ಹಾಸನಕ್ಕೆ ಪತ್ನಿ.. ಹೊಳೆನರಸೀಪುರದಲ್ಲಿ ಪತಿ – ಹೆಚ್.ಡಿ ರೇವಣ್ಣ ವಿರುದ್ಧ ಪ್ರೀತಂ ಗೌಡ ಅಖಾಡಕ್ಕೆ?

ಹಾಸನಕ್ಕೆ ಪತ್ನಿ.. ಹೊಳೆನರಸೀಪುರದಲ್ಲಿ ಪತಿ – ಹೆಚ್.ಡಿ ರೇವಣ್ಣ ವಿರುದ್ಧ ಪ್ರೀತಂ ಗೌಡ ಅಖಾಡಕ್ಕೆ?

ಹಾಸನ ವಿಧಾನಸಭಾ ಕ್ಷೇತ್ರದ ರಾಜಕೀಯ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಇಷ್ಟು ದಿನ ಜೆಡಿಎಸ್ ಟಿಕೆಟ್ ಹಂಚಿಕೆ ವಿಚಾರವಾಗಿ ಭಾರೀ ಚರ್ಚೆಯಾಗುತ್ತಿತ್ತು. ಕೊನೆಗೂ ಜೆಡಿಎಸ್ ಟಿಕೆಟ್ ಅನ್ನು ಸ್ವರೂಪ್ ಪ್ರಕಾಶ್​ಗೆ ಘೋಷಣೆ ಮಾಡಲಾಗಿತ್ತು. ನಾನೇ ಅಭ್ಯರ್ಥಿ ಎಂದು ಸ್ವಯಂ ಘೋಷಣೆ ಮಾಡಿಕೊಂಡಿದ್ದ ಭವಾನಿ ರೇವಣ್ಣ ಕೂಡ ಮುನಿಸು ಮರೆತು ಸ್ವರೂಪ್ ಪರ ಜೈಕಾರ ಹಾಕಿದ್ರು. ಇನ್ನೇನು ಜೆಡಿಎಸ್ ಟಿಕೆಟ್ ಗೊಂದಲ ಮುಗಿಯಿತು ಅನ್ನುವಾಗಲೇ ಬಿಜೆಪಿಯಲ್ಲಿ ಭಾರೀ ಬೆಳವಣಿಗೆಗಳಾಗುತ್ತಿವೆ.

ಅಚ್ಚರಿ ಎನ್ನುವಂತೆ ಹಾಸನ (Hassan) ಕ್ಷೇತ್ರದ ಬಿಜೆಪಿ (BJP) ಅಭ್ಯರ್ಥಿಯಾಗಿ ಶಾಸಕ ಪ್ರೀತಂ ಗೌಡ (Preetham Gowda) ಪತ್ನಿ ಕಾವ್ಯಾ (Kavya) ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದಕ್ಕೂ ಮುನ್ನ ಪ್ರೀತಂ ಗೌಡ ಅವರು ಹಾಸನ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ (Nomination) ಸಲ್ಲಿಕೆ ಮಾಡಿದ್ದರು. ಅವರಿಗೆ ಪತ್ನಿ ಕಾವ್ಯಾ ಸಾಥ್ ನೀಡಿದ್ದರು. ಆದರೆ ಪತ್ನಿ ಕಾವ್ಯಾ ಉಮೇದುವಾರಿಕೆ ಸಲ್ಲಿಕೆ ವೇಳೆ ಪತಿ ಪ್ರೀತಂ ಗೈರಾಗಿದ್ದರು (Absent).  ಪ್ರೀತಂ ಗೌಡ ಪತ್ನಿ ಕಾವ್ಯಾ ಅವರು ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿರುವುದು ತೀವ್ರ ಕುತೂಹಲ ಮೂಡಿಸಿದೆ.

ಇದನ್ನೂ ಓದಿ : ‘₹2 ಕೋಟಿ ಪಡೆದು ಡಿಕೆಶಿ ಟಿಕೆಟ್ ಕೊಟ್ಟಿದ್ದಾರೆ’  – ‘ಕೈ’ ಬಿಟ್ಟು ‘ತೆನೆ’ ಹೊತ್ತ ಮೊಯಿದ್ದೀನ್ ಬಾವ!

