿನಿಂದ ಇಲ್ಲಿಯವರೆಗೂ ಬೆಂಗಳೂರು ಬುಲ್ಸ್ ಕೂಡ ಒನ್ ಆಫ್ ದಿ ಮೋಸ್ಟ್ ಫೇವರೆಟ್ ಟೀಂ ಎನಿಸಿಕೊಂಡಿದೆ. ಅದ್ರಲ್ಲೂ ತಂಡದಲ್ಲಿ ಸ್ಟಾರ್ ಆಟಗಾರರೇ ಇರೋದು ಮತ್ತೊಂದು ಪ್ಲಸ್ ಪಾಯಿಂಟ್. ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದ ಹಲವು ಸ್ಟಾರ್ ಆಟಗಾರರು ಬೆಂಗಳೂರು ತಂಡದಲ್ಲಿ ಅಭ್ಯಾಸ ಮಾಡಿದವರೇ. ವರ್ಷದಿಂದ ವರ್ಷಕ್ಕೆ ಬೆಸ್ಟ್ ಪರ್ಫಾಮೆನ್ಸ್ ನೀಡುತ್ತಲೇ ಬಂದಿರೋ ಬುಲ್ಸ್ ಗ್ಯಾಂಗ್ 10 ಸೀಸನ್ಗಳ ಪೈಕಿ ಒಂದು ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. ಪ್ರೊ ಕಬಡ್ಡಿ ಇತಿಹಾಸದಲ್ಲಿ ಒಟ್ಟು 192 ಪಂದ್ಯಗಳಲ್ಲಿ ಕಣಕ್ಕೆ ಇಳಿದಿದ್ದು, 91ರಲ್ಲಿ ಜಯ, 90 ರಲ್ಲಿ ಸೋಲು, 11 ಪಂದ್ಯಗಳಲ್ಲಿ ಡ್ರಾ ಸಾಧನೆ ಮಾಡಿದೆ. ಅಲ್ಲದೆ ಗೆಲುವಿನ ಶೇಕಡಾ ಲೆಕ್ಕಾಚಾರ ಸಹ ಬೇರೆ ತಂಡಗಳಿಗೆ ಹೋಲಿಸಿದರೆ ಚೆನ್ನಾಗಿದೆ.
ಆರಂಭದ ಸೀಸನ್ ಗಳಲ್ಲಿ ಅಬ್ಬರಿಸಿದ್ದ ಗೂಳಿಗಳು!
ಬೆಂಗಳೂರು ಬುಲ್ಸ್ ಆರಂಭಿಕ ಎರಡೂ ಲೀಗ್‌ಗಳಲ್ಲಿ ಅದ್ಭುತ ಪ್ರದರ್ಶನ ನೀಡಿತ್ತು. ಮೊದಲ ಆವೃತ್ತಿಯಲ್ಲಿ ಮೂರನೇ ಸ್ಥಾನ ಪಡೆದ್ರೆ, ಎರಡನೇ ಅವೃತ್ತಿಯಲ್ಲಿ ಫೈನಲ್‌ಗೆ ಅರ್ಹತೆ ಪಡೆದಿತ್ತು. ಆದರೆ ಮುಂಬಾ ವಿರುದ್ಧ ಸೋಲುಂಡು ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿ ಪಡಬೇಕಾಯಿತು. ಎರಡನೇ ಆವೃತ್ತಿಯಲ್ಲಿ ಪ್ರಶಸ್ತಿ ಮಿಸ್ ಆದ ಬಳಿಕ ಸತತ ಮೂರು, ನಾಲ್ಕು, ಐದನೇ ಆವೃತ್ತಿಗಳಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ಫೇಲ್ ಆಗಿತ್ತು. ಐದನೇ ಆವೃತ್ತಿಯಲ್ಲಿ ಮಾತ್ರ ಪ್ಲೇ ಆಫ್‌ಗೆ ಪ್ರವೇಶ ಪಡೆದಿತ್ತು. ಬಟ್ 6ನೇ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಯಶಸ್ವಿಯಾಗಿತ್ತು. ಆರನೇ ಆವೃತ್ತಿಯ ಐಪಿಎಲ್‌ನಲ್ಲಿ ಲೀಗ್ ಹಂತದಿಂದಲೇ ಧಮಾಕೇಧಾರ್ ಪರ್ಫಾಮೆನ್ಸ್ ನೀಡಿದ್ದ ಬೆಂಗಳೂರು ಬುಲ್ಸ್ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಫೈನಲ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿ ಚೊಚ್ಚಲ ಬಾರಿಗೆ ಪ್ರಶಸ್ತಿಗೆ ಮುತ್ತಿಟ್ಟಿತು. ಆದ್ರೆ ನಂತರದ ಸೀಸನ್ಗಳಲ್ಲಿ ಮತ್ತೆ ಚಾಂಪಿಯನ್ ಪಟ್ಟಕ್ಕೇರೋ ಚಾನ್ಸ್ ಸಿಕ್ಕಿಲ್ಲ. ಹೀಗಾಗಿ ಈ ಬಾರಿ ಸ್ಟಾರ್ ಆಟಗಾರರ ದಂಡೇ ಸೇರಿದ್ದು 2ನೇ ಬಾರಿಗೆ ಕಪ್ ಗೆಲ್ಲೋ ಗುರಿ ಹೊಂದಿದೆ. 2ನೇ ಬಾರಿಗೆ ಟ್ರೋಫಿ ಎತ್ತಿ ಹಿಡಿಯೋ ಯೋಜನೆಯಲ್ಲಿದೆ.
