ಉಪ್ಪಿದಾದನಿಗೂ ಹ್ಯಾಕರ್ಸ್ ಕಾಟ – ಉಪೇಂದ್ರ ದಂಪತಿ ಬಳಿ ಹಣಕ್ಕೆ ಬೇಡಿಕೆ ಇಟ್ಟ ಭೂಪ!

ಉಪ್ಪಿದಾದನಿಗೂ ಹ್ಯಾಕರ್ಸ್ ಕಾಟ – ಉಪೇಂದ್ರ ದಂಪತಿ ಬಳಿ ಹಣಕ್ಕೆ ಬೇಡಿಕೆ ಇಟ್ಟ ಭೂಪ!

ತಂತ್ರಜ್ಞಾನ ಮುಂದುವರಿದಂತೆ ಸೈಬರ್‌ ಕ್ರೈಮ್‌ ದಿನೇ ದಿನೇ ಹೆಚ್ಚಾಗ್ತಿದೆ. ಸೋಶಿಯಲ್‌ ಮೀಡಿಯಾ ಸಾಕಷ್ಟು ಮಂದಿ ಅಕೌಂಟ್‌ ಹ್ಯಾಕ್‌ ಆಗಿದೆ. ಇದೀಗ ಈ ಬಿಸಿ ಇದೀಗ ಸ್ಯಾಂಡಲ್‌ವುಡ್‌ನ ಬುದ್ಧಿವಂತನಿಗೂ ತಟ್ಟಿದೆ. ಉಪೇಂದ್ರ ದಂಪತಿ ಫೋನ್‌ ಹ್ಯಾಕ್‌ ಆಗಿದೆ.

ಇದನ್ನೂ ಓದಿ:‌ ಪಾಕ್‌ ನ ಬಗ್ಗುಬಡಿದ ಭಾರತ – ಪಾಕಿಸ್ತಾನ ವಿರುದ್ಧದ ಗೆಲುವನ್ನು ಪಹಲ್ಗಾಮ್ ಸಂತ್ರಸ್ತರು, ಭಾರತೀಯ ಸಶಸ್ತ್ರ ಪಡೆಗಳಿಗೆ ಅರ್ಪಿಸಿದ ಕ್ಯಾಪ್ಟನ್ ಸೂರ್ಯ

ಸ್ಯಾಂಡಲ್‌ವುಡ್‌  ಸ್ಟಾರ್‌ ಜೋಡಿ, ಉಪ್ರೇಂದ್ರ ಹಾಗೂ ಪ್ರಿಯಾಂಕಗೆ ಹ್ಯಾಕರ್ಸ್‌ ಕಾಟ ಶುರುವಾಗಿದೆ. ಇದೀಗ ಅವರ ಫೋನ್‌ ಹ್ಯಾಕ್‌ ಆಗಿದ್ದು, ಬೇರೆ ಬೇರೆ ವ್ಯಕ್ತಿಗಳಿಗೆ ವಾಟ್ಸಾಪ್ ಮೂಲಕ ಮೆಸೆಜ್‌ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾನೆ. ಈ ವಿಚಾರ ಅವರ ಗಮನಕ್ಕೆ ಬಂದಿದ್ದು ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ, ಠಾಣೆಯಲ್ಲಿ ದೂರು ಕೂಡ ದಾಖಲು ಮಾಡಲಾಗುತ್ತಿದೆ.

ಹಣ ಕೊಡ್ಬೇಡಿ ಎಂದ ಉಪ್ಪಿ!

