ವಯಸ್ಸಿಗೂ ಮೊದಲೇ ನಿಮ್ಮ ಕೂದಲು ಬಿಳಿಯಾಗಿದ್ಯಾ? – ಈ ಮನೆಮದ್ದು ಬಳಸಿ ನಿಮ್ಮ ಕೂದಲಿನ ಆರೈಕೆ ಮಾಡಿ

ವಯಸ್ಸಿಗೂ ಮೊದಲೇ ನಿಮ್ಮ ಕೂದಲು ಬಿಳಿಯಾಗಿದ್ಯಾ? – ಈ ಮನೆಮದ್ದು ಬಳಸಿ ನಿಮ್ಮ ಕೂದಲಿನ ಆರೈಕೆ ಮಾಡಿ

ಇತ್ತೀಚಿನ ದಿನಗಳಲ್ಲಂತೂ ಕೂದಲು ಉದುರುವುದು, ಕೂದಲು ಬಿಳಿಯಾಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಆದರೆ ಕೂದಲು ಬಿಳಿಯಾಗುವಿಕೆ, ಕೂದಲು ಉದುರುವ ಸಮಸ್ಯೆ ಹೆಚ್ಚಾದ್ರೆ ಮನಸ್ಸಿನ ಮೇಲೆ ಪರಿಣಾಮ ಬೀರುವುದರ ಜತೆಗೆ ಆತ್ಮವಿಶ್ವಾಸವನ್ನು ಕೂಡ ಕುಗ್ಗಿಸುತ್ತದೆ. ಒತ್ತಡವನ್ನು ಕೂಡ ಹೆಚ್ಚಿಸುತ್ತದೆ. ಕೂದಲು 25 ವರ್ಷಕ್ಕಿಂತ ಮೊದಲು ಬಿಳಿಯಾದರೆ ಅಕಾಲಿಕವಾಗಿ ಕೂದಲು ಬಿಳಿಯಾಗುವುದು ಎಂದು ಕರೆಯುತ್ತಾರೆ. ವಿಟಮಿನ್ ಬಿ 12 ಅಥವಾ ತೀವ್ರ ಕಬ್ಬಿಣ ಅಂಶದ ಕೊರತೆ ಇದಕ್ಕೆ ಕಾರಣ. ಸಾಕಷ್ಟು ಪ್ರೋಟೀನ್ ಮತ್ತು ಇತರ ಅಗತ್ಯ ವಿಟಮಿನ್​​ಗಳ ಕೊರತೆಯಿರುವ ಆಹಾರವು ಅಕಾಲಿಕವಾಗಿ ಕೂದಲು ಬಿಳಿಯಾಗಲು ಕಾರಣವಾಗುತ್ತದೆ.

ಇದನ್ನೂ ಓದಿ:ಬಿಸಿಲಿನ ಝಳಕ್ಕೆ ಚರ್ಮ ಕಪ್ಪಾಗಿದ್ಯಾ? – ಈ ಮನೆ ಮದ್ದು ಬಳಸಿ ತ್ವಚೆಯನ್ನು ಕಾಪಾಡಿ..

ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯಲು ಪೌಷ್ಟಿಕ ಆಹಾರದ ಅಗತ್ಯವಿದೆ. ಹಸಿರು ತರಕಾರಿಗಳು, ಮೊಸರು ಮತ್ತು ತಾಜಾ ಹಣ್ಣುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಇದರ ಜತೆಗೆ ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯಬಹುದು. ಹಾಗೇ ಕೂದಲಿನ ಗುಣಮಟ್ಟವನ್ನು ಸುಧಾರಿಸಬಹುದು. ಆದರೆ, ಈಗಾಗಲೇ ಇರುವ ಬಿಳಿ ಕೂದಲನ್ನು ಏನು ಮಾಡಬೇಕು? ಬಿಳಿ ಕೂದಲನ್ನು ಕಪ್ಪು ಮಾಡಲು ಸಹಾಯ ಮಾಡುವ ಹಲವಾರು ಪರಿಹಾರಗಳಿವೆ. ಕೂದಲಿಗೆ ಬಣ್ಣ ಹಚ್ಚುವ ಮತ್ತು ಹಾನಿಕಾರಕ ರಾಸಾಯನಿಕಗಳನ್ನು ಬಳಸುವ ಅಗತ್ಯವಿಲ್ಲ. ಮನೆಮದ್ದುಗಳು ಬಿಳಿ ಕೂದಲನ್ನು ಕಡಿಮೆ ಮಾಡುತ್ತವೆ ಮತ್ತು ಕಪ್ಪಾಗಿಸುತ್ತವೆ.

