NEET ಕಿಚ್ಚಿಗೆ ಕ್ರಿಕೆಟರ್ಸ್ ಸಪೋರ್ಟ್ – ವಿದ್ಯಾರ್ಥಿಗಳ ಬೆನ್ನಿಗೆ ನಿಂತ್ರಾ ಕೊಹ್ಲಿ?
ಅಡ್ಡಗೋಡೆ ಮೇಲೆ ದೀಪ ಇಟ್ಟವರೆಷ್ಟು?

NEET ಕಿಚ್ಚಿಗೆ ಕ್ರಿಕೆಟರ್ಸ್ ಸಪೋರ್ಟ್ – ವಿದ್ಯಾರ್ಥಿಗಳ ಬೆನ್ನಿಗೆ ನಿಂತ್ರಾ ಕೊಹ್ಲಿ?ಅಡ್ಡಗೋಡೆ ಮೇಲೆ ದೀಪ ಇಟ್ಟವರೆಷ್ಟು?

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ದೇಶದಲ್ಲಿ ಕಿಚ್ಚು ಹಚ್ಚಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಲೆದಂಡಕ್ಕೆ ಆಗ್ರಹಿಸಿ ನಡೆಯುತ್ತಿರೋ ಪ್ರತಿಭಟನೆಗೆ ದೆಹಲಿಯ ಜಂತರ್ ಮಂತರ್ ಅಕ್ಷರಶಃ ರಣಾಂಗಣವಾಗಿದೆ. ಪೊಲೀಸರು ಮತ್ತು ಪಟ್ಟು ಬಿಡದ ವಿದ್ಯಾರ್ಥಿಗಳ ನಡುವಿನ ಗಲಾಟೆಯಲ್ಲಿ ಸಾಕಷ್ಟು ಹಿಂಸಾತ್ಮಕ ಘಟನೆಗಳೂ ನಡೆದಿವೆ. ವಿಶ್ವಮಟ್ಟದಲ್ಲಿ ಸದ್ದು ಮಾಡ್ತಿರೋ ಸಂಘರ್ಷದ ಬಗ್ಗೆ ಟೀಂ ಇಂಡಿಯಾದ ಕೆಲ ಕ್ರಿಕೆಟರ್ಸ್ ಕೂಡ ರಿಯಾಕ್ಟ್ ಮಾಡಿದ್ದಾರೆ. ಕೆಲವ್ರು ನೇರಾನೇರ ಹೇಳಿದ್ರೆ ಇನ್ನೊಂದಷ್ಟು ಮಂದಿ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೇಳಿದ್ದಾರೆ. ಸೋ ಈ ನೀಟ್ ಫೈಟ್​ ಬಗ್ಗೆ ಯಾರೆಲ್ಲಾ ಮೌನ ಮುರಿದಿದ್ದಾರೆ.

ಇದನ್ನೂ ಓದಿ : ಬುಮ್ರಾಗಿಲ್ಲ ಬದಲಿ.. ಪಾಂಡ್ಯಗಿಲ್ಲ ರಿಪ್ಲೇಸ್ – 10 ವರ್ಷಗಳಾದ್ರೂ ಪರ್ಯಾಯ ಸಿಕ್ಕಿಲ್ವಾ?

ವಿದ್ಯಾರ್ಥಿಗಳು, ಕಾಕ್ರೋಚ್ ಜನತಾ ಪಕ್ಷದ ಸದಸ್ಯರು, ಕೆಲ ರಾಜಕೀಯ ನಾಯಕರ ಬೆಂಬಲದೊಂದಿಗೆ ದೆಹಲಿಯ ಜಂತರ್ ಮಂತರ್​ನಲ್ಲಿ ಆರಂಭಗೊಂಡಿದ್ದ ಪ್ರತಿಭಟನೆ ಕೋಲಾಹಲವನ್ನೇ ಸೃಷ್ಟಿಸಿದೆ. ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವಿನ ಫೈಟ್​ನಲ್ಲಿ ರಕ್ತವೂ ಚಿಮ್ಮಿದೆ.. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಒಂದೊಂದು ವಿಡಿಯೋಗಳೂ ಸಾಕಷ್ಟು ಪ್ರಶ್ನೆಗಳನ್ನ ಹುಟ್ಟುಹಾಕಿವೆ. ಆರಂಭದಲ್ಲಿ ಈ ಘಟನೆಯಿಂದ ದೂರವೇ ಉಳಿದಿದ್ದ ಸೆಲೆಬ್ರೆಟಿಗಳು ಈಗ ಮಾತಾಡೋಕೆ ಶುರು ಮಾಡಿದ್ದಾರೆ. ಕೆಲ ಕ್ರಿಕೆಟರ್ಸ್ ಕೂಡ ಈ ಪಾರ್ಟಿಗೆ ಜಾಯ್ನ್ ಆಗಿದ್ದಾರೆ.

ನೀಟ್ ಕಿಚ್ಚಿನಲ್ಲಿ ಕ್ರಿಕೆಟರ್ಸ್!

