ಪ್ರಧಾನಿ ಮೋದಿ ರೋಡ್ ಶೋ – ಜೇನು ನೊಣ, ಬೀದಿ ನಾಯಿ, ಹಾವು, ಕೋತಿಗಳಿಗೆ ಬಂಧನ ಭೀತಿ!

ಪ್ರಧಾನಿ ಮೋದಿ ರೋಡ್ ಶೋ – ಜೇನು ನೊಣ, ಬೀದಿ ನಾಯಿ, ಹಾವು, ಕೋತಿಗಳಿಗೆ ಬಂಧನ ಭೀತಿ!

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಹಲವೆಡೆ ಬಿಜೆಪಿ ಪರ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಮೇ 6 ರಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಪ್ರಧಾನಿ ಮೋದಿ ರೋಡ್ ಶೋ ನಡೆಸಲಿದ್ದಾರೆ. ಈ ಹಿನ್ನೆಲೆ ಜೀನು ನೊಣ, ಬೀದಿ ನಾಯಿಗಳಿಗೆ ಬಂಧನದ ಭೀತಿ ಎದುರಾಗಿದೆ.

ಶನಿವಾರ ಪ್ರಧಾನಿ ಮೋದಿ ರೋಡ್ ಶೋ ಹಿನ್ನೆಲೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆ ಬೆಂಗಳೂರಿನ ಕೋಣನಕುಂಟೆ ಹೆಲಿಪ್ಯಾಡ್ ಸುತ್ತಮುತ್ತ ಇರುವ ಬೀದಿನಾಯಿಗಳನ್ನು ಬಂಧಿಸುವಂತೆ ಬಿಬಿಎಂಪಿಗೆ ಕೋಣನಕುಂಟೆ ಇನ್ಸ್ ಪೆಕ್ಟರ್ ಪತ್ರ ಬರೆದಿದ್ದಾರೆ.

ಇದನ್ನೂ ಓದಿ:ಈ ವಾರ ಸಿನಿಮಾ ರಿಲೀಸ್ ಇಲ್ಲ – ಕಾರಣವೇನು ಗೊತ್ತಾ? 

ಬಂಧನದ ಭೀತಿ ಎದುರಾಗಿರೋದು ಕೇವಲ ಬೀದಿ ನಾಯಿಗಳಿಗೆ ಮಾತ್ರ ಅಲ್ಲ. ಕೋಣನಕುಂಟೆ ಹೆಲಿಪ್ಯಾಡ್ ಸುತ್ತಮುತ್ತ ಇರುವ ಕೋತಿ, ಹಾವು, ಜೇನು ನೊಣ ಎಲ್ಲವನ್ನು ಹಿಡಿದು ಸಂರಕ್ಷಣೆ ಮಾಡುವಂತೆ ಬಿಬಿಎಂಪಿಗೆ ಪತ್ರ ಬರೆಯಲಾಗಿದೆ.

ಶನಿವಾರ ಮೇ 6ರಂದು ಬೆಂಗಳೂರು ನಗರದಲ್ಲಿ ನಡೆಯಲಿದ್ದ ಪ್ರಧಾನಿ ನರೇಂದ್ರ ಮೋದಿಯವರು ರೋಡ್ ಶೋದಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದೆ. ಮೇ 6, ಶನಿವಾರದ ಜೊತೆಗೆ ಮೇ 7ರಂದು ಭಾನುವಾರವೂ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ. ಅರ್ಧ ರೋಡ್ ಶೋ ಶನಿವಾರ ನಡೆಯಲಿದ್ದು, ಮುಂದಿನ ಹಂತದ ರೋಡ್ ಶೋವನ್ನು ಭಾನುವಾರ ಬೆಳಗ್ಗೆ ನಡೆಸಲು ತೀರ್ಮಾನಿಸಲಾಗಿದೆ.

suddiyaana