‘ನಾಲಾಯಕ್’ ಪದ ಮೋದಿಗೆ ಹೇಳಿಲ್ಲವೆಂದ ಪ್ರಿಯಾಂಕ್ ಖರ್ಗೆ – ರಾಹುಲ್ ಅರೆ ಹುಚ್ಚ ಎಂದು ಜರಿದ ಯತ್ನಾಳ್..!

‘ನಾಲಾಯಕ್’ ಪದ ಮೋದಿಗೆ ಹೇಳಿಲ್ಲವೆಂದ ಪ್ರಿಯಾಂಕ್ ಖರ್ಗೆ – ರಾಹುಲ್ ಅರೆ ಹುಚ್ಚ ಎಂದು ಜರಿದ ಯತ್ನಾಳ್..!

ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಮಾತಿನ ಸಮರ ಒಂದೊಂದೇ ಹೆಜ್ಜೆ ಮೀರಿ ಸಾಗುತ್ತಿದೆ. ಮೋದಿ ವಿಷದ ಹಾವು.. ಸೋನಿಯಾ ವಿಷ್ಯಕನ್ಯೆ ಅನ್ನೋ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ವಾಕ್ಸಮರ ಇನ್ನೂ ಚರ್ಚೆಯಲ್ಲಿರುವಾಗಲೇ ಈಗ ಮತ್ತಷ್ಟು ಹೇಳಿಕೆಗಳು ಕೇಳಿಬಂದಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ವಿಷದ ಹಾವು ಇದ್ದಂತೆ ಅನ್ನೋ ಹೇಳಿಕೆ ನೀಡಿ ಬಳಿಕ ತಮ್ಮ ಮಾತಿಗೆ ವಿಷಾದ ಕೂಡ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಖರ್ಗೆ ಪುತ್ರ ಪ್ರಿಯಾಂಕ್, ನಾಲಾಯಕ್ ಬೇಟಾ ಅಂತಾ ಮೋದಿ ಹೆಸರೆತ್ತದೆ ಪರೋಕ್ಷವಾಗಿ ಮಾತನಾಡಿದ್ದಾರೆ.

ಇದನ್ನೂ ಓದಿ: ಮೋದಿ ನಾಗರ ಹಾವಾದರೆ ಸೋನಿಯಾ ಗಾಂಧಿ ವಿಷಕನ್ಯೆನಾ? – ಖರ್ಗೆ ಹೇಳಿಕೆಗೆ ಯತ್ನಾಳ್ ಟಾಂಗ್

ರಾಜ್ಯದಲ್ಲಿ ಪ್ರಚಾರದ ವೇಳೆ ಮೋದಿ, ಬಂಜಾರ ಸಮುದಾಯದವರು ಯಾವುದೇ ಕಾರಣಕ್ಕೂ ಭಯ ಪಡಬಾರದು. ಯಾಕಂದ್ರೆ ನಿಮ್ಮ ಮಗನೊಬ್ಬ ದೆಹಲಿಯಲ್ಲಿದ್ದಾನೆ ಅಂತಾ ಹೇಳಿದ್ರು. ಇದಕ್ಕೆ, ಪ್ರತಿಕ್ರಿಯಿಸಿ ಮಾತನಾಡಿರುವ ಪ್ರಿಯಾಂಕ್ ಖರ್ಗೆ, ಇಂತಹ ನಾಲಾಯಕ್ ಮಗನಿದ್ರೆ ದೇಶ ಹೇಗೆ ನಡೆಯುತ್ತೆ? ದೇಶ ನಡೆಸೋದು ಬಿಡಿ, ಮನೆಯಲ್ಲಿ ಒಬ್ಬ ನಾಲಾಯಕ್ ಮಗನಿದ್ದರೂ ಮನೆ ಸುಸೂತ್ರವಾಗಿ ನಡೆಯಲ್ಲ ಅಂತಾ ಹೇಳಿದ್ದಾರೆ. ಬಳಿಕ ನಾನು ಮೋದಿಗೆ ಹಾಗೆ ಅಂದಿಲ್ಲ ಅಂತಾ ಸ್ಪಷ್ಟನೆ ನೀಡೋ ಪ್ರಯತ್ನ ಮಾಡಿದ್ದಾರೆ. ಮತ್ತೊಂದೆಡೆ ಮಲ್ಲಿಕಾರ್ಜುನ ಖರ್ಗೆ ಮೋದಿಯನ್ನ ಉಲ್ಲೇಖಿಸಿ ಪ್ರಿಯಾಂಕ್ ಮಾತನಾಡಿಲ್ಲ ಅಂತಾ ಮಗನ ಬೆನ್ನಿಗೆ ನಿಂತಿದ್ದಾರೆ.

ಈ ನಡುವೆ ಪ್ರಿಯಾಂಕ್ ಖರ್ಗೆ ಹೇಳಿಕೆ ಬಗ್ಗೆ ಮಾತನಾಡಿರೋ ಬಿಜೆಪಿಯ ನಾಯಕ ಬಸನಗೌಡ ಯತ್ನಾಳ್, ವಾದ್ರಾ-ಗಾಂಧಿ ಕುಟುಂಬವೇ ನಾಲಾಯಕ್ ಕುಟುಂಬ. ಮೂರೂ ಬಿಟ್ಟವರು ಕಾಂಗ್ರೆಸ್ ಪಕ್ಷದಲ್ಲಿ ಇದ್ದಾರೆ. ಎಲ್ಲ ಬಿಟ್ಟು ನಿಂತ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಕಾಂಗ್ರೆಸ್ನಲ್ಲಿದ್ದಾರೆ ಅಂತಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲ, ರಾಹುಲ್ ಗಾಂಧಿ ಅರೆ ಹುಚ್ಚ ಅಂತಾ ಅವಹೇಳನಾಕಾರಿಯಾಗಿ ಮಾತನಾಡಿದ್ದಾರೆ.

suddiyaana