ಲಾಲ್‌ಬಾಗ್‌ನಲ್ಲಿ ಹೂವಲ್ಲಿ ಅರಳಲಿದ್ದಾರೆ ಕಿತ್ತೂರು ಚೆನ್ನಮ್ಮ – 218ನೇ ಫ್ಲವರ್ ಶೋಗೆ ಭರದ ಸಿದ್ಧತೆ

ಲಾಲ್‌ಬಾಗ್‌ನಲ್ಲಿ ಹೂವಲ್ಲಿ ಅರಳಲಿದ್ದಾರೆ ಕಿತ್ತೂರು ಚೆನ್ನಮ್ಮ –  218ನೇ ಫ್ಲವರ್ ಶೋಗೆ ಭರದ ಸಿದ್ಧತೆ

ಸ್ವಾತಂತ್ರ್ಯದಿನಾಚರಣೆ ಅಂಗವಾಗಿ ಬೆಂಗಳೂರಿನ ಲಾಲ್‌ಬಾಗ್‌ನ ರಂಗು ಮತ್ತಷ್ಟು ಹೆಚ್ಚಾಗಲಿದೆ. ಈ ಬಾರಿ ಬೆಂಗಳೂರಿನ ಐತಿಹಾಸಿಕ ಲಾಲ್‌ಬಾಗ್‌ ಉದ್ಯಾನವನದಲ್ಲಿ 218ನೇ ಫ್ಲವರ್‌ ಶೋ ನಡೆಯಲಿದೆ. ವೀರನಾರಿ ಕಿತ್ತೂರು ಚೆನ್ನಮ್ಮ ಬಗೆ ಬಗೆ ಹೂವುಗಳಲ್ಲಿ ಅರಳಲಿದ್ದು, ಕಣ್ತುಂಬಿಕೊಳ್ಳಲು ಜನ ಕಾಯುತ್ತಿದ್ದಾರೆ.

ಇದನ್ನೂ ಓದಿ:ಸೇಫ್ ಆಗಿ ಭೂಮಿಗೆ ಬಂದ ಶುಭಾಂಶು ಶುಕ್ಲಾ – ಯಶಸ್ವಿಯಾಗಿ ಮುಗಿದ ನಾಲ್ವರ ಗಗನಯಾತ್ರೆ

ಪ್ರತಿವರ್ಷದಂತೆ ಈ ಬಾರಿಯೂ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಫ್ಲವರ್​ ಶೋ ನಡೆಸಲಾಗುತ್ತಿದೆ. ತೋಟಗಾರಿಕೆ ಇಲಾಖೆ ವತಿಯಿಂದ ಫ್ಲವರ್​ ಶೋ ಅದ್ಧೂರಿಯಾಗಿ ನಡೆಯಲಿದೆ. ಈ ಬಾರಿಯ ಫ್ಲವರ್‌ ಶೋ ಆಗಸ್ಟ್ 7 ರಿಂದ 18, 2025 ರವರೆಗೆ ನಡೆಯಲಿದೆ. ಕಿತ್ತೂರು ರಾಣಿ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣರ ಶೌರ್ಯಗಾಥೆಯನ್ನಿಟ್ಟುಕೊಂಡು ಈ ಬಾರಿಯ ಫ್ಲವರ್‌ ಶೋ ಆಯೋಜನೆ ಮಾಡಲಾಗಿದೆ. ವೀರಯೋಧರ ಹೋರಾಟದ ಕಥೆಯನ್ನು ರಂಗುರಂಗಾದ ಹೂವಿನ ವಿನ್ಯಾಸಗಳ ಮೂಲಕ ಪ್ರದರ್ಶನ ನಡೆಯಲಿದೆ. ಜೊತೆಗೆ ದೇಶದ ವಿವಿಧ ರಾಜ್ಯಗಳಿಂದ ತಂದಿರುವ ವೈವಿಧ್ಯಮಯ ಹೂವಿನ ಜಾತಿಗಳು ಈ ಬಾರಿಯ ವಿಶೇಷ.

ಲಾಲ್‌ಬಾಗ್‌ ನಲ್ಲಿ 1912ರಿಂದ ಈ ಫ್ಲವರ್‌ ಶೋ ಆರಂಭವಾಗಿತ್ತು. ಈ ಬಾರಿ 218ನೇ ಫ್ಲವರ್‌ ಶೋ ನಡೆಯಲಿದೆ. ಲಾಲ್‌ಬಾಗ್‌ನ ಗಾಜಿನ ಮನೆ ಘಮ ಘಮ ಸುಮಗಳಿಂದ ಕಂಗೊಳಿಸಲಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ.

Sulekha