ಪ್ರೀತಂ ಪತ್ನಿ ನಾಮಪತ್ರ ಸಲ್ಲಿಕೆ ಹಿಂದೆ ಬಿಜೆಪಿಯ ಮತ್ತೊಂದು ಪ್ಲ್ಯಾನ್ ಇದೆ. ಅದೇನಂದ್ರೆ ಹಾಸನ ಕ್ಷೇತ್ರದಲ್ಲಿ ಮಾತ್ರ ಗೆದ್ದಿದ್ದ ಬಿಜೆಪಿ ಈಗ ಇಡೀ ಜಿಲ್ಲೆಯನ್ನ ತೆಕ್ಕೆಗೆ ತೆಗೆದುಕೊಳ್ಳೋಕೆ ಪ್ಲ್ಯಾನ್ ಮಾಡಿದೆ. ಅದೇನಂದ್ರೆ ಹಾಸನ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಶಾಸಕ ಪ್ರೀತಂ ಗೌಡ ಇದೀಗ, ತಮ್ಮ ರಾಜಕೀಯ ಎದುರಾಳಿ ಹೆಚ್.ಡಿ. ರೇವಣ್ಣ ವಿರುದ್ಧ ಸ್ಪರ್ಧಿಸಲು ತಯಾರಾಗಿದ್ದಾರೆ ಎನ್ನಲಾಗಿದೆ. ಹೀಗಾಗಿ ಹೊಳೇನರಸೀಪುರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದಾರೆ ಎನ್ನುವ ಸುದ್ದಿ ಬಹಿರಂಗವಾಗಿದೆ.

ಹಾಸನದ ಗುಡ್ಡೇನಹಳ್ಳಿ ಬಡಾವಣೆಯಲ್ಲಿ ಏಪ್ರಿಲ್ 20ರ ಬೆಳಗ್ಗೆ ಪ್ರಚಾರದ ವೇಳೆ ಕಾರ್ಯಕರ್ತರ ಜೊತೆ ಮಾತನಾಡಿದ ಪ್ರೀತಂಗೌಡ, ಹೊಳೆನರಸೀಪುರದಲ್ಲಿ ನಾಮಿನೇಷನ್ ಮಾಡಬೇಕು. ಹಾಗಾಗಿ ಬೇಗ ಮುಗಿಸಿ ಎನ್ನುವ ಮಾತುಗಳನ್ನಾಡಿದ್ದಾರೆ. ಅಲ್ಲದೇ ಪ್ರಚಾರ ಕಾರ್ಯಕ್ರಮದಿಂದ ತರಾತುರಿಯಲ್ಲಿ ನಿರ್ಗಮಿಸಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ.

ಈಗಾಗಲೇ ಬಿಜೆಪಿ ಮೊದಲ ಪಟ್ಟಿಯಲ್ಲಿ ದೇವರಾಜೇಗೌಡ ಅವರ ಹೆಸರನ್ನು ಹೊಳೆನರಸೀಪುರ ಕ್ಷೇತ್ರಕ್ಕೆ ಪ್ರಕಟಿಸಿತ್ತು. ಆದ್ರೆ, ಈಗ ಹಾಸನ ಜಿಲ್ಲಾ ರಾಜಕೀಯದಲ್ಲಿ ದಿಢೀರ್ ಮಹತ್ವ ರಾಜಕೀಯ ಬೆಳವಣಿಗೆ ನಡೆದಿದ್ದು, ಅಂತಿಮವಾಗಿ ರೇವಣ್ಣ ವಿರುದ್ಧ ಪ್ರೀತಂಗೌಡ ಅವರನ್ನು ಕಣಕ್ಕಿಳಿಸುವ ತಂತ್ರಗಳು ನಡೆದಿವೆ. ಆದರೆ ನಾಮಪತ್ರ ಸಲ್ಲಿಕೆಗೆ ಇವತ್ತೇ ಕೊನೆಯ ದಿನವಾಗಿರುವುದರಿಂದ ಅಂತಿಮವಾಗಿ ಕಣದಲ್ಲಿ ಯಾರು ಉಳಿಯುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

suddiyaana