ಕರಿಬೇವಿನ ಸೊಪ್ಪು ಮತ್ತು ಕೊಬ್ಬರಿ ಎಣ್ಣೆ

ತೆಂಗಿನ ಎಣ್ಣೆಯಲ್ಲಿ ಕರಿಬೇವಿನ ಎಲೆಗಳು ಕಪ್ಪಾಗುವವರೆಗೆ ಕುದಿಸಬೇಕು. ಮಿಶ್ರಣ ತಣ್ಣಗಾದ ಮೇಲೆ ಕೂದಲಿಗೆ ಮಸಾಜ್ ಮಾಡಿ ರಾತ್ರಿಯಿಡೀ ಬಿಡಬೇಕು. ಮರುದಿನ ಬೆಳಗ್ಗೆ ಕೂದಲನ್ನು ಶಾಂಪೂ ಬಳಸಿ ತೊಳೆಯಬೇಕು. ಪ್ರತಿ ಬಾರಿ ತಲೆ ತೊಳೆಯುವಾಗ, ಈ ಎಣ್ಣೆಯನ್ನು ಕೂದಲಿಗೆ ಹಚ್ಚುವುದನ್ನು ಮರೆಯಬಾರದು. ಕರಿಬೇವಿನ ಎಲೆಗಳಲ್ಲಿರುವ ಬಿ ವಿಟಮಿನ್‌ ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ.

ಬಾದಾಮಿ ಎಣ್ಣೆ ಮತ್ತು ನಿಂಬೆ ರಸ

ಬಾದಾಮಿ ಎಣ್ಣೆ ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡಬೇಕು. ಮಿಶ್ರಣವನ್ನು ನೆತ್ತಿ ಮತ್ತು ಕೂದಲಿನ ಮೇಲೆ ಚೆನ್ನಾಗಿ ಮಸಾಜ್ ಮಾಡಬೇಕು. 30 ನಿಮಿಷಗಳ ಕಾಲ ನೆನೆಯಲು ಬಿಟ್ಟು ಶಾಂಪೂ ಬಳಸಿ ತೊಳೆಯಬೇಕು. ಬಾದಾಮಿ ಎಣ್ಣೆಯಲ್ಲಿರುವ ವಿಟಮಿನ್ ಇ ಕೂದಲಿನ ಬೇರುಗಳನ್ನು ಪೋಷಿಸುತ್ತದೆ ಮತ್ತು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯುತ್ತದೆ. ನಿಂಬೆ ರಸದಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ, ಇದು ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ

ನೆಲ್ಲಿಕಾಯಿ ಮತ್ತು ಮೆಂತ್ಯ ಬೀಜದ ಹೇರ್ ಮಾಸ್ಕ್

ಒಣಗಿದ ನೆಲ್ಲಿಕಾಯಿಗೆ ಸ್ವಲ್ಪ ಮೆಂತ್ಯ ಬೀಜಗಳನ್ನು ತೆಗೆದುಕೊಂಡು ಪುಡಿ ಮಾಡಬೇಕು. ಪೇಸ್ಟ್ ತರಹ ಮಾಡುವುದಕ್ಕಾಗಿ ನೀರನ್ನು ಸೇರಿಸಬೇಕು. ಕೂದಲಿಗೆ ಅದನ್ನು ಹಚ್ಚಿ ರಾತ್ರಿಯಿಡೀ ಬಿಡಬೇಕು. ಮರುದಿನ ಬೆಳಗ್ಗೆ ಶಾಂಪೂನಿಂದ ತೊಳೆಯಬೇಕು. ಆಮ್ಲಾವು ವಿಟಮಿನ್ ಸಿ ಸಮೃದ್ಧ ಮೂಲವಾಗಿದೆ. ಮೆಂತ್ಯ ಬೀಜಗಳು ಕೂದಲಿನ ಗುಣಮಟ್ಟವನ್ನು ಸುಧಾರಿಸಲು ಪ್ರಯೋಜನಕಾರಿ ಪೋಷಕಾಂಶಗಳಿಂದ ತುಂಬಿವೆ. ಇವೆರಡೂ ಒಟ್ಟಾಗಿ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುವುದರ ಜತೆಗೆ ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯುತ್ತದೆ.

suddiyaana