ನಿತ್ಯಾ ಪ್ರೇಮಿ ಮದುವೆ ಮಂಟಪದಿಂದ ಪರಾರಿ – ಕರ್ಣ ಪ್ರೀತಿ ತ್ಯಾಗ ಮಾಡೋ ಟೈಮ್ ಬಂದಾಯ್ತು..!

ನಿತ್ಯಾ ಪ್ರೇಮಿ ಮದುವೆ ಮಂಟಪದಿಂದ ಪರಾರಿ – ಕರ್ಣ ಪ್ರೀತಿ ತ್ಯಾಗ ಮಾಡೋ ಟೈಮ್ ಬಂದಾಯ್ತು..!

ಕರ್ಣ ಸೀರಿಯಲ್‌ನಲ್ಲಿ ಮೊದಲೇ ಪ್ರೋಮೋ ತೋರಿಸಿಯಾಗಿತ್ತು. ಕರ್ಣ ಮತ್ತು ನಿತ್ಯಾ ಮದುವೆಯಾಗುವುದು ಖಂಡಿತಾ ಅನ್ನೋ ಪ್ರೋಮೋ ಮೊದಲೇ ರಿಲೀಸ್ ಆಗಿತ್ತು. ಆದರೆ, ನಿಧಿನ ಬಿಟ್ಟು ನಿತ್ಯಾನ ಮದುವೆಯಾಗುವುದು ಯಾಕೆ ಎಂಬ ವಿಚಾರ ಈಗ ರಿವೀಲ್ ಆಗಿದೆ.

ಇದನ್ನೂ ಓದಿ:ನಿಧಿ ಜೊತೆ ಕರ್ಣನ ಮದುವೆ ನಡೆಯಲ್ವಾ? – ವಾರ ಪೂರ್ತಿ ಪ್ರಸಾರವಾಗಲಿದೆ ಮದುವೆ ಸಂಭ್ರಮ

ಕರ್ಣ ಸೀರಿಯಲ್‌ನಲ್ಲಿ ಆ ಸಮಯ ಬಂದೇ ಬಿಟ್ಟಿದೆ. ಯಾವ ಹೂವು ಯಾರ ಮುಡಿಗೋ ಎಂಬ ಮಾತು ನಿಜವಾಗಿದೆ. ಕರ್ಣನ ತಂದೆ ರಮೇಶ್‌ ಕುತಂತ್ರಕ್ಕೆ ಪ್ರೀತಿ ಬಲಿಯಾಗಿದೆ. ಈಗ ನಿತ್ಯಾ ಮತ್ತು ಕರ್ಣನ ವಿವಾಹಕ್ಕೆ ಸಿದ್ಧತೆ ನಡೆದಿದೆ. ಕುತಂತ್ರಿ ರಮೇಶ್ ಗೆ ಗೆಲುವಾಗಿದೆ. ಕರ್ಣ ಮತ್ತು ನಿತ್ಯಾ ಪ್ರೀತಿ ಸೋತು ಹೋಗಿದೆ.

