ಪೃಥ್ವಿ ಶಾಗೆ ಯಶಸ್ಸೇ ಶತ್ರುವಾಯ್ತಾ? – 23 ವರ್ಷಕ್ಕೆ 40 ಕೋಟಿ ಗಳಿಸಿದ್ದೇ ಶಾಪ
ಶಿಸ್ತು ಬಿಟ್ಟವನ ಕ್ರಿಕೆಟ್ ಜರ್ನಿ ಮುಗಿಯಿತಾ?
2025ರ ಮೆಗಾ ಹರಾಜಿನಲ್ಲಿ ಸಾಕಷ್ಟು ಪ್ಲೇಯರ್ಸ್ ಅನ್ಸೋಲ್ಡ್ ಆದ್ರು. ಬಟ್ ಎಲ್ಲರಿಗಿಂತ ಜಾಸ್ತಿ ಸದ್ದು ಮಾಡಿದ ಹೆಸ್ರು ಪೃಥ್ವಿ ಶಾ. ಸದ್ದು ಮಾಡಿದ್ದು ಅನ್ನೋದಕ್ಕಿಂತ ಟ್ರೋಲ್ ಆಗಿದ್ದು ಅಂತಾನೇ ಹೇಳ್ಬೋದು. 40ರ ಆಸುಪಾಯಿನ ಪ್ಲೇಯರ್ಗಳೆಲ್ಲಾ ಕೋಟಿಕೋಟಿ ಪಡೆದು ತಂಡಗಳನ್ನ ಸೇರಿಕೊಂಡ್ರೆ 25 ವರ್ಷದ ಪೃಥ್ವಿ ಶಾ ಖರೀದಿಗೆ ಯಾವ ಫ್ರಾಂಚೈಸಿಯೂ ಮುಂದೆ ಬರ್ಲಿಲ್ಲ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಟೀಂ ಇಂಡಿಯಾದ ಡ್ಯಾಷಿಂಗ್ ಓಪನರ್ ವೀರೆಂದ್ರ ಸೆಹ್ವಾಗ್ ಅವ್ರ ಪಡಿಯಚ್ಚು ಅಂತಾನೇ ಕರೆಸಿಕೊಳ್ತಿದ್ದ ಪೃಥ್ವಿ ಶಾ ಮುಂದೊಂದು ದಿನ ಲೆಜೆಂಡ್ ಆಗ್ತಾನೆ ಅಂತಾನೇ ಇಡೀ ಕ್ರಿಕೆಟ್ ಜಗತ್ತು ಮಾತ್ನಾಡಿತ್ತು. ಪದಾರ್ಪಣೆ ಪಂದ್ಯದಲ್ಲೇ ಸೆಂಚುರಿ ಸಿಡಿಸಿದ್ದ ಪೃಥ್ವಿಗೆ ಶಾಪವಾಗಿದ್ದು ಆತನ ಅಶಿಸ್ತಿನ ಜೀವನ. ಇದೇ ಅಶಿಸ್ತಿನಿಂದ ಟೀಂ ಇಂಡಿಯಾದಲ್ಲಿ ಸ್ಥಾನ ಕಳ್ಕೊಂಡಿದ್ದ ಪೃಥ್ವಿ ಈಗ ಐಪಿಎಲ್ನಿಂದಲೂ ಹೊರಬಿದ್ದಿದ್ದಾರೆ. ಯಶಸ್ಸಿನ ಉತ್ತುಂಗಕ್ಕೇರಿ ಒಂದೇ ಬಾರಿಗೆ ಪಾತಾಳಕ್ಕೆ ಕುಸಿದ ಪೃಥ್ವಿ ಲೈಫ್ ನಲ್ಲಿ ಏನೆಲ್ಲಾ ಆಯ್ತು ಅನ್ನೋದೇ ಇಂಟ್ರೆಸ್ಟಿಂಗ್ ಆಗಿದೆ.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಯಿಂದ PAK ಔಟ್? -ಭಾರತ Or ಸೌತ್ ಆಫ್ರಿಕಾದಲ್ಲಿ ಟೂರ್ನಿ
ಭವಿಷ್ಯದ ಸಚಿನ್ ಯುಗಾಂತ್ಯ!
