ಮತಶಿಕಾರಿ ಜೊತೆ ದೋಸೆ ತಯಾರಿ – ಮೈಲಾರಿ ಹೋಟೆಲ್‌ನಲ್ಲಿ ದೋಸೆ ಹಾಕಿದ ಪ್ರಿಯಾಂಕಾ ಗಾಂಧಿ
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕರ್ನಾಟಕದ ಪ್ರವಾಸದಲ್ಲಿದ್ದಾರೆ. ಚಾಮರಾಜನಗರದಲ್ಲಿ ಮಹಿಳೆಯರ ಜೊತೆ ಸಂವಾದ ನಡೆಸಿ, ನಂತರ ಮೈಸೂರಿಗೆ ಬಂದಿರುವ ಪ್ರಿಯಾಂಕಾ ಗಾಂಧಿ ಬುಧವಾರ ದೋಸೆ ಸವಿಯಲು ಮೈಲಾರಿ ಹೋಟೆಲ್‌ಗೆ ಬಂದಿದ್ದರು. ಆಗ ಪ್ರಿಯಾಂಕ ಗಾಂಧಿ ಮೈಲಾರಿ ಹೋಟೆಲ್‌ಗೆ ಬಂದವರಿಗೂ ಸರ್‌ಪ್ರೈಸ್ ನೀಡಿದರು.
ಇದನ್ನೂ ಓದಿ: ಕಾಂಗ್ರೆಸ್‌ಗೆ ಪ್ರಿಯಾಂಕಾ ಗಾಂಧಿ ಬೂಸ್ಟ್ – ಮಹಿಳೆಯರ ಮನಗೆದ್ದ ‘ಕೈ’ ನಾಯಕಿ
ಮೈಸೂರಿನ ಪ್ರಸಿದ್ಧ ಮೈಲಾರಿ ದೋಸೆಯ ಸವಿ ಸವಿಯಲು ಹೋಟೆಲ್‌ಗೆ ಬಂದ ತಾನೇ ಖುದ್ದಾಗಿ ಅಡುಗೆ ಮನೆಗೆ ತೆರಳಿದರು. ನಂತರ ತವಾ ಮೇಲೆ ದೋಸೆ ಹಾಕಿದ್ದಾರೆ. ದೋಸೆ ಮಾಡಿ ಸಂತೋಷ ವ್ಯಕ್ತಪಡಿಸಿದ ಪ್ರಿಯಾಂಕಾ ಬಳಿಕ ದೋಸೆ ಸವಿದು ರುಚಿಗೆ ಮನಸೋತಿದ್ದಾರೆ. ಬಳಿಕ ಮಾತನಾಡಿದ ಅವರು, ನಾನಿಲ್ಲಿ ಇಡ್ಲಿ, ದೋಸೆ ಸವಿದಿದ್ದೇನೆ. ಎಲ್ಲವೂ ತುಂಬಾ ರುಚಿಕರವಾಗಿತ್ತು. ಇದನ್ನು ಮನೆಯಲ್ಲಿ ಹೇಗೆ ಮಾಡಬೇಕು ಎಂಬುದನ್ನು ತಿಳಿದುಕೊಂಡಿದ್ದೇನೆ. ನಾನು ಇದನ್ನು ಮನೆಯಲ್ಲಿಯೂ ಟ್ರೈ ಮಾಡುತ್ತೇನೆ ಎಂದು ಹೇಳಿದರು. ಈ ವೇಳೆ ಪ್ರಿಯಾಂಕಾ ಗಾಂಧಿ ಅವರಿಗೆ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಾಥ್ ನೀಡಿದರು.
ಮೈಲಾರಿ ಹೋಟೆಲ್‌ನಲ್ಲಿ ಪ್ರಿಯಾಂಕಾ ಗಾಂಧಿ ಅವರನ್ನು ನೋಡಿದ ಸ್ಥಳೀಯರು ಖುಷಿಯಿಂದ ಬಂದು ಪೋಟೋ ತೆಗೆಸಿಕೊಂಡರು, ಈ ವೇಳೆ ಪ್ರಿಯಾಂಕಾ ಗಾಂಧಿ ಅವರು ಸ್ಥಳೀಯರೊಂದಿಗೆ ಮಾತನಾಡಿ ಆತ್ಮೀಯತೆ ಮೆರೆದರು.