ಅಮೆರಿಕದಲ್ಲೂ ಸಿಗುತ್ತೆ ಪಾನಿಪುರಿ – ಒಂದು ಪ್ಲೇಟ್ ಪಾನಿಪುರಿ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

ಪಾನಿಪುರಿ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ಮಕ್ಕಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರಿಗೂ ಪಾನಿಪುರಿಯ ಮೇಲೆ ಒಂದು ರೀತಿಯ ವ್ಯಾಮೋಹ ಇದೆ. ಭಾರತದ ಪ್ರತಿ ಬೀದಿ ಬೀದಿಗಳಲ್ಲೂ ಪಾನೀಪುರಿ ಸ್ಟಾಲ್ ಕಾಣಸಿಗುತ್ತೆ. ಭಾರತದ ಅಚ್ಚುಮೆಚ್ಚಿನ ಖಾದ್ಯ ಈಗ ವಿದೇಶದಲ್ಲೂ ಫೇಮಸ್ ಆಗಿದೆ. ಅಮೆರಿಕದಲ್ಲಿ ಇದ್ರ ಬೆಲೆ ಕೇಳಿದ್ರೆ ಶಾಕ್ ಆಗೋದಂತೂ ಪಕ್ಕಾ..
ಇದನ್ನೂ ಓದಿ:ಯೋಗ Vs ವಾಕಿಂಗ್.. ಉತ್ತಮ ಆರೋಗ್ಯಕ್ಕೆ ಇದೇ ಬೆಸ್ಟ್!
ಅಮೆರಿಕದಲ್ಲೂ ಈಗ ಪಾನಿಪುರಿ ಫೇಮಸ್ ಆಗಿದೆ. ಅಮೆರಿಕದ ಹಲವು ನಗರಗಳಲ್ಲಿ ಪಾನಿ ಪುರಿ ಮಾರಾಟವನ್ನು ಪ್ರಾರಂಭಿಸಿದೆ. ಪಾನಿ ಪುರಿ ಸ್ಟಾಲ್ ಈಗ ಅನೇಕ ಸ್ಥಳಗಳಲ್ಲಿ ಗೋಚರಿಸುತ್ತವೆ. ಇದಲ್ಲದೆ, ಅಮೆರಿಕದ ಕೆಲವು ರೆಸ್ಟೋರೆಂಟ್‌ಗಳಲ್ಲಿ ಪಾನಿ ಪುರಿ ಲಭ್ಯವಿದೆ. ಇದೀಗ ಅಮೆರಿಕದಲ್ಲಿರೋ ಭಾರತೀಯರು ಪಾನಿಪುರಿ ಒಂದು ಪ್ಲೇಟ್ ಬೆಲೆ ಎಷ್ಟು ಅಂತ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡ್ತಿದ್ದಾರೆ.
ಭಾರತದಲ್ಲಿ ಸಾಮಾನ್ಯವಾಗಿ ಒಂದು ಪ್ಲೇಟ್ ಪಾನಿಪುರಿ ಬೆಲೆ 30 ರೂಪಾಯಿ ಇರುತ್ತೆ.. ದೊಡ್ಡ ಹೊಟೇಲ್‌ಗಳಲ್ಲಿ ಹೆಚ್ಚಂದ್ರೆ 100 ರಿಂದ 150 ರೂಪಾಯಿ ಇರ್ಬೋದು.. ಆದ್ರೆ ಅಮೆರಿಕದಲ್ಲಿ ಒಂದು ಪ್ಲೇಟ್ ಪಾನಿ ಪುರಿಯ ಬೆಲೆ 7 ರಿಂದ 10 ಡಾಲರ್‌ಗಳ ನಡುವೆ ಇರುತ್ತದೆ. ಅಂದರೆ ಬರೋಬ್ಬರಿ 600 ರೂಪಾಯಿಗಳಿಂದ 800 ರೂಪಾಯಿಗಳವರೆಗೆ ಪಾನಿಪುರಿಯನ್ನ ಮಾರಾಟ ಮಾಡಲಾಗುತ್ತಿದೆ. ಪಾನಿ ಪುರಿಯ ಒಂದು ಪ್ಲೇಟ್ನಲ್ಲಿ 6 ರಿಂದ 8 ಪಾನಿ ಪುರಿಗಳನ್ನು ನೀಡಲಾಗುತ್ತದೆ. ಇದರೊಂದಿಗೆ, ಅಮೆರಿಕದ ಅಂಗಡಿಗಳಲ್ಲಿ ಪಾನಿ ಪುರಿಯ ಪ್ಯಾಕೆಟ್ ಸಹ ಲಭ್ಯವಿದೆ. ಈ ಪ್ಯಾಕೆಟ್ ನಲ್ಲಿ 50 ಪಾನಿ ಪುರಿ ಮತ್ತು ಮಸಾಲಾ ಇರುತ್ತದೆ. ಈ ಪ್ಯಾಕೆಟ್ ನ ಬೆಲೆ ಸುಮಾರು 5 ಡಾಲರ್ ಅಂದರೆ ಸುಮಾರು 400 ರೂಪಾಯಿಗಳು. ಇದೀಗ ಅಮೆರಿಕದಲ್ಲಿ ಪಾನಿಪುರಿ ಬೆಲೆ ಕೇಳಿ ಭಾರತೀಯರು ಶಾಕ್ ಆಗಿದ್ದಾರೆ.

ನೋಡಿರಿ

