ವಾಹನ ಸವಾರರಿಗೆ ಬಿಗ್‌ ಶಾಕ್‌! – ಮತ್ತೆ ಪೆಟ್ರೋಲ್, ಡೀಸೆಲ್ ದರ ಏರಿಕೆ!

ವಾಹನ ಸವಾರರಿಗೆ ಬಿಗ್‌ ಶಾಕ್‌! – ಮತ್ತೆ ಪೆಟ್ರೋಲ್, ಡೀಸೆಲ್ ದರ ಏರಿಕೆ!

ಮಧ್ಯಪ್ರಾಚ್ಯದಲ್ಲಿ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ತೀವ್ರಗೊಂಡಿದೆ. ಈ ಯುದ್ದದ ಎಫೆಕ್ಟ್‌ ಭಾರತದ ಮೇಲೂ ತಟ್ಟಿದೆ. ಇದೀಗ ಕಮರ್ಷಿಯಲ್‌ ಗ್ಯಾಸ್‌ ಸಿಲಿಂಡರ್‌ ಬೆಲೆ ಏರಿಕೆ ಬೆನ್ನಲ್ಲೇ ಪೆಟ್ರೋಲ್, ಡೀಸೆಲ್ ದರವೂ ಏರಿಕೆಯಾಗಿದೆ.

ಇದನ್ನೂ ಓದಿ: ಗ್ರಾಹಕರಿಗೆ ಏಪ್ರಿಲ್‌ ಶಾಕ್‌! –  ಎಲ್‌ಪಿಜಿ ಸಿಲಿಂಡರ್ ಬೆಲೆ ಬರೋಬ್ಬರಿ 195.50 ರೂ. ಏರಿಕೆ

ಯುದ್ದದಿಂದಾಗಿ ಪೆಟ್ರೋಲ್, ಡೀಸೆಲ್ ಕೊರತೆಯಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ವದಂತಿ ಬೆನ್ನಲ್ಲೇ ಖಾಸಗಿ ಸ್ವಾಮ್ಯದ ಶೆಲ್ ಪೆಟ್ರೋಲ್ ಬಂಕ್ ಜನತೆಗೆ ಮತ್ತೆ ಶಾಕ್ ಕೊಟ್ಟಿದೆ. ಕಳೆದ 15 ದಿನಗಳಲ್ಲಿ ಮೂರು ಬಾರಿ ದರ ಏರಿಕೆ ಮಾಡಿದ್ದ ಶೆಲ್ ಇದೀಗ ಮತ್ತೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿದೆ. ಪ್ರೀಮಿಯಂ ಜೊತೆಗೆ ಸಾಮಾನ್ಯ ಪೆಟ್ರೋಲ್, ಡೀಸೆಲ್ ದರವೂ ಏರಿಕೆಯಾಗಿದೆ.

ಸಾಮಾನ್ಯ ಪೆಟ್ರೋಲ್ ದರ ಮೊದಲು 106 ರೂ.ನಿಂದ 108.50 ರೂ. ಆಗಿತ್ತು. ನಾಲ್ಕು ದಿನದ ಹಿಂದೆ 112 ರೂ.ಗೆ ಏರಿಕೆ ಆಗಿತ್ತು. ಈಗ 119.8 ರೂ.ಗೆ ಏರಿಕೆಯಾಗಿದೆ. ಸಾಮಾನ್ಯ ಪೆಟ್ರೋಲ್ ದರ ಲೀಟರ್‌ಗೆ 7 ರೂ.ನಷ್ಟು ಹೆಚ್ಚಳವಾಗಿದೆ. ಪ್ರೀಮಿಯಂ ಪೆಟ್ರೋಲ್ ದರ ಲೀಟರ್‌ಗೆ 122.42 ರೂ.ನಿಂದ 129.8ಕ್ಕೆ ಏರಿಕೆಯಾಗಿದೆ.

ಸಾಮಾನ್ಯ ಡೀಸೆಲ್ 91 ರೂ.ನಿಂದ 93.50 ರೂ.ಗೆ ಏರಿಕೆ ಆಗಿತ್ತು. ನಾಲ್ಕು ದಿನದ ಹಿಂದೆ ಲೀಟರ್ ಡಿಸೇಲ್ 98 ರೂ. ಆಗಿತ್ತು. ಇಂದು 123ಕ್ಕೆ ಏರಿಕೆಯಾಗಿದೆ. ಡೀಸೆಲ್ ದರ 25 ರೂ. ಹೆಚ್ಚಳವಾಗಿದೆ. ಪ್ರೀಮಿಯಂ ಡೀಸೆಲ್ ಪ್ರತಿ ಲೀಟರ್‌ಗೆ 108.50 ರಿಂದ 133ಕ್ಕೆ ಏರಿಕೆಯಾಗಿದೆ.