ಆಡಿದ ಮೊದಲ ಟೆಸ್ಟ್ ಪಂದ್ಯದಲ್ಲೇ ಶತಕ ಬಾರಿಸಿದ್ದ. ಅದೂ ಕೂಡ 19ನೇ ವಯಸ್ಸಿನಲ್ಲಿ. ರಣಜಿ ಟ್ರೋಫಿ ಪದಾರ್ಪಣೆಯ ಪಂದ್ಯದಲ್ಲೂ ಶತಕ.. ಆಗ ವಯಸ್ಸು ಬರೀ 18. ಆಡಿದ ಮೊದಲ ದುಲೀಪ್ ಟ್ರೋಫಿ ಪಂದ್ಯದಲ್ಲೂ ಸೆಂಚುರಿ. ಅಬ್ಬಾ. ಅದೆಷ್ಟು ಮಂದಿಗೆ ಇದು ಸಾಧ್ಯವಾಗಿದೆ ಹೇಳಿ. ಬಟ್ ಇದೆಲ್ಲ ನಡೆದು ಜಸ್ಟ್ ಐದು ವರ್ಷಗಳಷ್ಟೇ. ಅಷ್ಟರಲ್ಲೇ ಪೃಥ್ವಿ ಶಾ ಅನ್ನೋ ಒಂದು ವಜ್ರ ಟೀಂ ಇಂಡಿಯಾದಿಂದ ಕಳೆದೇ ಹೋಗಿದೆ. ನಿಜ ಹೇಳ್ಬೇಕಂದ್ರೆ ಪೃಥ್ವಿ ಶಾ ನಿಜಕ್ಕೂ ಬೆಂಕಿಯಲ್ಲಿ ಅರಳಿಯ ಹೂ. ಎರಡೂವರೆ ವರ್ಷ ತುಂಬುವಾಗಲೇ ತಾಯಿಯನ್ನ ಕಳ್ಕೊಂಡಿದ್ದ ಪೃಥ್ವಿಗೆ ಅಪ್ಪ ಪಂಕಜ್ ಶಾರೇ ಎಲ್ಲಾ. ಮಗನ ಕ್ರಿಕೆಟ್ ಕ್ರೇಜ್ ಗುರುತಿಸಿದ್ದ ತಂದೆ ಪಂಕಜ್, ಮಗನಿಗಾಗಿ ಎಲ್ಲವನ್ನೂ ಮಾಡಿದ್ರು. ಟೀಂ ಇಂಡಿಯಾ ಪರ 2018ರ ಅಂಡರ್ 19 ವಿಶ್ವಕಪ್ ನಾಯಕನಾಗಿ ತಂಡವನ್ನ ಚಾಂಪಿಯನ್ ಕೂಡ ಮಾಡಿದ್ರು. ಅಷ್ಟೇ ಅಲ್ಲ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ ಮೊದಲ ಟೆಸ್ಟ್ ಪಂದ್ಯದಲ್ಲೇ ಸೆಂಚುರಿ ಸಿಡಿಸಿ ಭಾರತವ ಭವಿಷ್ಯದ ಸಚಿನ್ ಎಂದೇ ಕರೆಸಿಕೊಂಡಿದ್ದರು. ತಮ್ಮ 23ನೇ ವರ್ಷಕ್ಕೆ ಪೃಥ್ವಿ 30ರಿಂದ 40 ಕೋಟಿ ಸಂಪಾದನೆ ಮಾಡಿದ್ರು. ಹಣ ಹೆಚ್ಚಾದಂತೆಲ್ಲಾ ಪೃಥ್ವಿಗೆ ಮೋಹವೂ ಹೆಚ್ಚಾಗಿತ್ತು. ಬ್ಯಾಟ್ ಬಾಲ್ ಜೊತೆ ಸಂಗ ಬೆಳೆಸಿಕೊಳ್ಳಬೇಕಿದ್ದ ಪೃಥ್ವಿ ಹುಡುಗಿಯರ ಮೋಜಿಗೆ ಬಿದ್ದಿದ್ದ. ಶಹಬ್ಬಾಸ್ ಗಿರಿ ಹೇಳಿಸಿಕೊಳ್ಳಬೇಕಿದ್ದರ ಬಾಯಲ್ಲಿ ಬುದ್ಧಿಮಾತು ಕೇಳುವ ಮಟ್ಟಕ್ಕೆ ಇಳಿದುಬಿಟ್ಟ. ಸಚಿನ್ ತೆಂಡೂಲ್ಕರ್ ಅವ್ರ ಗೆಳೆಯ ವಿನೋದ್ ಕಾಂಬ್ಳಿ ಕೂಡ ಇಂಥದ್ದೇ ಚಟಕ್ಕೆ ಬಿದ್ದು ತಮ್ಮ ಕರಿಯರ್ನ ಹಾಳು ಮಾಡಿಕೊಂಡಿದ್ರು. ಮೊದಮೊದಲ ಪಂದ್ಯಗಳಲ್ಲೇ ಸಿಕ್ಕ ಯಶಸ್ಸು, 22ನೇ ವಯಸ್ಸಿಗೆ ಕಂಡ ಕೋಟಿ ಕೋಟಿ ಹಣ, ಯಶಸ್ಸಿನ ಮದ ಪೃಥ್ವಿಯನ್ನ ದಾರಿ ತಪ್ಪಿದ ಮಗನನ್ನಾಗಿಸಿತು. ಮನೆಯಲ್ಲಿ ಅಮ್ಮನೂ ಇಲ್ಲದ ಪೃಥ್ವಿಗೆ ತಾನಾಡಿದ್ದೇ ಆಟವಾಯ್ತು. ಕ್ರಿಕೆಟ್ ಆಟದ ಮೇಲಿನ ಬದ್ಧತೆ ಹೋಗಿ ಮೋಹದ ಅಲೆಯಲ್ಲಿ ತೇಲಾಡುವಂತೆ ಮಾಡಿತ್ತು. ಪರಿಣಾಮ ಟೀಮ್ ಇಂಡಿಯಾದಿಂದ ಹೊರ ಬಿದ್ದ ಈತ, ಮುಂಬೈ ರಣಜಿ ತಂಡಕ್ಕೂ ಬೇಡವಾದ. ಐಪಿಎಲ್ ಎಂಬ ಕೋಟಿ ಕುಬೇರರ ಕಣದಲ್ಲೂ ಅನ್ಸೋಲ್ಡ್ ಆಗಿದ್ದಾನೆ. ಌಕ್ಚುಲಿ ಯಶಸ್ವಿ ಜೈಸ್ವಾಲ್ ಮತ್ತು ಪೃಥ್ವಿ ಶಾ ಜಲ್ವಾ ಸಿಂಗ್ ಅವ್ರ ಗರಡಿಯಲ್ಲೇ ಪಳಗಿದವ್ರು. ತನ್ನಿಬ್ಬರು ಶಿಷ್ಯರು ಒಂದೇ ನಾಣ್ಯದ ಎರಡು ಮುಖಗಳಂತಿರೋ ಬಗ್ಗೆ ಜಲ್ವಾ ಸಿಂಗ್ ಮಾತನಾಡಿದ್ದಾರೆ. ಪೃಥ್ವಿ ಶಾ ಸಚಿನ್, ಸೆಹ್ವಾಗ್ ಹಾದಿ ಬಿಟ್ಟು ವಿನೋದ್ ಕಾಂಬ್ಳಿ ಹಾದಿಯಲ್ಲಿ ನಡೆದ ಅಂತಾ ಅಸಮಾಧಾನ ಹೊರ ಹಾಕಿದ್ದಾರೆ. ಇನ್ನು ಪೃಥ್ವಿ ಶಾ ಕೊನೆಯ ಬಾರಿಗೆ 3 ವರ್ಷಗಳ ಹಿಂದೆ ಅಂದರೆ ಜುಲೈ 2021ರಲ್ಲಿ ಭಾರತದ ಪರ ಆಡಿದ್ದರು.
