ಮೊದಲ ದಿನವೇ ಗೆದ್ದ ಬಡೇ ಮಿಯಾ ಚೋಟೆ ಮಿಯಾ – ಪೃಥ್ವಿರಾಜ್ ನಟನೆಗೆ ಬಾಲಿವುಡ್ ಮಂದಿ ಫಿದಾ

ಮೊದಲ ದಿನವೇ ಗೆದ್ದ ಬಡೇ ಮಿಯಾ ಚೋಟೆ ಮಿಯಾ – ಪೃಥ್ವಿರಾಜ್ ನಟನೆಗೆ ಬಾಲಿವುಡ್ ಮಂದಿ ಫಿದಾ

ಬಾಲಿವುಡ್‌ನ ಬಹುನಿರೀಕ್ಷೆಯ ಸಿನಿಮಾ ಬಡೇ ಮಿಯಾ ಚೋಟೆ ಮಿಯಾ ರಿಲೀಸ್ ಆಗಿದೆ. ಅಕ್ಷಯ್ ಕುಮಾರ್, ಟೈಗರ್ ಶ್ರಾಫ್ ಹಾಗೂ ಪೃಥ್ವಿರಾಜ್ ಸುಕುಮಾರನ್ ನಟನೆಯ ಬಡೇ ಮಿಯಾ ಚೋಟೆ ಮಿಯಾ ಮೊದಲ ದಿನವೇ ಪ್ರೇಕ್ಷಕರ ಮನಗೆದ್ದಿದೆ. ರಂಜಾನ್ ಪ್ರಯುಕ್ತ ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾ ಸಕ್ಸಸ್ ಆಗುವ ಎಲ್ಲಾ ಲಕ್ಷಣವೂ ಕಾಣ್ತಿದೆ.

ಇದನ್ನೂ ಓದಿ:ಸುತ್ತೂರು ಮಠಕ್ಕೆ ರೋಬೋ ಆನೆ ‘ಶಿವ’ ಕೊಡುಗೆ ಐಂದ್ರಿತಾ ರೇ, ದಿಗಂತ್‌ ದಂಪತಿ

ಬಾಲಿವುಡ್‌ನ ಸಿನಿಮಾ ಬಡೇ ಮಿಯಾ ಚೋಟೆ ಮಿಯಾ ರಿಲೀಸ್ ಆಗಿದೆ. ಈ ಚಿತ್ರಕ್ಕೆ ಫಸ್ಟ್ ಡೇನೇ ಸಿಕ್ಕಾಪಟ್ಟೆ ರೆಸ್ಪಾನ್ಸ್ ಸಿಕ್ಕಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅಕ್ಷಯ್ ಕುಮಾರ್, ಟೈಗರ್ ಶ್ರಾಫ್​ಗಿಂತ ಪೃಥ್ವಿರಾಜ್ ಪಾತ್ರ ಹೆಚ್ಚು ಇಷ್ಟ ಆಗಿದೆ ಎಂದು ಟ್ವಿಟರ್​ನಲ್ಲಿ ಫ್ಯಾನ್ಸ್ ವಿಮರ್ಶೆ ತಿಳಿಸುತ್ತಿದ್ದಾರೆ. ಈ ಮೊದಲು ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದ ಅಕ್ಷಯ್ ಕುಮಾರ್ ಅವರು ‘ನನಗಿಂತ ಪೃಥ್ವಿರಾಜ್​ ಪಾತ್ರಕ್ಕೆ ಹೆಚ್ಚು ಸಂಭಾಷಣೆ ಇದೆ’ ಎಂದು ಹೇಳಿದ್ದರು. ಈ ಮಾತು ಪ್ರೇಕ್ಷಕರಿಗೆ ನಿಜ ಎನಿಸಿದೆ. ಪೃಥ್ವಿರಾಜ್ ಪಾತ್ರಕ್ಕೆ ಹೆಚ್ಚು ತೂಕ ಇದೆ ಎಂದು ಅನೇಕರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ‘ಭರ್ಜರಿ ಆ್ಯಕ್ಷನ್ ಸಿನಿಮಾ. ಆ್ಯಕ್ಷನ್ ಪ್ರಿಯರಿಗೆ ಇಷ್ಟ ಆಗಲಿದೆ’ ಎಂದು ಕೆಲವರು ಬರೆದುಕೊಂಡಿದ್ದಾರೆ. ಹೆಚ್ಚಿನ ವೀಕ್ಷಕರಿಗೆ ಮಾಲಿವುಡ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಅವರ ವಿಲನ್ ಕ್ಯಾರಕ್ಟರ್ ತುಂಬಾನೇ ಇಷ್ಟ ಆಗಿದೆ.

 

Sulekha