‘ಪ್ರಧಾನಿ ಮೋದಿ, ಹಾಗೂ ಭಾರತದ ಜನತೆಗೆ ಕ್ಷಮೆಯಾಚಿಸಿ’- ಮಾಲ್ಡೀವ್ಸ್​ ಅಧ್ಯಕ್ಷನಿಗೆ ವಿರೋಧ ಪಕ್ಷದ ನಾಯಕನಿಂದ ಒತ್ತಾಯ

‘ಪ್ರಧಾನಿ ಮೋದಿ, ಹಾಗೂ ಭಾರತದ ಜನತೆಗೆ ಕ್ಷಮೆಯಾಚಿಸಿ’- ಮಾಲ್ಡೀವ್ಸ್​ ಅಧ್ಯಕ್ಷನಿಗೆ ವಿರೋಧ ಪಕ್ಷದ ನಾಯಕನಿಂದ ಒತ್ತಾಯ

ಇಂಡಿಯಾ ಬಾಯ್ಕಾಟ್ ಕ್ಯಾಂಪೇನ್​ ಮಾಡಿ, ಭಾರತದ ವಿರುದ್ಧ ನಿಂತಿರೋ ಮಾಲ್ಡೀವ್ಸ್​​ ಅಧ್ಯಕ್ಷ ಮೊಹಮ್ಮದ್ ಮುಯಿಜು ಅದ್ಯಾವಾಗ ಕುರ್ಚಿಯಿಂದ ಕೆಳಕ್ಕೆ ಬೀಳ್ತಾರೋ ಗೊತ್ತಿಲ್ಲ. ಮಾಲ್ಡೀವ್ಸ್​ ಅಧ್ಯಕ್ಷನ ಪಟ್ಟ ಈಗಾಗಲೇ ಅಲುಗಾಡ್ತಾ ಇದೆ. ಭಾರತವನ್ನ ಎದುರು ಹಾಕ್ಕೊಂಡಿದ್ದಕ್ಕೆ ಅಲ್ಲಿನ ವಿಪಕ್ಷಗಳೆಲ್ಲಾ ಮುಯಿಜು ವಿರುದ್ಧ ರೊಚ್ಚಿಗೆದ್ದಿವೆ. ಮೊಹಮ್ಮದ್ ಮುಯಿಜು ಅವರು ಪ್ರಧಾನಿ ಮೋದಿ ಅವರ ಬಳಿ ಕ್ಷಮೆ ಕೇಳಬೇಕು ಅಂತಾ ವಿಕ್ಷನಾಯಕರು ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಧರ್ಮ ಧ್ವಜ ಸಂಘರ್ಷದ ಕಿಚ್ಚು! – ಬೆಂಗಳೂರಿನ ಮತ್ತೊಂದು ಕಡೆ ಹಸಿರು ಧ್ವಜ ಹಾರಾಟ!

ಹೌದು, ಭಾರತ ಮತ್ತು ಮಾಲ್ಡೀವ್ಸ್​​ ಸಂಬಂಧ ಸಂಪೂರ್ಣ ಹಳ್ಳಹಿಡಿದಿದೆ. ಮಾಲ್ಡೀವ್ಸ್​ನ ಅಧ್ಯಕ್ಷ ಮೊಹಮ್ಮದ್​ ಮುಯಿಜ್ಜು ಭಾರತ ದೇಶವನ್ನು ಹೀಯಾಳಿಸಿದ್ದರು. ಲಕ್ಷ ದ್ವೀಪವನ್ನು ಕೊಳಚೆಗೆ ಹೋಲಿಸಿದ್ದರು. ಆದರೀಗ ಮಾಲ್ಡೀವ್ಸ್​ ಜುಮ್ಹೂರಿ ಪಕ್ಷದ (ಜೆಪಿ) ನಾಯಕ ಖಾಸಿಮ್​ ಇಬ್ರಾಹಿಂ ಅವರು ಈ ಬಗ್ಗೆ ಕ್ಷಮೆ ಕೇಳುವಂತೆ ಮೊಹಮ್ಮದ್​ ಮುಯಿಜ್ಜುಗೆ ಒತ್ತಾಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಜನತೆ ಬಳಿ ಕ್ಷಮೆ ಕೇಳಬೇಕು ಎಂದಿದ್ದಾರೆ.

ಈ ಬಗ್ಗೆ ಮಾತನಾಡಿದ ಖಾಸಿಮ್​ ಇಬ್ರಾಹಿಂ, ಚೀನಾ ಪ್ರವಾಸದ ಬಳಿಕ ಮೊಹಮ್ಮದ್​ ಮುಯಿಜ್ಜು ನೀಡಿರುವ ಹೇಳಿಕೆ ತಪ್ಪು. ಏಕೆಂದರೆ ಅದರಿಂದ ದೇಶಕ್ಕೆ ನಷ್ಟವನ್ನು ಉಂಟು ಮಾಡುತ್ತದೆ. ಅದನ್ನು ಮಾಡಲು ಸಾಧ್ಯವಿಲ್ಲ. ಹೀಗೆ ಮಾಡಬಾರದು ಎಂದು ಮೊಹಮ್ಮದ್​ ಮುಯಿಜ್ಜು ಹೇಳುತ್ತೇನೆ. ಯಾವುದೇ ದೇಶಕ್ಕೆ ಸಂಭಂದಿಸಿದಂತೆ ಅಥವಾ ನೆರೆ ಹೊರೆಯ ದೇಶಕ್ಕೆ ಸಂಬಂಧಿಸಿದಂತೆ ನಾವು ಸಂಬಂಧದ ಮೇಲೆ ಪರಿಣಾಮ ಬೀರುವಂತೆ ಮಾತನಾಡಬಾರದು. ಭಾರತ ಸರ್ಕಾರ ಮತ್ತು ಪ್ರಧಾನಿ ಮೋದಿ ಬಳಿ ಕ್ಷಮೆಯಾಚಿಸಲು​ ಮುಯಿಜ್ಜು ಹೇಳುತ್ತೇನೆ ಎಂದು ಹೇಳಿದ್ದಾರೆ.

Shwetha M