ಮೊಬೈಲ್ ಹ್ಯಾಕ್ ಆದ ಬೆನ್ನಲ್ಲೇ ನಟ ಉಪೇಂದ್ರ ವಿಡಿಯೋ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಸಿನಿಮಾಗಳಲ್ಲಿ ಮೊಬೈಲ್​ಗಳನ್ನು ಹ್ಯಾಕ್ ಮಾಡುವಂತೆ ಇಲ್ಲಿಯೂ ಆಗಿದೆ. ‘ಪ್ರಿಯಾಂಕಾಗೆ ಬೆಳಿಗ್ಗೆ ಒಂದು ಮೆಸೇಜ್ ಬಂತು. ಪ್ರಿಯಾಂಕಾ ಆರ್ಡರ್ ಮಾಡಿದ ಪಾರ್ಸಲ್ ಒಂದು ಬರೋದಿತ್ತು. ಪಾರ್ಸಲ್ ಸಂಬಂಧದ್ದೇ ಮೆಸೇಜ್ ಇದು ಎಂದು ಅವಳು ಭಾವಿಸಿದ್ದಳು. ಹ್ಯಾಶ್ ಟ್ಯಾಗ್ ಒತ್ತಿ ಆ ನಂಬರ್ ಡಯಲ್ ಮಾಡಿ, ಈ ನಂಬರ್ ಡಯಲ್ ಮಾಡಿ ಎಂದು ಮೆಸೇಜ್ ಮಾಡಿದಾತ ಹೇಳಿದ್ದಾನೆ. ಅವಳು ಹಾಗೆ ಮಾಡಿದಳು. ಅಲ್ಲಿ ಆಗುತ್ತಿಲ್ಲ ಎಂದು ನನ್ನ ಮೊಬೈಲ್​ನಿಂದಲೂ ಪ್ರಯತ್ನಿಸಿದ್ದಾಳೆ. ಹೀಗಾಗಿ, ನನ್ನ ಮೊಬೈಲ್ ಕೂಡ ಹ್ಯಾಕ್ ಆಗಿದೆ ಎನಿಸುತ್ತಿದೆ ಎಂದು ಉಪೇಂದ್ರ ಹೇಳಿದ್ದಾರೆ.

ನನ್ನ ಮೊಬೈಲ್​ನಿಂದ ಅಥವಾ ಪ್ರಿಯಾಂಕಾ ಮೊಬೈಲ್​ನಿಂದ ಹಣ ಕೊಡಿ ಎಂದು ಮೆಸೇಜ್ ಬಂದರೆ ಇಗ್ನೋರ್ ಮಾಡಿ ಎಂದು ಉಪೇಂದ್ರ ಕೇಳಿಕೊಂಡಿದ್ದಾರೆ. ಈಗಾಗಲೇ ಪ್ರಿಯಾಂಕಾ ವಾಟ್ಸಾಪ್​ನಿಂದ ಕೆಲವರಿಗೆ ಮೆಸೇಜ್ ಹೋಗಿದೆ. ‘ನನ್ನ ಮೊಬೈಲ್ ಯುಪಿಐ ವರ್ಕ್ ಆಗುತ್ತಿಲ್ಲ. ನೀವು ಹಣ ಕಳುಹಿಸಿ. 2 ಗಂಟೆಯಲ್ಲಿ ಕಳುಹಿಸುತ್ತೇವೆ’ ಎಂದು ಹ್ಯಾಕರ್ ಪ್ರಿಯಾಂಕಾ ಕಾಂಟ್ಯಾಕ್ಟ್​ನಲ್ಲಿರೋ ವ್ಯಕ್ತಿಗಳಿಗೆ ಮೆಸೇಜ್ ಮಾಡುತ್ತಿದ್ದಾನೆ.

ಇದರಿಂದ ಅನೇಕರಿಗೆ ಅನುಮಾನ ಬಂದಿದೆ. ಹೀಗಾಗಿ, ‘ಕರೆ ಮಾಡಿ, ನಾವು ಫೋನ್​ನಲ್ಲೇ ಮಾತನಾಡೋಣ’ ಎಂದು ಉತ್ತರಿಸಿದ್ದಾರೆ. ಆದರೆ, ‘ಈಗ ಮಾತನಾಡೋಕೆ ಆಗಲ್ಲ’ ಎಂದು ಹ್ಯಾಕರ್ ಹೇಳಿದ್ದಾನೆ. ಹೀಗಾಗಿ, ಯಾರೂ ಹಣ ಕಳುಹಿಸಿಲ್ಲ ಎಂದು ಹೇಳಲಾಗುತ್ತಿದೆ.

Shwetha M