ಮಕ್ಕಳ ಭವಿಷ್ಯ ಸುಭದ್ರವಾಗಬೇಕು ಎಂದು ಸಚಿನ್ ವಿದ್ಯಾರ್ಥಿಗಳಿಗೆ ಬೆಂಬಲ

ನಮ್ಮ ಕನಸಿನ ಭವಿಷ್ಯವನ್ನ ರೂಪಿಸಿಕೊಳ್ಳಲು ಪ್ರತಿಯೊಬ್ಬರು ಅರ್ಹರೆಂದ ಗಿಲ್

ಹಿಂಸಾಚಾರಗಳಿಂದ ಅಲ್ಲ ಮಾತುಕತೆಗಳಿಂದ ಸಮಸ್ಯೆಗಳಿಗೆ ಪರಿಹಾರ-ಯುವಿ

ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಗಳು, ಸರ್ಕಾರದ ಮೇಲೆ ನಂಬಿಕೆ ಇಡಬೇಕು- ಧವನ್

ವಿದ್ಯಾರ್ಥಿಗಳ ಮೇಲೆ ಪೊಲೀಸರ ಹಲ್ಲೆ ಖಂಡಿಸಿದ ಮೊಹಮ್ಮದ್ ಕೈಫ್

ನಮ್ಮ ವಿದ್ಯಾರ್ಥಿಗಳು ನಮ್ಮ ಭವಿಷ್ಯ.. ಅವರ ಕನಸುಗಳನ್ನ ಕಾಪಾಡಿ- ಇರ್ಫಾನ್

ಹೀಗೆ ಬೆರಳೆಣಿಕೆ ಕ್ರಿಕೆಟಿಗರಷ್ಟೇ ಈ ಬಗ್ಗೆ ಮಾತ್ನಾಡಿದ್ದಾರೆ. ಇನ್ನು ಜಸ್ಪ್ರೀತ್ ಬುಮ್ರಾ ಪತ್ನಿ ಸಂಜನಾ ಗಣೇಶನ್ ಈ ಬಗ್ಗೆ ಬ್ಯಾಲೆನ್ಸ್​ಡ್ ರಿಯಾಕ್ಷನ್ ಕೊಟ್ಟಿದ್ರೆ ಅತ್ತ ಸೂರ್ಯಕುಮಾರ್ ಯಾದವ್ ಪತ್ನಿ ದೇವಿಶಾ ಶೆಟ್ಟಿ ಕೇಂದ್ರ ಸರ್ಕಾರದ ಪರವೇ ಬ್ಯಾಟ್ ಬೀಸಿದ್ದಾರೆ. ಇದೆಲ್ಲದ್ರ ನಡುವೆ ಇನ್ನು ದೆಹಲಿಯ ಜಂತರ್ ಮಂತರ್ ಬಳಿ ವಿದ್ಯಾರ್ಥಿಗಳ ಪ್ರತಿಭಟನೆ ನಡೆಯುತ್ತಿದ್ದರೂ ಕೊಹ್ಲಿ ಪ್ರತಿಕ್ರಿಯಿಸಿಲ್ಲ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ರು. ಇದ್ರ ನಡುವೆ ವಿರಾಟ್ ಕೊಹ್ಲಿ ಕೂಡ  ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಸಪೋರ್ಟ್ ಮಾಡಿದ್ದಾರೆ ಎನ್ನುವಂಥ ಪೋಸ್ಟ್ ವೈರಲ್ ಆಗಿದೆ. ಪೋಸ್ಟ್​ನಲ್ಲಿ ವಿದ್ಯಾರ್ಥಿಗಳಿಗೆ ನ್ಯಾಯಯುತ ಮತ್ತು ಪಾರದರ್ಶಕ ಪರೀಕ್ಷಾ ವ್ಯವಸ್ಥೆಯ ಅಗತ್ಯವಿದೆ  ಎಂದು ವಿರಾಟ್ ಕೊಹ್ಲಿ ತಮ್ಮ ಅಧಿಕೃತ ಖಾತೆಯಿಂದ ಬರೆದಿದ್ದಾರೆ ಎನ್ನಲಾದ ಟ್ವೀಟ್‌ನ ಸ್ಕ್ರೀನ್‌ಶಾಟ್ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ವು. ಆದ್ರೆ ಫ್ಯಾಕ್ಟ್ ಚೆಕ್ ಮಾಡಿದಾಗ ಕೊಹ್ಲಿ ಅಂತಹ ಯಾವುದೇ ಪೋಸ್ಟ್ ಅಥವಾ ಹೇಳಿಕೆಯನ್ನು ನೀಡಿಲ್ಲ ಅನ್ನೋದು ಗೊತ್ತಾಗಿದೆ. ಇದು ಫೇಕ್ ಪೋಸ್ಟ್ ಆಗಿದೆ. ಒಟ್ನಲ್ಲಿ ವಿದ್ಯಾರ್ಥಿಗಳು ಮತ್ತು ಸರ್ಕಾರದ ನಡುವಿನ ಈ ಕಿತ್ತಾಟದಲ್ಲಿ ಕೆಲವ್ರು ಮಾತನಾಡಿದ್ರೂ ಸಾಕಷ್ಟು ಕ್ರಿಕೆಟಿಗರು ಮೌನಕ್ಕೆ ಶರಣಾಗಿದ್ದಾರೆ.

Shantha Kumari

Leave a Reply

Your email address will not be published. Required fields are marked *