ಸಾಲು ಸಾಲು ರಜೆ ಎಫೆಕ್ಟ್! – ಮತ್ತೆ ಸುಲಿಗೆಗೆ ಇಳಿದ್ರಾ ಖಾಸಗಿ ಬಸ್ ಮಾಲಿಕರು?

ಸಾಲು ಸಾಲು ರಜೆ ಬರ್ತಿದ್ದಂತೆ ಸಿಟಿಯಲ್ಲಿರುವವರು ಊರಿಗೆ ಹೋಗೋ ಪ್ಲ್ಯಾನ್ ಮಾಡಿಕೊಂಡಿರುತ್ತಾರೆ. ಇದನ್ನೇ ಖಾಸಗಿ ಬಸ್ ಮಾಲೀಕರು ಬಂಡವಾಳ ಮಾಡಿಕೊಂಡಿದ್ದಾರೆ. ಲಾಂಗ್ ವೀಕೆಂಡ್ ಹಾಗೂ ಗಣರಾಜೋತ್ಸವದ ರಜೆ ಹಿನ್ನೆಲೆ ಊರಿಗೆ ಹೊರಟವರಿಗೆ ಶಾಕ್ ಎದುರಾಗಿದೆ. ಖಾಸಗಿ ಬಸ್‌ಗಳ ದರ ದುಪ್ಪಟ್ಟಾಗಿದೆ.
ಇದನ್ನೂ ಓದಿ: BMTC ಬಸ್‌ನಲ್ಲಿ 6 ರೂ. ಬದಲು 60 ಸಾವಿರ ಪಾವತಿಸಿದ ಪ್ರಯಾಣಿಕ! – ಮುಂದೇನಾಯ್ತು ಗೊತ್ತಾ?
ಪ್ರತಿ ಬಾರಿಯೂ ಸಾಲು ಸಾಲು ರಜೆ ಬಂದಾಗ ಖಾಸಗಿ ಬಸ್‌ಗಳು ಬೇಕಾಬಿಟ್ಟಿ ದರ ಏರಿಕೆ ಮಾಡುತ್ತವೆ. ಇದೀಗ ಮತ್ತೆ ಖಾಸಗಿ ಬಸ್‌ಗಳ ದರ ಡಬಲ್ ಆಗಿದೆ. ವೀಕೆಂಡ್ ಜೊತೆ ಗಣರಾಜ್ಯೋತ್ಸವ ರಜೆ ಅಂತ ಊರಿಗೆ ಹೊರಟವರ ಜೇಬು ಸುಡುತ್ತಿದೆ. ಸಾಮಾನ್ಯ ದಿನಗಳಲ್ಲಿ ಸ್ಲೀಪರ್ ಬಸ್ ದರ ₹500 ರಿಂದ ₹800, ₹1000 ಇರುವ ರೇಟ್ ಇದೀಗ 2000 ಗಡಿ ದಾಟಿದೆ. ಇದರಿಂದ ರಜೆ ಇದ್ರೂ ತಮ್ಮ ಊರಿಗೆ ಹೋಗಲು ದುಬಾರಿ ವೆಚ್ಚ ಮಾಡಬೇಕಾಗಿದ್ದು, ಹಿಂದೇಟು ಹಾಕ್ತಿದ್ದಾರೆ.
ಎಲ್ಲಿಂದ ಎಲ್ಲಿಗೆ, ಎಷ್ಟು ದರ ಏರಿಕೆ?
ಬೆಂಗಳೂರು-ಮಂಗಳೂರು
ಸಾಮಾನ್ಯ ದಿನದ ದರ – 500 – 800 ರೂ.
ಹೊಸ ದರ – 1,400 – 2,000 ರೂ.
ಬೆಂಗಳೂರು – ಉಡುಪಿ
ಸಾಮಾನ್ಯ ದಿನದ ದರ – 600 – 750 ರೂ.
ಹೊಸ ದರ – 1,650 – 1,700 ರೂ.
ಬೆಂಗಳೂರು – ಚಿಕ್ಕಮಗಳೂರು
ಸಾಮಾನ್ಯ ದಿನದ ದರ – 550 – 600 ರೂ.
ಹೊಸ ದರ – 1,500 – 1,600 ರೂ.
ಬೆಂಗಳೂರು-ಹಾಸನ
ಸಾಮಾನ್ಯ ದಿನದ ದರ – 650 – 850 ರೂ.
ಹೊಸ ದರ – 700 – 1,500 ರೂ.
ಬೆಂಗಳೂರು- ಬೆಳಗಾವಿ
ಸಾಮಾನ್ಯ ದಿನದ ದರ – 1,200- 1,400 ರೂ.
ಹೊಸ ದರ – 2,500 – 3,000 ರೂ.

ನೋಡಿರಿ