ಭಾರತದ ಅತಿದೊಡ್ಡ ತೈಲ ಮಾರುಕಟ್ಟೆ ಸಂಸ್ಥೆಯಾದ ಇಂಡಿಯನ್ ಆಯಿಲ್ ತನ್ನ ಪ್ರೀಮಿಯಮ್ ದರ್ಜೆಯ ಎಕ್ಸ್​ಪಿ100 ಪೆಟ್ರೋಲ್ ಬೆಲೆಯನ್ನು 160 ರೂ ಹೆಚ್ಚಿಸಿದೆ. 149 ರೂ ಇದ್ದ ಇದರ ಬೆಲೆಯಲ್ಲಿ 11 ರೂ ಏರಿಕೆ ಆಗಿದೆ. ಈ ಎಕ್ಸ್​ಪಿ100 ಭಾರತದ ಮೊದಲ 100 ಆಕ್ಟೇನ್ ಪ್ರೀಮಿಯಮ್ ಪೆಟ್ರೋಲ್ ಎನಿಸಿದೆ.

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಸಂಸ್ಥೆಯ ಪವರ್100 ಪೆಟ್ರೋಲ್ ದರವೂ ಏರಿಕೆ ಆಗಿರುವುದು ತಿಳಿದುಬಂದಿದೆ. ಈ ಪ್ರೀಮಿಯಮ್ ಪೆಟ್ರೋಲ್ ಅನ್ನು ಅಧಿಕ ಎಂಜಿನ್ ಕಾರ್ಯಕ್ಷಮತೆ ಅಗತ್ಯ ಇರುವ ಲಕ್ಷುರಿ ಕಾರು, ಸ್ಪೋರ್ಟ್ಸ್ ಬೈಕ್​ಗಳಲ್ಲಿ ಬಳಸಲಾಗುತ್ತದೆ.

ಇನ್ನು, ಪ್ರೀಮಿಯಮ್ ಡೀಸಲ್ ಬೆಲೆಯಲ್ಲೂ ಹೆಚ್ಚಳ ಆಗಿದೆ. ಇಂಡಿಯನ್ ಆಯಿಲ್​ನ ಎಕ್ಸ್​ಟ್ರಾ ಗ್ರೀನ್ ಪ್ರೀಮಿಯಮ್ ಡೀಸಲ್​ನ ರೀಟೇಲ್ ಬೆಲೆ ಒಂದು ಲೀಟರ್​ಗೆ 91.49 ರೂನಿಂದ 92.99 ರೂಗೆ ಏರಿದೆ.

ಆದರೆ, ಇತರ ಸಾಮಾನ್ಯ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳಲ್ಲಿ ಯಾವುದೇ ಏರಿಕೆ ಆಗಿಲ್ಲ. ನಯಾರಾ ಪೆಟ್ರೋಲ್ ಬಂಕ್​ಗಳಲ್ಲಿ ಮಾತ್ರ ಪೆಟ್ರೋಲ್ ಬೆಲೆ 5 ರೂ ಹೆಚ್ಚಿದೆ. ಇಂಡಿಯನ್ ಆಯಿಲ್, ಬಿಪಿ, ಎಚ್​ಪಿ ಪಂಪ್​ಗಳಲ್ಲಿ ಸಾಮಾನ್ಯ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳಲ್ಲಿ ವ್ಯತ್ಯಯ ಆಗಿಲ್ಲ. ಕಳೆದ ವಾರ ಸರ್ಕಾರವು ಸರ್ಕಾರ ಪೆಟ್ರೋಲ್ ಮತ್ತು ಡೀಸಲ್ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಿತ್ತು. ಇದರಿಂದ ತೈಲ ಮಾರುಕಟ್ಟೆ ಕಂಪನಿಗಳ ಮೇಲಿನ ಹೊರೆಯನ್ನು ಸರ್ಕಾರ ಇಳಿಸಿದಂತಾಗಿದೆ.

Shwetha M