ಅಯೋಧ್ಯೆಗೆ ಒಂದು‌ ದಿನ‌ ಮೊದಲೇ ಹೊರಟ ಪ್ರಧಾನಮಂತ್ರಿ – ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೆ ಭರ್ಜರಿ ಸಿದ್ಧತೆ

ಅಯೋಧ್ಯೆಗೆ ಒಂದು‌ ದಿನ‌ ಮೊದಲೇ ಹೊರಟ ಪ್ರಧಾನಮಂತ್ರಿ – ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೆ ಭರ್ಜರಿ ಸಿದ್ಧತೆ

ಪ್ರಧಾನಮಂತ್ರಿ ನರೇಂದ್ರ ಮೋದಿ ರಾಮಮಂದಿರ ಲೋಕಾರ್ಪಣೆಯ ಜೊತೆ ಬಾಲರಾಮನ ಪ್ರಾಣ ಪ್ರತಿಷ್ಠೆಯಲ್ಲಿ ಪಾಲ್ಗೊಳ್ಳಲು  ಭಾನುವಾರವೇ ಅಯೋಧ್ಯೆಗೆ ತಲುಪುತ್ತಿದ್ದಾರೆ. ತಮಿಳುನಾಡು ಪ್ರವಾಸದಲ್ಲಿರುವ ಮೋದಿ ಶನಿವಾರ, ಶ್ರೀರಂಗಂ ಹಾಗೂ ರಾಮೇಶ್ವರಂಗೆ ತೆರಳಿ ದೇವರ ದರ್ಶನ ಪಡೆದು ರಾಮಜನ್ಮಭೂಮಿಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ತಮ್ಮ ರಾಮ ವ್ರತ ಮುಂದುವರೆಸಿದ್ದರು. ಭಾನುವಾರ ರಾಮಾಯಣ ಕಾಲದಲ್ಲಿ ರಾಮ ಲಂಕೆಗೆ ಸೇತುವೆ ಕಟ್ಟಲು ಆರಂಭಿಸಿದ ದನುಷ್ಕೋಡಿಯಲ್ಲಿರುವ ಕೋದಂಡರಾಮನ ದರ್ಶನ ಪಡೆದಿದ್ದಾರೆ.

ಇದನ್ನೂ ಓದಿ:ಜನವರಿ 22ರಂದು ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ – ಕಾಂಗ್ರೆಸ್ ವಿರುದ್ಧ ಅಸ್ತ್ರವಾಗಿ ಪ್ರಯೋಗಿಸಲು ಬಿಜೆಪಿ ಪ್ಲ್ಯಾನ್ 

ಅಯೋಧ್ಯೆಗೆ ಒಂದುದಿನವೇ ಮೊದಲುಹೋಗ್ತಿರೋದೇಕೆ?

ಧನುಷ್ಕೋಡಿಯಲ್ಲಿ ಕೋದಂಡರಾಮನ ದರ್ಶನದ ನಂತರ ಪ್ರಧಾನಿ ಮೋದಿ‌ ನೇರವಾಗಿ ಅಯೋಧ್ಯೆ ತಲುಪಲಿದ್ದಾರೆ. ಅಯೋಧ್ಯೆಯಲ್ಲಿ ಸಾಮಾನ್ಯವಾಗಿ ಬೆಳಗ್ಗೆ ಹತ್ತರಿಂದ ಹನ್ನೊಂದು ಗಂಟೆಯವರೆಗೆ  ಮಂಜಕವಿದ ವಾತಾವರಣ ಇರುವುದರಿಂದ ವಿಮಾನದಲ್ಲಿ ಬಂದಿಳಿಯುವುದು‌ ಕಷ್ಟ. ಹೀಗಾಗಿ ಒಂದು ದಿನವೇ ಮುಂಚಿತವಾಗಿ ಅಯೋಧ್ಯೆಗೆ ತಲುಪಿ ಅಲ್ಲಿ ರಾಮನ ಪ್ರಾಣಪ್ರತಿಷ್ಠೆಯ ವಿಧಿ ವಿಧಾನಗಳಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ.  ಅಲ್ಲದೆ ಸೋಮವಾರ ಬೆಳಗ್ಗೆಯಿಂದಲೇ ರಾಮ‌ಮಂದಿರದ ಲೋಕಾರ್ಪಣೆಯ ವಿಧಿವಿಧಾನಗಳು ನಡೆಯಲಿವೆ.‌ ಬಾಲರಾಮನ ಪ್ರಾಣ ಪ್ರತಿಷ್ಠೆಯ ವೇಳೆ ಯಜಮಾನ ಸ್ಥಾನದಲ್ಲಿ‌ ಪ್ರಧಾನಿ ಮೋದಿ ಕೂರಲಿದ್ದಾರೆ.

Shwetha M