ಕೇರಳದ ಪ್ರಸಿದ್ಧ ದೇವಾಲಯಕ್ಕೆ ಭೇಟಿ ನೀಡಿದ ಪ್ರಧಾನಿ – ಖ್ಯಾತನಟ ಸುರೇಶ್ ಗೋಪಿ ಪುತ್ರಿಯ ಮದುವೆಯಲ್ಲೂ ಭಾಗಿ
ಪ್ರಧಾನಿ ಮೋದಿ ಕೇರಳದ ಗುರುವಾಯೂರಿನಲ್ಲಿರುವ ಪ್ರಸಿದ್ಧ ಶ್ರೀಕೃಷ್ಣ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದೇ ವೇಳೆ ಮೋದಿ ಅವರು ತುಲಾಭಾರ ಮಾಡಲಾಯಿತು.
ಹೌದು, ಪ್ರಧಾನಿ ಮೋದಿ ಅವರು ಅವರು ಸದ್ಯ ಕೇರಳದ ಪ್ರವಾಸದಲ್ಲಿದ್ದಾರೆ. ಕೇರಳಕ್ಕೆ ಭೇಟಿ ನೀಡಿದ ಎರಡನೇ ದಿನದಂದು (ಬುಧವಾರ) ಶ್ರೀ ರಾಮಸ್ವಾಮಿ ದೇವಸ್ಥಾನ ಮತ್ತು ಗುರುವಾಯೂರು ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಐಪಿಎಲ್ ಟೂರ್ನಿ ಮೇಲೆ ಲೋಕಸಭಾ ಚುನಾವಣೆ ಎಫೆಕ್ಟ್ – ಭಾರತದಲ್ಲಿ ನಡೆಯುತ್ತಾ IPL ಟೂರ್ನಿ?
ಪ್ರಧಾನಿ ಮೋದಿ ಅವರು ಕೇರಳ ದೇವಾಲಯಗಳಿಗೆ ಭೇಟಿ ನೀಡಿರುವ ಫೋಟೋಗಳನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಗುರುವಾಯೂರಿನಲ್ಲಿ ಜನರು ನನ್ನನ್ನು ಆಶೀರ್ವದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಜನರ ಪ್ರೀತಿಗೆ ನಾನು ಆಭಾರಿ. ಜನರಿಗಾಗಿ ಇನ್ನಷ್ಟು ಕೆಲಸ ಮಾಡಲು ಇದು ನನ್ನನ್ನು ಪ್ರೇರೇಪಿಸಿದೆ. ಪವಿತ್ರವಾದ ಗುರುವಾಯೂರು ದೇವಸ್ಥಾನದಲ್ಲಿ ಪ್ರಾರ್ಥಿಸಿದೆ. ಈ ದೇವಾಲಯದ ದೈವಿಕ ಶಕ್ತಿ ಅಪಾರವಾಗಿದೆ. ಪ್ರತಿಯೊಬ್ಬ ಭಾರತೀಯನು ಸಂತೋಷದಿಂದ ಮತ್ತು ಸಮೃದ್ಧವಾಗಿರಲಿ ಎಂದು ನಾನು ಪ್ರಾರ್ಥಿಸಿದೆ ಎಂದು ಬರೆದುಕೊಂಡಿದ್ದಾರೆ.
ಶ್ರೀ ರಾಮಸ್ವಾಮಿ ದೇವಾಲಯವು ಭಗವಾನ್ ರಾಮ ಮತ್ತು ಸಹೋದರರಾದ ಭರತ್, ಲಕ್ಷ್ಮಣ ಮತ್ತು ಶತ್ರುಘ್ನರಿಗೆ ಸಮರ್ಪಿತವಾಗಿರುವ ನಾಲ್ಕು ದೇವಾಲಯಗಳ ನಲಂಬಲಂ ಸರ್ಕ್ಯೂಟ್‌ನ ಭಾಗವಾಗಿದೆ. ಮಲಯಾಳಂ ತಿಂಗಳ ಕರ್ಕಿಡಕಂನಲ್ಲಿ ಒಂದೇ ದಿನದಲ್ಲಿ ಎಲ್ಲಾ ನಾಲ್ಕು ದೇವಾಲಯಗಳಿಗೆ ಭೇಟಿ ನೀಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ.
ಪ್ರಧಾನಿ ಮೋದಿ ಅವರು ದೇವರ ದರ್ಶನಕ್ಕೂ ಮುನ್ನ, ಗುರುವಾಯೂರು ದೇವಸ್ಥಾನದಲ್ಲಿ ನಡೆದ ನಟ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಸುರೇಶ್ ಗೋಪಿ ಅವರ ಮಗಳ ವಿವಾಹದಲ್ಲಿ ಪಾಲ್ಗೊಂಡಿದ್ದರು. ನವಜೋಡಿಗಳಿಗೆ ಶುಭಹಾರೈಸಿದರು. ಅತ್ಯಂತ ಮಾದರಿಯಾಗಿ ನಡೆದ ಮದುವೆಯಲ್ಲಿ ಪಾಳ್ಗೊಂಡಿದ್ದ ಮೋದಿ, ವಧುವರರಿಗೆ ಶುಭ ಕೋರಿದರು. ಇದೇ ವೇಳೆ ದೇವಸ್ಥಾನದಲ್ಲಿ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ಉಳಿದ ಜೋಡಿಗೂ ಮೋದಿ ಶುಭ ಹಾರೈಸಿದರು.