ಮಹಾಕುಂಭ ಮೇಳಕ್ಕೆ ಭೇಟಿ ನೀಡಿದ ಮುರ್ಮು – ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ
![ಮಹಾಕುಂಭ ಮೇಳಕ್ಕೆ ಭೇಟಿ ನೀಡಿದ ಮುರ್ಮು – ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ](https://suddiyaana.com/wp-content/uploads/2025/02/Capture.png)
ದೇಶದ ಪವಿತ್ರ ಧಾರ್ಮಿಕ ಕಾರ್ಯಕ್ರಮ ಎಂದೇ ಪರಿಗಣಿಸಿರುವ, ಕೋಟ್ಯಂತರ ಭಕ್ತರು ಭಾಗವಹಿಸುವ ಮಹಾಕುಂಭ ಮೇಳಕ್ಕೆ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ನೀಡಿದ್ದಾರೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದ ತ್ರಿವೇಣಿ ಸಂಗಮದಲ್ಲಿ ದ್ರೌಪದಿ ಮುರ್ಮು ಅವರು ಪವಿತ್ರ ಸ್ನಾನ ಮಾಡಿದರು. ಗಂಗಾ, ಯುಮುನಾ, ಸರಸ್ವತಿ ನದಿ ಸಂಗಮದಲ್ಲಿ ಬಿಳಿ ಚೂಡಿದಾರ ತೊಟ್ಟು ರಾಷ್ಟ್ರಪತಿಯವರು ಮೂರು ಸಾರಿ ಮುಳುಗೆದ್ದು, ಪ್ರಾರ್ಥನೆ ಸಲ್ಲಿಕೆ ಮಾಡಿದರು. ನಂತರ ಬಿಳಿ ಸೀರೆ ಹೊದ್ದು, ಬಳಿಕ ಗಂಗಾ ಆರತಿ ಎತ್ತಿ ಪೂಜೆ ಸಲ್ಲಿಸಿದರು. ಜವರಿ 13 ಕ್ಕೆ ಆರಂಭ ಆದ ಮಹಾಕುಂಭ ಮೇಳ ಫೆಬ್ರವರಿ 26 ರ ವರೆಗೆ ನಡೆಯಲಿದೆ. ವಿಶ್ವದಲ್ಲೇ ಇದು ಅತಿದೊಡ್ಡ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವಾಗಿದೆ. ವಿಶ್ವ ಹಾಗೂ ದೇಶದ ಮೂಲೆಮೂಲೆಯಿಂದ ಇದಕ್ಕೆ ಆಗಮಿಸುತ್ತಾರೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಕೋಟ್ಯಂತರ ಜನ ಪವಿತ್ರ ಸ್ನಾನ ಮಾಡಿದ್ದಾರೆ. ಮಹಾಶಿವರಾತ್ರಿ ದಿನದಂದು ಕುಂಭಮೇಳಕ್ಕೆ ತೆರೆ ಬೀಳಲಿದೆ. ಉತ್ತರ ಪ್ರದೇಶದ ರಾಜ್ಯಪಾರಾದ ಆನಂದಿಬೇನ್ ಪಟೇಲ್ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಷ್ಟ್ರಪತಿ ದ್ರೌಪದಿ ಮರ್ಮು ಅವರಿಗೆ ಸಂಗಮದಲ್ಲಿ ಸಾಥ್ ನೀಡಿದರು. ರಾಷಟ್ರಪತಿ ಭವನದವರು ಆರಂಭದಲ್ಲಿಯೇ ನೀಡಿದ ಮಾಹಿತಿ ಬಳಿಕ, ಪವಿತ್ರ ಸ್ನಾನದ ನಂತರ ದ್ರೌಪದಿ ಮರ್ಮು ಅವರು, ಅಕ್ಷಯವತ್ ಹಾಗೂ ಹನುಮಾನ್ ಮಂದಿರಕ್ಕೆ ಭೇಟಿ ನೀಡಿ ದರ್ಶನ ಪಡೆಯಲಿದ್ದಾರೆ. ಅಲ್ಲದೆ ಡಿಜಿಟಲ್ ಕುಂಭ ಅನುಭವ ಮಂದಿರಕ್ಕೂ ಭೇಟಿ ನೀಡಲಿದ್ದಾರೆ ಎಂದು ಹೇಳಿದೆ.