ಪ್ರೇಮದ ಊರಿಗೆ ಹಣದ ಮಳೆ – ಲೋ ಬಜೆಟ್, ಬಿಗ್ ಹಿಟ್!

ಪ್ರೇಮದ ಊರಿಗೆ ಹಣದ ಮಳೆ –  ಲೋ ಬಜೆಟ್, ಬಿಗ್ ಹಿಟ್!

ಸಣ್ಣ ಬಜೆಟ್.. ದೊಡ್ಡ ಸ್ಟಾರ್‌ಗಳಿಲ್ಲ.. ಭರ್ಜರಿ ಪ್ರಚಾರವೂ ಇಲ್ಲ.. ಆದ್ರೆ ಬಾಕ್ಸ್ ಆಫೀಸ್‌ನಲ್ಲಿ ಮಾತ್ರ ಧೂಳೆಬ್ಬಿಸುತ್ತಿದೆ.  ಹೌದು, ಸದ್ಯ ಕನ್ನಡ ಚಿತ್ರರಂಗದಲ್ಲಿ ಎಲ್ಲರ ಗಮನ ಸೆಳೆದಿರುವ ಸಿನಿಮಾ ‘ಪ್ರೇಮದ ಊರಲಿ’ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಹಿಂಟ್ ಈಸಿನಿಮಾ ಆಗಿದೆ.

ಸೆಪ್ಟೆಂಬರ್ 25ರಂದು ಚಿತ್ರಮಂದಿರಕ್ಕೆ ಬಂದ ಪ್ರೇಮದ ಊರಿನ ಸಿನಿಮಾ ಮೊದಲ ದಿನವೇ ದೊಡ್ಡ ಕಲೆಕ್ಷನ್ ಮಾಡಿರಲಿಲ್ಲ. ಆರಂಭದಲ್ಲಿ ದಿನಕ್ಕೆ ಕೇವಲ 45ರಿಂದ 60 ಶೋಗಳೊಂದಿಗೆ ಶುರು  ವಾದ ಸಿನಿಮಾ, ಪ್ರೇಕ್ಷಕರ ಪ್ರತಿಕ್ರಿಯೆ ಹೆಚ್ಚಾದಂತೆ ದಿನದಿಂದ ದಿನಕ್ಕೆ ಶೋಗಳ ಸಂಖ್ಯೆಯನ್ನೂ ಹೆಚ್ಚಿಸಿಕೊಂಡಿತು. ಹೇಗೆ ಸು ಫ್ರಮ್ ಸೋ ಮೌತ್ ಟಾಕ್ ಮೂಲಕ ಹಿಟ್ ಆಯ್ತೋ ಹಾಗೇ ಈ ಸಿನಿಮಾ ಕೂಡ ಜನರ ಬಾಯಿಂದ ಬಾಯಿಗೆ ಚೆನ್ನಾಗಿದೆ ಅಂತ ಕೇಳಿ ಕೇಳಿ ಈ ಸಿನಿಮಾ ಹಿಟ್ ಆಗಿದೆ.   ಕೆಲವೇ ದಿನಗಳಲ್ಲಿ ನೂರಾರು ಶೋಗಳಿಗೆ ಏರಿಕೆಯಾಗಿ, ಎರಡನೇ ವಾರದಲ್ಲಿ ದಿನಕ್ಕೆ 800ಕ್ಕೂ ಹೆಚ್ಚು ಪ್ರದರ್ಶನಗಳನ್ನು ಪಡೆದಿದೆ.

ಇನ್ನು ಕಲೆಕ್ಷನ್ ವಿಚಾರಕ್ಕೆ ಬಂದರೆ, ಅಕ್ಟೋಬರ್ 6ರ ವೇಳೆಗೆ ಭಾರತದಲ್ಲಿ ಚಿತ್ರದ ನೆಟ್ ಕಲೆಕ್ಷನ್ ಸುಮಾರು 20.57 ಕೋಟಿ ರೂಪಾಯಿ, ಗ್ರಾಸ್ ಕಲೆಕ್ಷನ್ 25 ಕೋಟಿ ರೂಪಾಯಿ ದಾಟಿದೆ ಎಂದು ವರದಿಯಾಗಿದೆ. ಅಂದರೆ, ಆರಂಭದಲ್ಲಿ ನಿಧಾನವಾಗಿ ಶುರುವಾದ ಸಿನಿಮಾ ಕೇವಲ ಹತ್ತು ದಿನಗಳಲ್ಲಿ ಭರ್ಜರಿ ವೇಗ ಪಡೆದುಕೊಂಡಿದೆ.

