ನರೇಂದ್ರ ಮೋದಿ ತಾಯಿಗೆ ಅನಾರೋಗ್ಯ – ಆಸ್ಪತ್ರೆಗೆ ಆಗಮಿಸಿದ ಪ್ರಧಾನಿ

ನರೇಂದ್ರ ಮೋದಿ ತಾಯಿಗೆ ಅನಾರೋಗ್ಯ – ಆಸ್ಪತ್ರೆಗೆ ಆಗಮಿಸಿದ ಪ್ರಧಾನಿ

ಪ್ರಧಾನಿ ನರೇಂದ್ರ ಮೋದಿ ತಾಯಿ ಅನಾರೋಗ್ಯಕ್ಕೊಳಗಾಗಿದ್ದು, ಅಹ್ಮದಾಬಾದ್​ನ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿನ್ನೆ ರಾತ್ರಿ ಇದ್ದಕ್ಕಿಂತೆ 99 ವರ್ಷದ ಹೀರಾಬೆನ್ ಅವರ ಆರೋಗ್ಯ ಕ್ಷೀಣಿಸಿದೆ. ಕೂಡಲೇ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನುರಿತ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಇನ್ನು ಪ್ರಧಾನಿ ಮೋದಿ ಕೂಡ ಆಸ್ಪತ್ರೆಗೆ ತೆರಳಿ ತಾಯಿಯ ಆರೋಗ್ಯದ ಬಗ್ಗೆ ಮತ್ತು ಚಿಕಿತ್ಸೆ ಕುರಿತು ವೈದ್ಯರ ಬಳಿ ಮಾತುಕತೆ ನಡೆಸಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ ಗುಜರಾತ್ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ ತಾಯಿ ಹೀರಾಬೆನ್​​​ರನ್ನ ಭೇಟಿಯಾಗಿ ಆಶೀರ್ವಾದ ಪಡೆದಿದ್ರು. ಇನ್ನು ನಿನ್ನೆ ಮೈಸೂರಿನಲ್ಲಿ ಪ್ರಧಾನಿ ಸಹೋದರ ಪ್ರಹ್ಲಾದ್ ಮೋದಿಯವರ ಕಾರು ಕೂಡ ಅಪಘಾತಕ್ಕೊಳಗಾಗಿತ್ತು. ಇದ್ರ ಬೆನ್ನಲ್ಲೇ ಮೋದಿ ತಾಯಿಯ ಆರೋಗ್ಯದಲ್ಲಿ ಏರುಪೇರಾಗಿದೆ.

ಇದನ್ನೂ ಓದಿ:  ಬೂಸ್ಟರ್ ಡೋಸ್ ಪಡೆದವರಿಗೆ ಮೂಗಿನ ಮೂಲಕ ಲಸಿಕೆ ಬೇಡ – ತಜ್ಞರ ಸಲಹೆ

ಇನ್ನು ತಾಯಿ ಹೀರಾಬೆನ್ ಆಸ್ಪತ್ರೆಗೆ ದಾಖಲಾದ ವಿಚಾರ ಗೊತ್ತಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಯವರು ಆಸ್ಪತ್ರೆಗೆ ಆಗಮಿಸಿದರು. ಅಹಮದಾಬಾದ್‌ನಲ್ಲಿರುವ ಯುಎನ್‌ ಮೆಹ್ತಾ ಆಸ್ಪತ್ರೆಗೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಿ, ತಾಯಿಯ ಆರೋಗ್ಯ ವಿಚಾರಿಸಿದರು.

ಇನ್ನು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಆಸ್ಪತ್ರೆಗೆ ತೆರಳಿ, ಹೀರಾಬೆನ್ ಅವರ ಆರೋಗ್ಯ ವಿಚಾರಿಸಿದ್ದಾರೆ. ಗುಜಾರಾತ್‌ನ ಶಾಸಕರು ಕೂಡಾ ಆಸ್ಪತ್ರೆಗೆ ತೆರಳಿ ಮೋದಿ ತಾಯಿಯ ಆರೋಗ್ಯ ವಿಚಾರಿಸಿದ್ದಾರೆ.

ಇನ್ನು ಪ್ರಧಾನಿ ತಾಯಿ ಅಸ್ವಸ್ಥರಾಗಿರೋ ವಿಚಾರ ತಿಳಿಯುತ್ತಲೇ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಟ್ವೀಟ್ ಮಾಡಿದ್ದಾರೆ. ತಾಯಿ ಮತ್ತು ಮಗನ ನಡುವಿನ ಪ್ರೀತಿಗೆ ಯಾವತ್ತೂ ಬೆಲೆ ಕಟ್ಟೋಕೆ ಸಾಧ್ಯವಿಲ್ಲ. ಮೋದಿಜೀ..ಇಂಥಾ ಸಂಕಷ್ಟದ ಸಂದರ್ಭದಲ್ಲಿ ನಿಮಗೆ ನನ್ನ ಪ್ರೀತಿ ಮತ್ತು ಬೆಂಬಲ ಯಾವತ್ತೂ ಇರುತ್ತೆ. ನಿಮ್ಮ ಆದಷ್ಟು ಬೇಗ ಆರೋಗ್ಯವಾಗಲಿ ಅಂತಾ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

suddiyaana