ಭವಿಷ್ಯದ ಸಚಿನ್ ತೆಂಡೂಲ್ಕರ್ ಎಂದೇ ಕರೆಸಿಕೊಳ್ಳುತ್ತಿದ್ದ ಪೃಥ್ವಿ, ತಾನು ಮಾಡಿದ ತಪ್ಪುಗಳಿಂದಲೇ ಶಿಕ್ಷೆ ಅನುಭವಿಸುವಂತಾಗಿದೆ. 25 ವರ್ಷದ ಕ್ರಿಕೆಟಿಗನ ಕರಿಯರ್ ಎಂಡ್ ಆಗ್ತಿದೆ. ಫಿಟ್ನೆಸ್ ಕಡೆ ಗಮನ ಕೊಡದೆ, ಬ್ಯಾಟಿಂಗ್ ಲಯ ಕಂಡುಕೊಳ್ಳದ ಪೃಥ್ವಿ, ಮಾಜಿ ಕ್ರಿಕೆಟಿಗರು ನೀಡಿದ ಸಲಹೆಗಳಿಗೂ ಕ್ಯಾರೇ ಎಂದಿರಲಿಲ್ಲ. 2020ರಲ್ಲಿ ಡೋಪಿಂಗ್ ಹಗರಣದಲ್ಲಿ ಸಿಲುಕಿದ್ದ ಪೃಥ್ವಿಗೆ ಸಚಿನ್ ತೆಂಡೂಲ್ಕರ್ ಧೈರ್ಯ ತುಂಬಿದ್ರು. ಪ್ರತಿಭೆಗಿಂತ ಶಿಸ್ತು ಮುಖ್ಯ ಅಂತಾ ಸಲಹೆಯನ್ನೂ ನೀಡಿದ್ರು. ಬಟ್ ಇದ್ಯಾವುದನ್ನೂ ಪೃಥ್ವಿ ತನ್ನ ಬದುಕಲ್ಲಿ ಅಳವಡಿಸಿಕೊಳ್ಳಲೇ ಇಲ್ಲ. ಕಳಪೆ ಫಿಟ್ನೆಸ್ ಮತ್ತು ದೇಹದಲ್ಲಿ ಕೊಬ್ಬು ಬೆಳೆಸಿಕೊಂಡಿದ್ದ ಪೃಥ್ವಿಗೆ ಮುಂಬೈನ ರಣಜಿ ಟ್ರೋಫಿ ಪ್ಲೇಯಿಂಗ್ ಇಲೆವೆನ್ನಿಂದ ಕೈಬಿಡಲಾಗಿತ್ತು. ಇದೀಗ ಐಪಿಎಲ್ನಲ್ಲೂ ಕೇಳೋರೇ ದಿಕ್ಕಿಲ್ಲದಂತಾಗಿದೆ. ಅಸಲಿಗೆ 2025ರ ಐಪಿಎಲ್ ಹರಾಜಿಗೂ ಮುನ್ನವೇ ಪೃಥ್ವಿ ಶಾ ಅನ್ಸೋಲ್ಡ್ ಆಗ್ತಾರೆ ಅಂತಾ ತುಂಬಾ ಜನ ನಿರೀಕ್ಷೆ ಕೂಡ ಮಾಡಿದ್ರು. ಯಾಕಂದ್ರೆ ಆತನ ವರ್ತನೆ ಯಾರಿಗೂ ಇಷ್ಟವಾಗುತ್ತಿರಲಿಲ್ಲ. ಕೋಚ್ಗಳ ಮೇಲೆ ರೇಗಾಡುವ ಪೃಥ್ವಿ ಮೋಜು ಮಸ್ತಿಯಿಂದಲೇ ತನ್ನ ಭವಿಷ್ಯವನ್ನ ಹಾಳುಮಾಡಿಕೊಂಡ್ರು. ಸಿಕ್ಕ ಅವಕಾಶಗಳನ್ನೆಲ್ಲಾ ಕಾಲಲ್ಲಿ ಒದ್ದು ಫಿಟ್ನೆಸ್ ಕಡೆಯೂ ಗಮನ ಕೊಡದೆ ಇದ್ದಿದ್ದೇ ಇವತ್ತಿನ ಸ್ಥಿತಿಗೆ ಕಾರಣ ಆಗಿದೆ.