ಅಪ್ಪು ಆ್ಯಪ್ ಟ್ರೈಲರ್‌ಗೆ ಕಿಚ್ಚನ ಧ್ವನಿ – ಸುದೀಪ್ ಧ್ವನಿಯಲ್ಲಿ ಮೂಡಿ ಬಂತು ಪುನೀತ್ ರಾಜಕುಮಾರ್  ಜೀವನ!

ಅಪ್ಪು ಆ್ಯಪ್ ಟ್ರೈಲರ್‌ಗೆ ಕಿಚ್ಚನ ಧ್ವನಿ – ಸುದೀಪ್ ಧ್ವನಿಯಲ್ಲಿ ಮೂಡಿ ಬಂತು ಪುನೀತ್ ರಾಜಕುಮಾರ್  ಜೀವನ!

ಕರುನಾಡ ಜನರ ಪ್ರೀತಿಯ ಅಪ್ಪು ಅಗಲಿ ನಾಲ್ಕು ವರ್ಷಗಳಾಗುತ್ತಾ ಬಂತು. ಪುನೀತ್‌ ಆ ನಗು ಮಾತ್ರ ಇಂದಿಗೂ ಯಾರ ಕಣ್ಣಿಂದಲೂ ಮರೆಯಾಗಿಲ್ಲ. ಪುನೀತ್‌ ಸಾವಿನ ಕ್ಷಣ ನೆನೆದರೆ ಇಂದಿಗೂ ಕಣ್ಣಾಲೆಗಳು ಒದ್ದೆಯಾಗುತ್ತವೆ. ಕನ್ನಡದ ಕಣ್ಮಣಿ ನಟ ಪವರ್‌ ಸ್ಟಾರ್‌ ಪುನೀತ್‌ರಾಜ್‌ಕುಮಾರ್‌ ಅವರನ್ನ ಅಮರರಾಗಿಡಲು ಅವರ ಪತ್ನಿ ಅಶ್ವಿನಿ ಪುನೀತ್ ರಾಜ್​​ಕುಮಾರ್ ಅವರು ಕಾರ್ಯವೊಂದನ್ನು ಕೈಗೊಂಡಿದ್ದಾರೆ. ಇದೀಗ ಅಪ್ಪು ಹೆಸರಿನಲ್ಲಿ ಅಪ್ಲಿಕೇಶನ್‌ವೊಂದು ಬಿಡುಗಡೆಗೆ ಸಜ್ಜಾಗಿದ್ದು, ಈ ಆ್ಯಪ್ ಟ್ರೈಲರ್‌ಗೆ ಕಿಚ್ಚ ಸುದೀಪ್‌ ಧ್ವನಿ ನೀಡಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನ-ಅಫ್ಘಾನಿಸ್ತಾನ ನಡುವೆ ಮಾತುಕತೆ – ಮೊದಲ ಹಂತದ ಮಾತುಕತೆ ಸಕ್ಸಸ್

ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ನಿಧನರಾಗಿ ನಾಲ್ಕು ವರ್ಷ ಆಗ್ತಿದೆ. ಅಪ್ಪು ಸ್ಮರಣಾರ್ಥ ಅಶ್ವಿನಿ ಪುನೀತ್‌ರಾಜ್‌ಕುಮಾರ್ ಹೊಸ ಹೆಜ್ಜೆಯೊಂದನ್ನ ಇಟ್ಟಿದ್ದಾರೆ. ಅಪ್ಪು ಅಪ್ಲಿಕೇಷನ್ ಅನಾವರಣ ಮಾಡಲು ಸಜ್ಜಾಗಿದ್ದಾರೆ. ಅದಕ್ಕೂ ಮೊದಲು ಟ್ರೈಲರ್ ರಿಲೀಸ್ ಮಾಡಲಾಗಿದೆ. ಇದೀಗ ಈ ಅಪ್ಲಿಕೇಶನ್‌ನ ಪ್ರೋಮೊ ಬಿಡುಗಡೆ ಮಾಡಲಾಗಿದ್ದು, ಪ್ರೋಮೊಗೆ ಅಪ್ಪು ಅವರ ಆಪ್ತ ಗೆಳೆಯ ಆಗಿದ್ದ ಕಿಚ್ಚ ಸುದೀಪ್ ಟ್ರೈಲರ್‌ಗೆ ಧ್ವನಿ ನೀಡಿದ್ದಾರೆ.

ಪುನೀತ್ ರಾಜಕುಮಾರ್ ಅವರ ಪ್ರತಿಭೆ, ಸಮಾಜಸೇವೆ, ಮಾನವೀಯ ಮೌಲ್ಯಗಳು, ಅವರ ಜೀವನ, ಸಾಧನೆಯನ್ನು ಪ್ರತಿಯೊಬ್ಬರಿಗೂ ತಲುಪಿಸಲು ಹಾಗೂ ಸ್ಫೂರ್ತಿ ತುಂಬಲು ಪಿಆರ್‌ಕೆ ಹೆಸರಿನ ಅಪ್ಲಿಕೇಶನ್ ಅನ್ನು ನಿರ್ಮಿಸಲಾಗಿದ್ದು, ಅದನ್ನು ಅ.25 ರಂದು ಬಿಡುಗಡೆ ಮಾಡಲಾಗುತ್ತಿದೆ. ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಇನ್ನೂ ಕೆಲವು ಗಣ್ಯರು ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲಿದ್ದಾರೆ.  ಪಿಆರ್‌ಕೆ ಅಪ್ಲಿಕೇಶನ್ ಕೇವಲ ಅಪ್ಪು ಅವರ ಚಿತ್ರ, ವಿಡಿಯೋಗಳನ್ನು ಹೊಂದಿರುವ ಆಪ್ ಅಲ್ಲ. ಇಲ್ಲಿ ಕಂಟೆಂಟ್ ಕ್ರಿಯೇಟರ್‌ಗಳು ಪರಸ್ಪರ ತಮ್ಮ ಕೆಲಸವನ್ನು ಪ್ರದರ್ಶನಕ್ಕೆ ಇಡುವ, ಒಬ್ಬರಿಂದ ಮತ್ತೊಬ್ಬರು ಕಲಿಯುವ ಅವಕಾಶವೂ ಇದೆಯಂತೆ. ಸದ್ಯ ಟ್ರೈಲರ್‌ ಮೂಲಕ ಒಂದಷ್ಟು ವಿಷಯಗಳನ್ನ ತಲುಪಿಸಿದೆ ಪಿಆರ್‌ಕೆ. ಇನ್ನು ಅಪ್ಲಿಕೇಷನ್ ಬಿಡುಗಡೆಯಾದ್ಮೇಲೆ ಏನೆಲ್ಲಾ ಇರಲಿದೆ ಅನ್ನೋ ಸಂಪೂರ್ಣ ಮಾಹಿತಿ ದೊರೆಯಲಿದೆ.

Shwetha M