ಪಾಕ್ ಕಂಪ್ಲೀಂಟ್ ಪಾಪರ್! – ಲೀ.ಹಾಲಿಗೆ $220.. ಚಿಕನ್ಗೆ $650
ಪಾಕಿಸ್ತಾನದಲ್ಲಿ ದುಬಾರಿ ದುನಿಯಾ!
ಪಾಕಿಸ್ತಾನ ಫುಲ್ ಪಾಪರ್ ಆಗಿದೆ. ಅಲ್ಲಿನ ಜನ ದಿನ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಆದ್ರೂ ಪಾಪಿಗಳ ಪೊಗರು ಮಾತ್ರ ಕಮ್ಮಿಯಾಗುತ್ತಿಲ್ಲ. ಅದ್ರಲ್ಲೂ ರಾವಲ್ಪಿಂಡಿಯಲ್ಲಿ ದಿನಬಳಕೆಯ ವಸ್ತುಗಳ ಬೆಲೆಗಳು ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ಜನತೆ ಅಕ್ಷರಶಃ ನಲುಗಿ ಹೋಗುತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆಗಳನ್ನು ನಿಯಂತ್ರಿಸುವುದಾಗಿ ಸರ್ಕಾರ ಹೇಳುತ್ತಿದ್ದರೂ ಬೆಲೆಗಳು ಮಾತ್ರ ಏರಿಕೆಯಾಗುತ್ತಲೇ ಇವೆ.
ಇದನ್ನೂಓದಿ: ಅಯ್ಯಪ್ಪಸ್ವಾಮಿ ಭಕ್ತರಿಗೆ ಗುಡ್ನ್ಯೂಸ್ – ಶಬರಿಮಲೆಗೆ ಹೋಗಲು KSRTC ಯಿಂದ ವಿಶೇಷ ವ್ಯವಸ್ಥೆ!
ಅಗತ್ಯ ವಸ್ತುಗಳ ಬೆಲೆಯಲ್ಲಿ ಭಾರಿ ಏರಿಕೆ
ದಿನ ನಿತ್ಯ ಬಳಸುವ ವಸ್ತುಗಳ ಬೆಲೆ ಹೆಚ್ಚಾಗಿದೆ. ಬೇಳೆಕಾಳುಗಳು, ಅಡುಗೆ ಎಣ್ಣೆ, ಹಿಟ್ಟು ಮತ್ತು ತರಕಾರಿಗಳಂತಹ ಆಹಾರ ಪದಾರ್ಥಗಳ ಬೆಲೆಗಳು ಭಾರಿ ಏರಿಕೆಯಾಗಿವೆ.
ದಿನ ಬಳಕೆ ವಸ್ತು ಬೆಲೆ ಹೆಚ್ಚಳ
ಉದ್ದಿನ ಬೇಳೆಯ ಬೆಲೆ ಪ್ರತಿ ಕಿಲೋಗ್ರಾಂಗೆ 600 ಪಾಕಿಸ್ತಾನಿ ರೂಪಾಯಿ ಮತ್ತು ಕಡಲೆಕಾಯಿ ಬೆಲೆ ಪ್ರತಿ ಕಿಲೋಗ್ರಾಂಗೆ 400 ಪಾಕಿಸ್ತಾನಿ ರೂಪಾಯಿಗಳಿಗೆ ಏರಿಕೆಯಾಗಿವೆ. ಹಾಗೆಯೇ ಅಡುಗೆ ಎಣ್ಣೆ ಪ್ರತಿ ಲೀಟರ್ ಗೆ 520 ಪಿಕೆಆರ್ಗೆ ತಲುಪಿದೆ ಮತ್ತು ತುಪ್ಪದ ಬೆಲೆ 1500 ಪಿಕೆಆರ್ಗೆ ಏರಿಕೆಯಾಗಿದೆ. ಇನ್ನು ಎಲ್ಲ ಬ್ರಾಂಡ್ಗಳ ತಂಪು ಪಾನೀಯಗಳ ಬೆಲೆ ಈ ಹಿಂದಿನದಕ್ಕಿಂತ 10 ಪಿಕೆಆರ್ ಹೆಚ್ಚಾಗಿದೆ. ಮಸಾಲೆಗಳ ಮೇಲೂ ಹಣದುಬ್ಬರದ ಅಲೆ ಪರಿಣಾಮ ಬೀರಿದೆ.