ಕಥೆ ವಿಷಯಕ್ಕೆ ಬರುವುದಾದರೆ, ನಿತ್ಯಾ ಮದುವೆ ಸಂಭ್ರಮದಿಂದ ನಡೆಯುತ್ತಿದೆ. ನಿತ್ಯಾ ಹಾಗೂ ತೇಜಸ್ ವಿವಾಹ ಆಗುವುದರಲ್ಲಿದ್ದರು. ಅರಿಶಿಣ ಶಾಸ್ತ್ರ ಕೂಡ ನಡೆದಿತ್ತು. ಕಾಶೀಯಾತ್ರೆಯು ಸಂಭ್ರಮದಿಂದ ಸಾಗಿತ್ತು. ಹುಡುಗನ ಮನೆಯವರು ಸಂಭ್ರಮದಿಂದ ಓಡಾಡಿಕೊಂಡಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಹುಡುಗ ಹಾಗೂ ಆತನ ಕುಟುಂಬದವರು ಮದುವೆ ಮಂಟಪದಿಂದ ಓಡಿ ಹೋಗಿದ್ದಾರೆ. ಇದಕ್ಕೆಲ್ಲ ಕಾರಣ ಆಗಿದ್ದು, ಕರ್ಣನ ತಂದೆ ರಮೇಶ್. ನಿತ್ಯಾ ಮದುವೆ ಬಗ್ಗೆ ಸಾಕಷ್ಟು ಕನಸು ಕಂಡಿದ್ದಳು. ಆದರೆ, ಅವಳ ಕನಸು ಈಡೇರುತ್ತಿಲ್ಲ. ಈ ಬಗ್ಗೆ ಆಕೆಗೆ ಬೇಸರ ಇದೆ. ಆದರೂ ಮದುವೆ ಆಗಬೇಕಲ್ಲ ಎಂದು ಆಗುತ್ತಿದ್ದಾಳೆ. ಆದರೆ, ಈಗ ಮದುವೆ ಮಂಟಪದಿಂದ ತೇಜಸ್ ಓಡಿ ಹೋಗಿದ್ದಾನೆ. ಇದು ಆಕೆಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಆಕೆ ಇನ್ನೂ ಶಾಕ್​ನಲ್ಲಿ ಇದ್ದಾಳೆ. ನಿತ್ಯಾ ಹಲವು ವರ್ಷಗಳಿಂದ ತೇಜಸ್​ನ ಪ್ರೀತಿಸುತ್ತಿದ್ದಳು. ಆತನನ್ನು ತುಂಬಾನೇ ನಂಬಿದ್ದಳು. ಆದರೆ, ಕೊನೆಯ ಕ್ಷಣದಲ್ಲಿ ಆತ ಓಡಿ ಹೋಗಿದ್ದು, ನಿತ್ಯಾ ಅಜ್ಜಿ ಶಾಂತಿಗೆ ಸಾಕಷ್ಟು ಬೇಸರ ಮೂಡಿಸಿದೆ. ಆಕೆಯೂ ಶಾಕ್​ಗೆ ಒಳಗಾಗಿದ್ದಾಳೆ. ಹೀಗಾಗಿ, ಪ್ರತಿಯೊಬ್ಬರ ಬಳಿ ತೆರಳಿ ಮದುವೆ ಆಗುವಂತೆ ಕೋರಿದ್ದಾಳೆ. ಆದರೆ, ಯಾರೊಬ್ಬರೂ ಮದುವೆ ಆಗಲು ಒಪ್ಪಿಲ್ಲ. ಕೊನೆಗೆ ಬೇರೆ ದಾರಿ ಕಾಣದೆ ನಿತ್ಯಾಳಿಗೂ ಪೆಟ್ರೋಲ್ ಸುರಿದು, ತಾನೂ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ನಿರ್ಧರಿಸಿದ್ದಾಳೆ. ಈ ಕೆಲಸದ ಹಿಂದೆ ಇರೋದು ರಮೇಶ್ ಕಿತಾಪತಿ. ಕರ್ಣನ ತಂದೆ ರಮೇಶ್ ಮೊದಲಿನಿಂದಲೂ ಕರ್ಣನ ಬಗ್ಗೆ ದ್ವೇಷ ಸಾಧಿಸುತ್ತಲೇ ಬರುತ್ತಿದ್ದಾನೆ. ಆತ ನಿಧಿಯನ್ನು ಪ್ರೀತಿಸುತ್ತಿರೋ ವಿಚಾರ ರಮೇಶ್​ಗೆ ತಿಳಿದಿದೆ. ಹೇಗಾದರೂ ಮಾಡಿ ನಿಧಿಯಿಂದ ಆತನನ್ನು ದೂರ ಮಾಡಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾನೆ. ಈ ಕಾರಣಕ್ಕೆ ಕರ್ಣ ಹಾಗೂ ನಿತ್ಯಾ ಮದುವೆ ಮಾಡಲು ಆತ ಮುಂದಾಗಿದ್ದಾನೆ.

Sulekha