ಮದುವೆ ಸಂಭ್ರಮದಲ್ಲಿ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಪ್ರಿಯಾಂಕಾ – ಅಮಿತ್ ನಾಯಕ್ ಜೊತೆ ವಿವಾಹ

ಮದುವೆ ಸಂಭ್ರಮದಲ್ಲಿ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಪ್ರಿಯಾಂಕಾ – ಅಮಿತ್ ನಾಯಕ್ ಜೊತೆ ವಿವಾಹ

ಹೊಸ ವರ್ಷಕ್ಕೆ ಕೌಂಟ್​ಡೌನ್ ಶುರುವಾಗಿರುವಾಗಲೇ ಮತ್ತೊಬ್ಬ ಸೆಲೆಬ್ರಿಟಿಯ ಮದುವೆ ಸಂಭ್ರಮ ಜೋರಾಗಿ ನಡೆಯುತ್ತಿದೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಮಜಾ ಭಾರತ ಹಾಗೂ ಗಿಚ್ಚಿ ಗಿಲಿಗಿಲಿ (Gicchi Giligili) ರಿಯಾಲಿಟಿ ಶೋ ಖ್ಯಾತಿಯ ಪ್ರಿಯಾಂಕಾ ಕಾಮತ್ ಮದುವೆ ಸಂಭ್ರಮದಲ್ಲಿದ್ದಾರೆ. ಈಗಾಗಲೇ ಪ್ರಿಯಾಂಕಾ ಅವರ ಮದುವೆಯ ಸಂಗೀತ ಕಾರ್ಯಕ್ರಮ ಮಂಗಳೂರಿನಲ್ಲಿ ಗ್ರ್ಯಾಂಡ್‌ ಆಗಿ ನಡೆದಿದೆ.

ಇದನ್ನೂ ಓದಿ : ಅವಳಿ ಮಕ್ಕಳಿಗೆ ಜನ್ಮ ನೀಡಿದ 70 ವರ್ಷದ ಮಹಿಳೆ – ಪ್ರಾಣದ ಹಂಗು ತೊರೆದು ಮಕ್ಕಳಿಗೆ ಜನ್ಮ!

ಪ್ರಿಯಾಂಕಾ ಕಾಮತ್ ಮತ್ತು ಅಮಿತ್ ನಾಯಕ್ ಜೋಡಿ ಕಳೆದ ಜನವರಿಯಲ್ಲಿ ಪುತ್ತೂರಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಇದೀಗ ಹೊಸ ಬಾಳಿಗೆ ಕಾಲಿಡುವ ಸಂಭ್ರಮದಲ್ಲಿದ್ದಾರೆ. ಅಮಿತ್ ನಾಯಕ್ ಮೂಲತಃ ಕುಂದಾಪುರದವರು. ವೃತ್ತಿಯಲ್ಲಿ ಇಂಜಿನಯರ್ ಆಗಿದ್ದಾರೆ. ಕಳೆದ ಒಂದು ವರ್ಷದಿಂದ ಈ ಜೋಡಿ ಸಾಕಷ್ಟು ಕಡೆ ಪ್ರವಾಸ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿತ್ತು. ನಟಿ ಪ್ರಿಯಾಂಕಾ ಮೂಲತಃ ಮಂಗಳೂರಿನವರು. ಅನಾರೋಗ್ಯದ ಸಮಸ್ಯೆಯಿಂದಾಗಿ ಪ್ರಿಯಾಂಕಾ ಕಾಮತ್ ಎರಡು ಬಾರಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಆಗ ಅಮಿತ್ ಅವರು ಪ್ರಿಯಾಂಕಾ ನೆರವಿಗೆ ನಿಂತು ಸಂಗಾತಿಯ ಆರೈಕೆ ಮಾಡಿದ್ದರು. ಅದನ್ನು ಪ್ರಿಯಾಂಕಾ ಅವರೇ ಹೇಳಿಕೊಂಡಿದ್ದರು. ಇದೀಗ ಈ ಜೋಡಿ ಹಸೆಮಣೆ ಏರುತ್ತಿದ್ದು ಎಲ್ಲರೂ ಶುಭಾಷಯ ಕೋರುತ್ತಿದ್ದಾರೆ.

Shantha Kumari