11ನೇ ಆವೃತ್ತಿಗೆ ಬೆಂಗಳೂರು ತಂಡ ಹೇಗಿದೆ?
ಬೆಂಗಳೂರು ಗೂಳಿಗಳ ಗ್ಯಾಂಗ್!
ರೈಡರ್ಸ್ : ಅಜಿಂಕ್ಯ ಪವಾರ್, ಪ್ರರ್ದೀಪ್ ನರ್ವಾಲ್, ಪ್ರಮೋತ್ ಸಾಯಸಿಂಗ್, ಜೈ ಭಗವಾನ್, ಜತಿನ್, ಸುಶೀಲ್, ಅಕ್ಷಿತ್
ಡಿಫೆಂಡರ್ಸ್ : ಹಸುನ್ ಥಾಂಗ್ಕ್ರೂಯಾ, ಸೌರಭ್ ನಂದಲ್, ಪೊನ್‌ಪರ್ತಿಬನ್ ಸುಬ್ರಮಣಿಯನ್, ರೋಹಿತ್ ಕುಮಾರ್, ಆದಿತ್ಯ ಶಂಕರ್ ಪೊವಾರ್, ಅರುಳ್ನಂತಬಾಬು, ಪಾರ್ಟಿಕ್
ಆಲ್‌ರೌಂಡರ್: ನಿತಿನ್ ರಾವಲ್
ರೈಡರ್ಸ್ ಗ್ಯಾಂಗ್ನಲ್ಲಿ ಅಜಿಂಕ್ಯ ಪವಾರ್, ಪ್ರರ್ದೀಪ್ ನರ್ವಾಲ್, ಪ್ರಮೋತ್ ಸಾಯಸಿಂಗ್, ಜೈ ಭಗವಾನ್, ಜತಿನ್, ಸುಶೀಲ್, ಅಕ್ಷಿತ್ ಇದ್ದಾರೆ. ಹಾಗೇ ಡಿಫೆಂಡರ್ಸ್ ಸ್ಥಾನವನ್ನ ಹಸುನ್ ಥಾಂಗ್ಕ್ರೂಯಾ, ಸೌರಭ್ ನಂದಲ್, ಪೊನ್‌ಪರ್ತಿಬನ್ ಸುಬ್ರಮಣಿಯನ್, ರೋಹಿತ್ ಕುಮಾರ್, ಆದಿತ್ಯ ಶಂಕರ್ ಪೊವಾರ್, ಅರುಳ್ನಂತಬಾಬು, ಪಾರ್ಟಿಕ್ ತುಂಬಲಿದ್ದಾರೆ. ಆಲ್‌ರೌಂಡರ್ ಜವಾಬ್ದಾರಿ ನಿತಿನ್ ರಾವಲ್ ನಿಭಾಯಿಸಲಿದ್ದಾರೆ.
ಪ್ರೋ ಕಬಡ್ಡಿ ಲೀಗ್ ಅಕ್ಟೋಬರ್ನಿಂದ ಶುರುವಾಗಲಿದ್ದು ಆಟಗಾರರೆಲ್ಲಾ ಭರ್ಜರಿ ಅಭ್ಯಾಸದಲ್ಲಿ ತೊಡಗಿದ್ದಾರೆ. ರಣಧೀರ್ ಸಿಂಗ್ ಸೆಹ್ರಾವತ್ ತರಬೇತಿಯಡಿ ಬೆಂಗಳೂರು ಬುಲ್ಡ್ ಕೂಡ ಬೆವರು ಹರಿಸ್ತಿದ್ದಾರೆ. ಗೂಳಿಗಳ ಮೇಲೆ ಈ ಬಾರಿ ಸಿಕ್ಕಾಪಟ್ಟೆ ನಿರೀಕ್ಷೆ ಇದ್ದು, 2 ಬಾರಿಗೆ ಚಾಂಪಿಯನ್ ಪಟ್ಟಕ್ಕೇರಲಿ ಅಂತಾ ಫ್ಯಾನ್ಸ್ ಕೂಡ ಕಾಯ್ತಿದ್ದಾರೆ.