ಸಖಾ ಸಪ್ತಪದಾ ಭವ.. ಜೀವನದ ಹಾದಿಯಲ್ಲಿ ಪಾಲುದಾರರಾಗಿ! – ವಿಜಯ್, ರಶ್ಮಿಕಾ ವಿವಾಹಕ್ಕೆ ಪ್ರಧಾನಿ ಮೋದಿ ವಿಶ್!‌

ಸಖಾ ಸಪ್ತಪದಾ ಭವ.. ಜೀವನದ ಹಾದಿಯಲ್ಲಿ ಪಾಲುದಾರರಾಗಿ! – ವಿಜಯ್, ರಶ್ಮಿಕಾ ವಿವಾಹಕ್ಕೆ ಪ್ರಧಾನಿ ಮೋದಿ ವಿಶ್!‌

ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈಗಾಗಲೇ ಮದುವೆಯ ಶಾಸ್ತ್ರಗಳು ಶುರುವಾಗಿದೆ. ನಾಳೆ ವಿರೋಶ್‌ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇದೀಗ ರಶ್ಮಿಕಾ ಹಾಗೂ ವಿಜಯ್‌ ದೇವರಕೊಂಡಗೆ ಪ್ರಧಾನಿ ಮೋದಿ ಶುಭಹಾರೈಸಿದ್ದಾರೆ.

ಇದನ್ನೂ ಓದಿ: ಚಿಕ್ಕಪೇಟೆ ಮೆಟ್ರೋ ನಿಲ್ದಾಣದ ಬಳಿ ಅಗ್ನಿ ಅವಘಡ! – 175 ಅಂಗಡಿಗಳಿದ್ದ ಕಟ್ಟಡದಲ್ಲಿ ಕಾಣಿಸಿಕೊಂಡ ಬೆಂಕಿ!

ರಶ್ಮಿಕಾ ಹಾಗೂ ವಿಜಯ್‌ ಮದುವೆ ಫೆ.26ರಂದು ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿದೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ರಶ್ಮಿಕಾ ಮತ್ತು ವಿಜಯ್ ಮಂದುವೆಗೆ ಶುಭ ಹಾರೈಕೆ ಬಂದಿದೆ. ಪತ್ರದ ಮೂಲಕ ಹಾರೈಸಿರುವ ಪ್ರಧಾನಿ ನರೇಂದ್ರ ಮೋದಿ, ಈ ಮದುವೆಯನ್ನು ದೈವಿಕ ಸ್ಕ್ರಿಪ್ಟ್‌ ಎಂದು ಕರೆದಿದ್ದಾರೆ.

ಪ್ರಧಾನಿ ಮೋದಿ ಬರೆದ ಪತ್ರದಲ್ಲಿ ಏನಿದೆ?

“ಶ್ರೀಮತಿ ಮಾಧವಿ ಮತ್ತು ಶ್ರೀ ಗೋವರ್ಧನ್ ರಾವ್ ದೇವರಕೊಂಡ ಜೀ (ವಿಜಯ್‌ ದೇವರಕೊಂಡ ಪೋಷಕರು) ಅವರಿಗೆ, ಫೆಬ್ರವರಿ 26 ರಂದು ನಡೆಯಲಿರುವ ವಿಜಯ್ ಮತ್ತು ರಶ್ಮಿಕಾ ಅವರ ವಿವಾಹ ಮಹೋತ್ಸವಕ್ಕೆ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಧನ್ಯವಾದಗಳು. ಈ ಅತ್ಯಂತ ಸಂತಸದ ಮತ್ತು ಮಂಗಳಕರ ಸಂದರ್ಭದಲ್ಲಿ ದೇವರಕೊಂಡ ಮತ್ತು ಮಂದಣ್ಣ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಹಾಗೂ ನಿಮ್ಮ ಕುಟುಂಬಕ್ಕೆ ಶುಭಾಶಯಗಳು”

“ಇದು ವಿಜಯ್ ಮತ್ತು ರಶ್ಮಿಕಾ ಅವರ ಜೀವನದ ಒಂದು ಸುಂದರವಾದ ಹೊಸ ಅಧ್ಯಾಯದ ಆರಂಭವಾಗಿದೆ. ‘ಸಖಾ ಸಪ್ತಪದಾ ಭವ’ ಎಂಬ ಮಂತ್ರದ ಆಶಯದಂತೆ, ಏಳು ಹೆಜ್ಜೆಗಳನ್ನು ಜೊತೆಯಾಗಿ ನಡೆಯುವ ಮೂಲಕ ಈ ದಂಪತಿಗಳು ಜೀವನಪರ್ಯಂತ ಪರಸ್ಪರ ಉತ್ತಮ ಸ್ನೇಹಿತರಾಗಲಿ..”

“ವಿಜಯ್ ಮತ್ತು ರಶ್ಮಿಕಾ ಅವರಿಗೆ ಸಿನಿಮಾಗಳ ಸ್ಕ್ರಿಪ್ಟ್ ಹೊಸದೇನಲ್ಲ. ಆದರೆ ಪ್ರೀತಿ ಮತ್ತು ಅನುರಾಗದಿಂದ ತುಂಬಿರುವ ಅವರ ನಿಜಜೀವನದ ಈ ‘ದೈವಿಕ ಸ್ಕ್ರಿಪ್ಟ್’, ಅವರು ಬೆಳ್ಳಿತೆರೆಯ ಮೇಲೆ ಸೃಷ್ಟಿಸಿದ ಮ್ಯಾಜಿಕ್‌ಗಿಂತಲೂ ಮಿಗಿಲಾದ ಪ್ರಭೆಯನ್ನು ಬೀರುವುದರಲ್ಲಿ ಸಂಶಯವಿಲ್ಲ. ಬರುವ ದಿನಗಳು, ತಿಂಗಳುಗಳು ಮತ್ತು ವರ್ಷಗಳು ಹಂಚಿಕೊಂಡ ಕನಸುಗಳಿಂದ ಹಾಗೂ ಅವುಗಳ ಈಡೇರಿಕೆಯಿಂದ ತುಂಬಿರಲಿ”

“ಪರಸ್ಪರ ಕಾಳಜಿ ಮತ್ತು ಪ್ರೀತಿಯಿಂದ ಅವರು ಜವಾಬ್ದಾರಿಗಳನ್ನು ಹಂಚಿಕೊಳ್ಳಲಿ, ಪರಸ್ಪರರ ಲೋಪದೋಷಗಳನ್ನು ಪ್ರೀತಿಯಿಂದ ಸ್ವೀಕರಿಸಲಿ ಮತ್ತು ಒಬ್ಬರ ಬಲದಿಂದ ಇನ್ನೊಬ್ಬರು ಕಲಿಯುತ್ತಾ ಜೀವನದ ಹಾದಿಯಲ್ಲಿ ನಿಜವಾದ ಪಾಲುದಾರರಾಗಿ ಮುನ್ನಡೆಯಲಿ. ಈ ಮಹತ್ವದ ಸಂದರ್ಭದಲ್ಲಿ ನವದಂಪತಿಗಳಿಗೆ ಮತ್ತು ಅವರ ಕುಟುಂಬಗಳಿಗೆ ನನ್ನ ಆಶೀರ್ವಾದಗಳು ಹಾಗೂ ಶುಭ ಹಾರೈಕೆಗಳು” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪತ್ರದಲ್ಲಿ ತಿಳಿಸಿದ್ದಾರೆ.

Shwetha M

Leave a Reply

Your email address will not be published. Required fields are marked *