ಸೈನಾ ನೆಹ್ವಾಲ್ V/s ರಾಷ್ಟ್ರಪತಿ ಮುರ್ಮು – ಬ್ಯಾಡ್ಮಿಂಟನ್ ಅಂಗಳದಲ್ಲಿ ದ್ರೌಪದಿ
ಇಬ್ಬರ ಮಧ್ಯೆ ಪೈಪೋಟಿ ಹೇಗಿತ್ತು?

ಸೀರೆಯುಟ್ಟು, ಸದಾ ಗಂಭೀರ್ಯತೆಯಿಂದ ಕಾಣಿಸಿಕೊಳ್ಳುತ್ತಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಬ್ಯಾಡ್ಮಿಂಟನ್ ಆಟಗಾರ್ತಿಯಾಗಿ ಕಾಣಿಸಿಕೊಂಡಿದ್ರು.. ಕೈಯಲ್ಲಿ ಬ್ಯಾಟ್.. ವೈಟ್ ಚೂಡಿದಾರ್.. ಹೌದು ರಾಷ್ಟ್ರಪತಿ ದ್ರೌಪದಿ ಮುರ್ಮು ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಜೊತೆ ಬ್ಯಾಡ್ಮಿಂಟನ್ ಆಡೋ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಕೆಲ ವೇದಿಕೆಗಳಲ್ಲಿ ಕ್ರೀಡೆ ಕುರಿತು ತಮಗಿರುವ ಆಸಕ್ತಿ ಬಗ್ಗೆ ವ್ಯಕ್ತಪಡಿಸಿದ್ದರು.. ಇದಲ್ಲದೇ ದೇಶದ ಕುರಿತು ಮಾತನಾಡಿರುವುದನ್ನ ನಾವು ನೋಡಿದ್ದೇವೆ.. ಆದ್ರೆ ಇದೀಗ ರಾಷ್ಟ್ರಪತಿ ಬ್ಯಾಡ್ಮಿಂಟನ್ ಆಡೋ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಜೊತೆ ಬ್ಯಾಡ್ಮಿಂಟನ್ ಕೋರ್ಟ್‌ನಲ್ಲಿ ಮುರ್ಮು ಕಾಣಿಸಿಕೊಂಡಿದ್ದಾರೆ. ಅವರ ಜೊತೆ ಬ್ಯಾಡ್ಮಿಂಟನ್ ಆಡುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.
ಇದನ್ನೂ ಓದಿ: ಚಿರಮೌನಿಯಾದ ಮಾತಿನ ಮಲ್ಲಿ – ಅಚ್ಚ ಕನ್ನಡತಿ ಅಪರ್ಣಾ ಇನ್ನು ನೆನಪು ಮಾತ್ರ
ರಾಷ್ಟ್ರಪತಿ ಭವನದಲ್ಲಿನ ಕೋರ್ಟ್‌ನಲ್ಲಿ ದ್ರೌಪದಿ ಮುರ್ಮು ಕೆಲ ಹೊತ್ತು ಬ್ಯಾಡ್ಮಿಂಟನ್ ಆಡಿದ್ದಾರೆ. ಸೈನಾ ನೆಹ್ವಾಲ್ ಜೊತೆ ಯಾವುದೇ ಅಡೆತಡೆ ಇಲ್ಲದೇ ರಾಷ್ಟ್ರಪತಿ ಆಡಿದ್ದು, ಅನುಭವಿ ಆಟಗಾರರಂತೆ ಕಂಡುಬಂದ್ರು.. ಎರದುರಾಳಿ ಸೈನಾ ವಿರುದ್ಧ ಒಂದು ಅಂಕ ಗಳಿಸುವ ಮೂಲಕ ತಮ್ಮ ಸಾಮರ್ಥ್ಯ ಪ್ರದಶಿರ್ಸಿಸಿದರು. ಮುರ್ಮು ಅವರು ಅಂಕ ಗಳಿಸುತ್ತಿಂದತೆ ನೆರದಿದ್ದ ಕ್ರೀಡಾಪಟುಗಳು ಜೋರಾಗಿ ಚಪ್ಪಾಳೆ ತಟ್ಟುತ್ತ ಅವರನ್ನು ಪ್ರೋತ್ಸಾಹಿಸಿದರು. ಸೈನಾ ಮತ್ತು ಮುರ್ಮು ಬ್ಯಾಡ್ಮಿಂಟನ್ ಆಡುತ್ತಿರುವ ವಿಡಿಯೊವನ್ನು ರಾಷ್ಟ್ರಪತಿ ಭವನ ಅಧಿಕೃತ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದೆ.
ಅಧ್ಯಕ್ಷೆ ದ್ರೌಪದಿ ಮುರ್ಮು ಅವರೊಂದಿಗೆ ಬ್ಯಾಡ್ಮಿಂಟನ್ ಆಡಿದ ನಂತರ ಸೈನಾ ನೆಹ್ವಾಲ್ ಕೂಡ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಮುರ್ಮು ಅವರೊಂದಿಗೆ ಬ್ಯಾಡ್ಮಿಂಟನ್ ಆಡಿದ್ದನ್ನು ಮರೆಯಲಾಗದ ದಿನ ಎಂದು ಹೇಳಿದ್ದಾರೆ. ಇದು ನನ್ನ ಜೀವನದಲ್ಲಿ ಮರೆಯಲಾಗದ ದಿನ. ನನ್ನೊಂದಿಗೆ ಬ್ಯಾಡ್ಮಿಂಟನ್ ಆಡಿದ್ದಕ್ಕಾಗಿ ಅಧ್ಯಕ್ಷೆ ಮೇಡಂ ದ್ರೌಪದಿ ಮುರ್ಮು ಅವರಿಗೆ ತುಂಬಾ ಧನ್ಯವಾದಗಳು ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ
ನಿನ್ನೆ ಅವಳ ಕತೆ, ನನ್ನ ಕತೆ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಎಲ್ಲಾ ಕ್ಷೇತ್ರದಲ್ಲೂ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ. ಮಹಿಳೆಯರಿಗೆ ಮತ್ತಷ್ಟು ಪ್ರೋತ್ಸಾಹ, ಹಾಗೂ ಸಾಧಕರ ಸ್ಪೂರ್ತಿ ಮಾತುಗಳು ಇತರರಿಗೆ ಪ್ರೇರಣೆಯಾಗಲು ಈ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಲ್ಲಿ ಮಹಿಳಾ ಸಾಧಕರ ಕುರಿತ ಉಪನ್ಯಾಸ ಸರಣಿಯಲ್ಲಿ ಈ ಬಾರಿ ಸೈನಾ ನೆಹ್ವಾಲ್ ಪಾಲ್ಗೊಂಡಿದ್ದಾರೆ. ದ್ರೌಪದಿ ಮುರ್ಮು ವಿಶೇಷ ಆಸಕ್ತಿ ವಹಿಸಿರುವ ಈ ಕಾರ್ಯಕ್ರಮಕ್ಕೂ ಮೊದಲು ಬ್ಯಾಡ್ಮಿಂಟನ್ ಆಡಿ ಗಮನಸೆಳೆದಿದ್ದಾರೆ.