7200 ವಜ್ರಗಳಿಂದ ಮೂಡಿತು ಪ್ರಧಾನಿ ಮೋದಿ ಫೋಟೋ! – ಜನ್ಮದಿನದಂದು ಕೊಡ್ತಾರಂತೆ ಈ ಅಪರೂಪದ ಉಡುಗೊರೆ

7200 ವಜ್ರಗಳಿಂದ ಮೂಡಿತು ಪ್ರಧಾನಿ ಮೋದಿ ಫೋಟೋ! – ಜನ್ಮದಿನದಂದು ಕೊಡ್ತಾರಂತೆ ಈ ಅಪರೂಪದ ಉಡುಗೊರೆ

ದೇಶ – ವಿದೇಶಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಹೆಚ್ಚುತ್ತಿದೆ. ಕೋಟ್ಯಂತರ ಮಂದಿ ಅಭಿಮಾನಿಗಳಿದ್ದಾರೆ. ತಮ್ಮ ನೆಚ್ಚಿನ ನಾಯಕನಿಗಾಗಿ ಅಭಿಮಾನಿಗಳು ವಿಭಿನ್ನವಾದ ಉಡುಗೊರೆಗಳನ್ನು ನೀಡುತ್ತಲೇ ಇರುತ್ತಾರೆ. ಇಲ್ಲೊಬ್ಬ ಅಭಿಮಾನಿ ಪ್ರಧಾನಿ ಮೋದಿ ಅವರಿಗೆ ತಮ್ಮ ಕೈಯಿಂದಲೇ ವಿಶೇಷ ಉಡುಗೊರೆಯನ್ನು ತಯಾರಿಸಿದ್ದಾರೆ. ಈ ವಿಶೇಷ ಉಡುಗೊರೆಯನ್ನು ಪ್ರಧಾನಿ ಮೋದಿ ಅವರ ಹುಟ್ಟಿಹಬ್ಬದಂದೇ ಅವರಿಗೆ ನೀಡಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 17 ರಂದು 73 ನೇ ಜನ್ಮದಿನವನ್ನು ಆಚರಿಸಿಕೊಳ್ಳಲಿದ್ದಾರೆ. ಮೋದಿ ಹುಟ್ಟುಹಬ್ಬದ ಹಿನ್ನೆಲೆ ಸೂರತ್‌ನ ಮೋದಿ ಅಭಿಮಾನಿ ವಿಪುಲ್ ಜೆಪಿವಾಲಾ ಎಂಬುವವರು ಮೋದಿ ಅವರ ಭಾವಚಿತ್ರವನ್ನು  ರಚಿಸಿದ್ದಾರೆ. ಇದು ಸಾಮಾನ್ಯ ಚಿತ್ರವಲ್ಲ. ಈ ಫೋಟೋವನ್ನು ಬರೋಬ್ಬರಿ 7,200 ವಜ್ರಗಳಿಂದ ತಯಾರಿಸಿದ್ದಾರೆ.

ಇದನ್ನೂಓದಿ: ಬೆಂಗಳೂರಿನಲ್ಲಿ ನಾಲ್ಕು ವರ್ಷಗಳ ನಂತರ ಅತ್ಯಧಿಕ ಡೆಂಘೀ ಪ್ರಕರಣಗಳು ದಾಖಲು – ಬಿಬಿಎಂಪಿ ಅಧಿಕಾರಿಗಳ ಜೊತೆ ಆರೋಗ್ಯ ಸಚಿವರ ಮೀಟಿಂಗ್

ವಿಪುಲ್ ವೃತ್ತಿಯಲ್ಲಿ ಆರ್ಕಿಟೆಕ್ಟರ್ ಎಂಜಿನಿಯರ್ ಆಗಿದ್ದಾರೆ. ವಿಪುಲ್ ಇಲ್ಲಿಯವರೆಗೆ ಅನೇಕ ಜನರ ಮನೆಗಳಲ್ಲಿ ಇಂಟೀರಿಯರ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ. ಆದರೆ ಸ್ವಲ್ಪ ಸಮಯದ ನಂತರ ಅವರು ವಿಭಿನ್ನವಾಗಿ ಏನಾದರೂ ಮಾಡಬೇಕೆಂಬ ಆಸೆಯಿಂದ ವಜ್ರದಿಂದ ವಿವಿಧ ರೀತಿಯ ಚಿತ್ರಗಳನ್ನು ಪ್ರಾರಂಭಿಸಿದ್ದಾರೆ.

ಸೂರತ್ ವಿಶ್ವದಲ್ಲೇ ವಜ್ರದ ನಗರ ಎಂದು ಪ್ರಸಿದ್ಧವಾಗಿದೆ. ಆದ್ದರಿಂದ ವಿಪುಲ್ ಅವರು ವಜ್ರದಿಂದ ಪ್ರಧಾನಿಯವರ ಭಾವಚಿತ್ರವನ್ನು ಮಾಡಲು ಬಯಸಿದ್ದರು. ವಿಪುಲ್ ಜೆಪಿವಾಲಾ ಅವರ ಈ ಚಿತ್ರ ಸುಮಾರು ಮೂರೂವರೆ ತಿಂಗಳ ಶ್ರಮದಿಂದ ಪೂರ್ಣಗೊಂಡಿದೆ.

ಈ ಚಿತ್ರವನ್ನು ತಯಾರಿಸಲು ಮೂರು ವಿಭಿನ್ನ ಬಣ್ಣಗಳ ವಜ್ರಗಳನ್ನು ಬಳಸಲಾಗಿದೆ. ಇವು ಅಮೇರಿಕನ್ ವಜ್ರಗಳಾಗಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಅವರ ಪತ್ನಿಗೆ ವಜ್ರಖಚಿತ ಕ್ರಾಫ್ಟ್​ವೊಂದರನ್ನು ಉಡುಗೊರೆಯಾಗಿ ನೀಡಿದ ನಂತರ, ತಮಗೆ ಪ್ರಧಾನಿಯವರ ಈ ಚಿತ್ರವನ್ನು ರಚಿಸಲು ಪ್ರೇರೇಪಿಸಿತು ಎಂದು ತಿಳಿಸಿದ್ದಾರೆ.

ಈ ವಜ್ರಗಳನ್ನು ಅಂಟಿಸಲು ವಿಶೇಷ ರೀತಿಯ ಅಂಟು ಬಳಸಲಾಗಿದೆ. ಈ ವಜ್ರಗಳನ್ನು ದೀರ್ಘಕಾಲದವರೆಗೆ ಅಂಟಿಕೊಂಡಿರಲು ವಿಶೇಷ ರೀತಿಯ ಹಿನ್ನೆಲೆ ಆಕೃತಿಯ ವಜ್ರಗಳನ್ನು ತೆಗೆದುಕೊಳ್ಳಲಾಗಿದೆ. ಪ್ರಧಾನಿಯವರು ತಮ್ಮ ಜೀವನದ 72 ವರ್ಷಗಳನ್ನು ಪೂರೈಸುತ್ತಿದ್ದಾರೆ, ಆದ್ದರಿಂದ ಈ ಚಿತ್ರದಲ್ಲಿ 7200 ವಜ್ರಗಳನ್ನು ಬಳಸಲಾಗಿದೆ ಎಂದಿರುವ ಅವರು, ಈ ಫೋಟೋ ತಯಾರಿಸಲು ಎಷ್ಟು ಖರ್ಚಾಗಿದೆ ಎನ್ನುವುದನ್ನು ಬಹಿರಂಗಪಡಿಸಿಲ್ಲ.

suddiyaana