ಮಗಳ ಹತ್ಯೆ ವಿಚಾರದಲ್ಲಿ ಉಲ್ಟಾ ಹೊಡೆದ ಪ್ರಿಯಾಂಕ – ಖಾಕಿ ವಿಚಾರಣೆ ಮುಂದೆ ಪ್ರೇಮಿ ವಿರುದ್ಧವೇ ದೂರು

ಆ ಮಗುವಿಗೆ ತಾಯಿಯೇ ಪ್ರಪಂಚವಾಗಿತ್ತು. ಆದರೆ, ಆ ತಾಯಿಗೆ ಅನೈತಿಕ ಸಂಬಂಧವೇ ಮುಖ್ಯವಾಗಿತ್ತು. ಮದುವೆಯಾದರೂ ಮತ್ತೊಬ್ಬನ ತೋಳಲ್ಲಿ ಚಕ್ಕಂದವಾಡುತ್ತಿದ್ದಳು ಆ ಪಾಪಿ ತಾಯಿ. ಕೊನೆಗೆ ತಾಯಿಯ ಅನೈತಿಕ ಸಂಬಂಧಕ್ಕೆ ಆ ಮಗುವೇ ಬಲಿಯಾಗಿ ಹೋಗಿತ್ತು. ಕೊನೆಗೂ ಕಟುಕ ತಾಯಿ ಆಕೆಯ ಪ್ರೇಮಿ ಇಬ್ಬರೂ ಖಾಕಿ ಬಲೆಗೆ ಬಿದ್ದಿದ್ದಾರೆ. ಜೊತೆಗೆ ಕರ್ತವ್ಯಲೋಪ ಎಸಗಿದ ಪೊಲೀಸರಿಗೂ ತಕ್ಕ ಶಾಸ್ತಿಯಾಗಿದೆ.
ಇದನ್ನೂ ಓದಿ:ಮಗಳ ಶವ ಕಾರಲ್ಲಿದ್ದರೂ ಪ್ರೇಮಿ ಜೊತೆ ಬರ್ತ್ ಡೇ ಸೆಲೆಬ್ರೇಷನ್ – 12 ಗಂಟೆ ಹೆತ್ತ ಮಗಳ ಶವದ ಜೊತೆ ತಾಯಿಯ ಜಾಲಿ ರೈಡ್
6 ವರ್ಷದ ಕಂದಮ್ಮ ವೆನ್ನೆಲಾ ಹತ್ಯೆ ಪ್ರಕರಣದಲ್ಲಿ ಕೊನೆಗೂ ಪ್ರಿಯಾಂಕ ಖಾಕಿ ಬಲೆಗೆ ಬಿದ್ದಾಗಿದೆ. ಇಷ್ಟು ದಿನದಿಂದ ತಲೆ ಮರೆಸಿಕೊಂಡಿದ್ದ ಪ್ರಿಯಾಂಕ ಗುರುವಾರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ವಿಚಾರಣೆ ವೇಳೆ ಕೆಲವೊಂದು ವಿಚಾರಗಳನ್ನು ಬಾಯ್ಬಿಟ್ಟಿದ್ದಾಳೆ. ಅಲ್ಲದೇ ಪ್ರಿಯಕರನ ವಿರುದ್ಧವೇ ಆರೋಪ ಮಾಡಿದ್ದಾಳೆ.
ಮಗಳ ಸಾವಿನ ಬಗ್ಗೆ ತಾಯಿ ಪ್ರಿಯಾಂಕ ಪೊಲೀಸರ ಮುಂದೆ ಹೇಳಿದ್ದೇನೆಂದರೆ, ನನ್ನ ಮಗು ರಾತ್ರಿ ಮಲಗಿತ್ತು, ಬೆಳಗ್ಗೆ ಎದ್ದು ನೋಡಿದಾಗ ಸತ್ತು ಹೋಗಿತ್ತು. ಸಹಜ ಸಾವೇ ಆಗಿರಬಹುದು ಎಂದು ಅಂದುಕೊಂಡೆ ಎಂದು ಹೇಳಿದ್ದಾಳೆ. ಮಗುವನ್ನು ಪ್ರಿಯಕರನೇ ತಂದುಕೊಟ್ಟ, ನಾನು ಕೇವಲ ಮಲಗಿಸಿದ್ದೆ, ನನ್ನ ತಪ್ಪೇನೂ ಇಲ್ಲ, ಏನಾದರೂ ಆಗಿದ್ದರೆ ಅವನೇ ಮಾಡಿರಬೇಕು ಎಂದು ಪ್ರಿಯಾಂಕ ತನ್ನ ಹೇಳಿಕೆಯಲ್ಲಿ ಹೇಳಿದ್ದಾಳೆ.
ಇನ್ನು ಈ ಪ್ರಕರಣದಲ್ಲಿ ಪೊಲೀಸರು ತೋರಿದ ನಿರ್ಲಕ್ಷ್ಯಕ್ಕೂ ತಕ್ಕ ಶಾಸ್ತಿಯಾಗಿದೆ. ಕಾಡುಗೋಡಿ ಮಗು ಹತ್ಯೆ ಪ್ರಕರಣದಲ್ಲಿ ಕರ್ತವ್ಯ ಲೋಪ ನಡೆದಿದೆ ಎಂಬ ಆರೋಪದಡಿಯಲ್ಲಿ ಪೊಲೀಸರನ್ನು ಅಮಾನತು ಮಾಡಲಾಗಿದೆ. ಒಂದು ಮಗು ಸಾವನ್ನಪ್ಪಿರುವ ಗಂಭೀರ ಪ್ರಕರಣವಾಗಿದ್ದರೂ, ಪ್ರಾಥಮಿಕ ತನಿಖೆಯಿಂದಲೇ ನಿರ್ಲಕ್ಷ್ಯ ತೋರಿರುವುದು, ಸಾಕ್ಷ್ಯ ಸಂಗ್ರಹದಲ್ಲಿ ತಡಮಾಡಿರುವುದು, ಅಗತ್ಯ ಕ್ರಮ ಕೈಗೊಳ್ಳದಿರುವುದು ಸೇರಿದಂತೆ ಈ ಎಲ್ಲಾ ವಿಚಾರಗಳನ್ನು ಮುಂದಿಟ್ಟುಕೊಂಡು ಸಂಬಂಧಿತ ಪೊಲೀಸರನ್ನು ಅಮಾನತು ಮಾಡುವಂತೆ ಆದೇಶಿಸಲಾಗಿದೆ.

ನೋಡಿರಿ

