ಯುಗಾದಿ, ರಂಜಾನ್‌ಗೆ ಊರಿಗೆ ಹೋಗ್ತಿದ್ದೀರಾ – ಬಸ್ ದರ ದುಪ್ಪಟ್ಟು.. ಜೇಬಿಗೆ ಮತ್ತೆ ಕತ್ತರಿ!

ಯುಗಾದಿ, ರಂಜಾನ್ ಇರುವುದರಿಂದ ಸಾಲು ಸಾಲು ರಜೆಗಳು ಇವೆ. ಹಬ್ಬಕ್ಕೆ ಊರಿಗೆ ಹೋಗಬೇಕು ಅಂತ ಹೊರಟವರಿಗೆ ಬಸ್ ಮಾಲಕರು ಶಾಕ್ ಕೊಟ್ಟಿದ್ದಾರೆ. ಬಸ್ ದರ ದುಪ್ಪಟ್ಟು ಮಾಡಿದ್ದು, ಪ್ರಯಾಣಿಕ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ.
ಇದನ್ನೂ ಓದಿ: ಚೆನ್ನೈ ವಿರುದ್ಧ ಕಣಕ್ಕಿಳೀತಾರೆ ಸ್ವಿಂಗ್ ಕಿಂಗ್ ಭುವನೇಶ್ವರ್ – ಪಂದ್ಯಕ್ಕೆ ಟಿಕೆಟ್ ಬೆಲೆ ಎಷ್ಟು?
ಹಬ್ಬದ ಹಿನ್ನೆಲೆ ಖಾಸಗಿ ಬಸ್ ಮಾಲೀಕರಿಗೆ ಭರ್ಜರಿ ಲಾಟರಿ ಹೊಡೆದಿದೆ. ಸಿಕ್ಕಿದ್ದೇ ಚಾನ್ಸ್ ಅಂತ ಜನರಿಂದ ಡಬಲ್ ಹಣ ಪೀಕಲು ನಿಂತಿದ್ದಾರೆ. ಮಾರ್ಚ್- 29 ಯುಗಾದಿ ಹಬ್ಬದ ಅಮಾವಾಸ್ಯೆ ಭಾನುವಾರ ಚಾಂದ್ರಮಾನ ಯುಗಾದಿ, ಸೋಮವಾರ ರಂಜಾನ್, ಹೀಗೆ ಒಟ್ಟು ಮೂರು ದಿನಗಳ ಕಾಲ ರಜೆ ಸಿಗುತ್ತದೆ. ಹೀಗಾಗಿ ಮಾರ್ಚ್ 28 ರ ಶುಕ್ರವಾರ ರಾತ್ರಿ ಊರಿಗೆ ತೆರಳಲು ಜನರು ಪ್ಲಾನ್ ಮಾಡುತ್ತಿದ್ದಾರೆ. ಆದರೆ ಖಾಸಗಿ ಬಸ್ಗಳಲ್ಲಿ ದುಪ್ಪಟ್ಟು ದರ ಏರಿಕೆ ಮಾಡಲಾಗಿದೆ. ಇದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಿಂದ ಯಾವ ಊರಿಗೆ ಎಷ್ಟು ಬಸ್ ಟಿಕೆಟ್ ದರ?
ಬೆಂಗಳೂರು-ದಾವಣಗೆರೆ
- ಪ್ರಸ್ತುತ ದರ = 450-1300
- ಹಬ್ಬದ ದರ = 750-5500
ಬೆಂಗಳೂರು-ಧಾರವಾಡ
- ಪ್ರಸ್ತುತ ದರ = 600-1100
- ಹಬ್ಬದ ದರ = 1069-5500
ಬೆಂಗಳೂರು – ಹುಬ್ಬಳ್ಳಿ
- ಪ್ರಸ್ತುತ ದರ=475-1100
- ಹಬ್ಬದ ದರ=1200-4200
ಬೆಂಗಳೂರು-ಬೆಳಗಾವಿ
- ಪ್ರಸ್ತುತ ದರ=389-1200
- ಹಬ್ಬದ ದರ=1129-5500
ಬೆಂಗಳೂರು-ಮಂಗಳೂರು
- ಪ್ರಸ್ತುತ ದರ=650-1300
- ಹಬ್ಬದ ದರ=1200-4500
ಬೆಂಗಳೂರು-ಕಲ್ಬುರ್ಗಿ
- ಪ್ರಸ್ತುತ ದರ=750-1000
- ಹಬ್ಬದ ದರ=1200-2200
ಬೆಂಗಳೂರು-ರಾಯಚೂರು
- ಪ್ರಸ್ತುತ ದರ=650-990
- ಹಬ್ಬದ ದರ=1100-2990
ಬೆಂಗಳೂರು-ಹಾಸನ
- ಪ್ರಸ್ತುತ ದರ=463-1000
- ಹಬ್ಬದ ದರ=750-1600
ಬೆಂಗಳೂರು-ಯಾದಗಿರಿ
- ಪ್ರಸ್ತುತ ದರ=699-900
- ಹಬ್ಬದ ದರ=1300-2200
ಬೆಂಗಳೂರು-ಶಿವಮೊಗ್ಗ
- ಪ್ರಸ್ತುತ ದರ =500-990
- ಹಬ್ಬದ ದರ =1199-1800

ನೋಡಿರಿ