ಪಾಕಿಸ್ತಾನದಲ್ಲಿ ಗಗನಕ್ಕೇರಿದ ರೇಟ್
ಮಸಾಲೆ ಪದಾರ್ಥಗಳ ಬೆಲೆಗಳು ಶೇಕಡಾ 50 ರಷ್ಟು ಹೆಚ್ಚಳವಾಗಿವೆ. ಚಿಕನ್ ಬೆಲೆ ಪ್ರತಿ ಕೆ.ಜಿ.ಗೆ 650 ರೂ., ಮೊಟ್ಟೆಯ ಡಜನ್ ಗೆ 330 ರೂ. ದರದಲ್ಲಿ ಮಾರಾಟವಾಗುತ್ತಿವೆ. ಹಾಲಿಗೆ ಈಗ ಪ್ರತಿ ಲೀಟರ್ ಗೆ 220 ರೂಪಾಯಿ ಮತ್ತು ಕೆಜಿ ಮೊಸರಿಗೆ 240 ರೂಪಾಯಿ ಪಾವತಿಸಬೇಕಿದೆ.
ಬೆಲೆ ನಿಯಂತ್ರಣಕ್ಕೆ ಹರಸಾಹಸ
ಈ ಹೆಚ್ಚುತ್ತಿರುವ ಬೆಲೆಗಳನ್ನು ನಿಯಂತ್ರಿಸಲು ಕೇಂದ್ರ ದಿನಸಿ ವ್ಯಾಪಾರಿಗಳ ಸಂಘ, ಮಿಲ್ಕ್ ಮೆನ್ ಮಾರುಕಟ್ಟೆ, ಮಟನ್ ಬೀಫ್ ಶಾಪ್ಸ್ ಯೂನಿಯನ್ ಮತ್ತು ಕೋಳಿ ಮಾರಾಟ ಒಕ್ಕೂಟ ಸೇರಿದಂತೆ ವಿವಿಧ ಸ್ಥಳೀಯ ಸಂಘಗಳ ಪ್ರತಿನಿಧಿಗಳು ಬೆಲೆ ನಿಯಂತ್ರಣ ಸಮಿತಿ ಜಿಲ್ಲಾಧಿಕಾರಿಯೊಂದಿಗೆ ಸಭೆ ನಡೆಸಿದ್ದಾರೆ. ಆದ್ರೂ ಆಹಾರ, ದಿನಸಿ ಅಥವಾ ಇತರ ಅಗತ್ಯ ವಸ್ತುಗಳ ಅಧಿಕೃತ ಬೆಲೆ ಪಟ್ಟಿಯನ್ನು ಬಿಡುಗಡೆ ಮಾಡದೆ ಸಭೆ ಮುಕ್ತಾಯಗೊಂಡಿದೆ
ಸರ್ಕಾರದ ವಿರುದ್ಧ ರೊಚ್ಚಿಗೆದ್ದ ಜನ
ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಜನ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಣದುಬ್ಬರವು ಜನತೆಯನ್ನು ತೀವ್ರವಾಗಿ ಬಾಧಿಸಿದ್ದು, ಕುಟುಂಬಗಳ ಬಜೆಟ್ ಏರುಪೇರಾಗುತ್ತಿದೆ. ಇಷ್ಟಾದರೂ ಸರ್ಕಾರ ಏನೂ ಮಾಡದೇ ಕುಳಿತಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.