ಡಿಸಿ ತಂಡಕ್ಕೆ ಮರಳಿದ ಪೃಥ್ವಿ ಶಾ ಭಾವುಕ – ನಮ್ಮ ಹುಡುಗ ಮನೆಗೆ ಮರಳಿದ್ದಾನೆ ಎಂದ ಡೆಲ್ಲಿ ಕ್ಯಾಪಿಟಲ್ಸ್

ಡಿಸಿ ತಂಡಕ್ಕೆ ಮರಳಿದ ಪೃಥ್ವಿ ಶಾ ಭಾವುಕ – ನಮ್ಮ ಹುಡುಗ ಮನೆಗೆ ಮರಳಿದ್ದಾನೆ ಎಂದ ಡೆಲ್ಲಿ ಕ್ಯಾಪಿಟಲ್ಸ್

ಟೀಮ್ ಇಂಡಿಯಾ ಆಟಗಾರ ಪೃಥ್ವಿ ಶಾ ಅವರು ಈ ಬಾರಿ ಐಪಿಎಲ್ ಅಂಗಳದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದೇಶಿಯ ಟೂರ್ನಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಪೃಥ್ವಿ ಶಾ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿ ಖರೀದಿಸಿದೆ. ಮತ್ತೆ ಡಿಸಿಗೆ ಮರಳಿ ಬಂದಿರುವ ಪೃಥ್ವಿ ಶಾ ಭಾವುಕರಾಗಿದ್ದಾರೆ.

ಇದನ್ನೂ ಓದಿ:RCBಗೆ ಟಾಪ್ 4 ಬೆಂಕಿ ಬ್ಯಾಟರ್ಸ್.. ಸಾಲ್ಟ್ & ಕೊಹ್ಲಿ ಅಡ್ವಾಂಟೇಜ್ ಏನು? – ಪವರ್ ಪ್ಲೇ ಗೇಮ್ ಡಿಸೈಡರ್ ಯಾರು?

ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ತನ್ನ ಹಳೇ ಆಟಗಾರ ಪೃಥ್ವಿ ಶಾ ಅವರನ್ನು ಮತ್ತೆ ತಂಡಕ್ಕೆ ಸೇರಿಸಿಕೊಂಡಿದೆ. 75 ಲಕ್ಷ ರೂಪಾಯಿ ಕೊಟ್ಟು ಪೃಥ್ವಿ ಶಾ ಅವರನ್ನು ಖರೀದಿಸಿದೆ. ಡೆಲ್ಲಿ ತಂಡಕ್ಕೆ ಮರಳುತ್ತಿದ್ದಂತೆ ಪೃಥ್ವಿ ಶಾ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಭಾವುಕರಾಗಿದ್ದಾರೆ. ಏಳು ವರ್ಷಗಳ ಕಾಲ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪೃಥ್ವಿ ಶಾ ಪ್ರತಿನಿಧಿಸಿದ್ದರು. 2025 ರ ಸೀಸನ್  ನ ಹರಾಜಿಗೂ ಮುನ್ನ ಡಿಸಿ ಇವರನ್ನು ಬಿಡುಗಡೆ ಮಾಡಿತ್ತು. ಇದಾದ ನಂತರ, ಬೇರೆ ಯಾವುದೇ ಫ್ರಾಂಚೈಸಿ ಅವರನ್ನು ಖರೀದಿಸಿರಲಿಲ್ಲ. ಇದು ಪೃಥ್ವಿ ಶಾ ಅವರ ವೃತ್ತಿಜೀವನದ ಮೇಲೂ ಪರಿಣಾಮ ಬೀರಿತ್ತು. ಕೊನೆಗೂ ಈ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ 75 ಲಕ್ಷ ರೂ.ಗೆ ತನ್ನ ಆಟಗಾರನನ್ನು ಮರಳಿ ಕರೆತಂದಿದೆ.

ಪೃಥ್ವಿ ಶಾ ಅವರು ಭಾನುವಾರ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಂಪ್ ಸೇರಿಕೊಂಡಿದ್ದಾರೆ. ಈ ಸಂದರ್ಭದಲ್ಲಿ, ಹಳೆಯ ನೆನಪುಗಳನ್ನು ನೆನಪಿಸಿಕೊಳ್ಳುತ್ತಾ ಅವರು ಭಾವುಕರಾದರು. ಅವರು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿರುವುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅರುಣ್ ಜೇಟ್ಲಿ ಮೈದಾನ, ಆ ಸದ್ದು, ಮೌನ, ಇಲ್ಲಿ ಆಡಿದ ಯಾವುದೇ ಪಂದ್ಯವನ್ನು ನಾನು ಎಂದಿಗೂ ಮರೆಯುವುದಿಲ್ಲ. ಇದು ನನ್ನನ್ನು ಉತ್ತಮ ಆಟಗಾರನನ್ನಾಗಿ ಮಾಡಿದ ಕ್ರೀಡಾಂಗಣ. ಕೆಲವು ಕಥೆಗಳು ಎಂದಿಗೂ ಮುಗಿಯುವುದಿಲ್ಲ. ಅವು ಮತ್ತೆ ಹುಟ್ಟುತ್ತವೆ. ದೆಹಲಿ ನಿಮ್ಮ ಮಗು ಹಿಂತಿರುಗಿದೆ” ಎಂದು ಶಾ ಭಾವುಕರಾಗಿ ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ವೀಡಿಯೊವನ್ನು ಡೆಲ್ಲಿ ಕ್ಯಾಪಿಟಲ್ಸ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ. ವಿಡಿಯೋಗೆ “ನಮ್ಮ ಹುಡುಗ ಮನೆಗೆ ಮರಳಿದ್ದಾನೆ” ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ಡೆಲ್ಲಿ ಈ ಆವೃತ್ತಿಯಲ್ಲಿ ತನ್ನ ಮೊದಲ ಪಂದ್ಯವನ್ನು ಏಪ್ರಿಲ್ 1 ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಡಲಿದೆ.

Sulekha