ಟ್ರೇಡ್ ವರದಿಗಳ ಪ್ರಕಾರ ‘ಪ್ರೇಮದ ಊರಲಿ’ ಸುಮಾರು 3.5 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾಗಿದೆ. ಹೀಗಾಗಿ ಈಗಾಗಲೇ ಗಳಿಸಿರುವ ಮೊತ್ತಕ್ಕೆ ಹೋಲಿಸಿದರೆ 10 ಪಟ್ಟು ಹೆಚ್ಚು ಲಾಭ ತಂದು ಕೊಟ್ಟಿದೆ.

ಆದ್ರೆ ಈ ಸಿನಿಮಾದ ನಿಜವಾದ ಸಕ್ಸಸ್ ಕಲೆಕ್ಷನ್‌ಗಿಂತಲೂ ದೊಡ್ಡದು. ಸಿನಿಮಾಗೆ ದೊಡ್ಡ ಮಟ್ಟದ ಆರಂಭಿಕ ಹೈಪ್ ಇರಲಿಲ್ಲ. ಆದರೆ ಸಿನಿಮಾ ನೋಡಿದ ಪ್ರೇಕ್ಷಕರು ನೀಡಿದ ಉತ್ತಮ ಪ್ರತಿಕ್ರಿಯೆ ಮತ್ತು ಬಾಯಿಮಾತಿನ ಪ್ರಚಾರವೇ ಸಿನಿಮಾದ ದೊಡ್ಡ ಶಕ್ತಿಯಾಯಿತು. ಗ್ರಾಮೀಣ ಹಿನ್ನೆಲೆ, ಸರಳ ಪ್ರೇಮಕಥೆ, ತಂದೆ-ಮಗನ ಭಾವನಾತ್ಮಕ ಸಂಬಂಧ, ಕುಟುಂಬದ ಸೆಂಟಿಮೆಂಟ್ ಮತ್ತು ಸಹಜ ಅಭಿನಯ ಪ್ರೇಕ್ಷಕರಿಗೆ ಕನೆಕ್ಟ್ ಆಗಿದೆ.

ಇನ್ನು ಇದರ ಹಿಂದೆ ಇರುವ ಹೋರಾಟದ ಕಥೆ ಕೂಡ ರೋಚಕವಾಗಿದೆ. ನಿರ್ದೇಶಕ ಮನೋಜ್ ಕುಮಾರ್ ಸುಮಾರು 18 ವರ್ಷಗಳ ಹಿಂದೆ ಸಿನಿಮಾ ಕನಸು ಕಂಡು, ಸಂತೋಷ್ ಥಿಯೇಟರ್‌ನಲ್ಲಿ ಟಾರ್ಚ್‌ಬಾಯ್ ಆಗಿ ಕೆಲಸ ಮಾಡಿದ್ದರು. ಇಂದು ಅದೇ ಸಿನಿಮಾ ಜಗತ್ತಿನಲ್ಲಿ ಅವರ ನಿರ್ದೇಶನದ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಚಿತ್ರದ ನಾಯಕ ಶ್ರೀರಾಮ್ ಕೂಡ ಈ ಸಿನಿಮಾಕ್ಕಾಗಿ ತಂಡ ಸತತ ಮೂರು ವರ್ಷ ಶ್ರಮಿಸಿದೆ ಎಂದು ಹೇಳಿದ್ದಾರೆ. ರಂಗಾಯಣ ರಘು ಅವರು ಅದ್ಭುತವಾಗಿ ನಟಿಸಿದ್ದಾರೆ, ಒಂದು ಪಾತ್ರಕ್ಕೆ ನಿಜವಾದ ಅರ್ಥ ತುಂಬಿ ಜೀವ ನೀಡಿದ್ದಾರೆ.  ಪ್ರೇಮದ ಊರಲಿ ಹೃದಯದ ತೇರಲಿ ಅನ್ನೋ ಟೈಟಲ್ ಸಾಂಗ್‌ನ್ನು ಪುಟಾಣಿ ಮಕ್ಕಳು ಹಾಡಿದ್ದಾರೆ. ಹಾಡುಗಳು ಕೂಡ ಈ ಸಿನಿಮಾಕ್ಕೆ ಬಿಗ್ ಸಕ್ಸಸ್ ಕೊಟ್ಟಿದೆ. ಹಾಗೇ ಅಭಿಜಿತ್ ತೀರ್ಥಹಳ್ಳಿ ಬರೆದು ಹಾಡುಗಳು ಮ್ಯೂಸಿಕಲ್ ಹಿಟ್ ಕೊಟ್ಟಿದೆ.

ಇನ್ನೂ ಈ ಚಿತ್ರಕ್ಕೆ ನಿರ್ಮಾಪಕರು ಎಷ್ಟು ಕಷ್ಟ ಪಟ್ಟಿದ್ದಾರೆ ಅನ್ನೋದ್ದನ್ನ ರಂಗಾಯಣ ರಘು ವೇದಿಕೆಯಲ್ಲಿ ಹೇಳಿದ್ದಾರೆ. ನಮ್ಮ ನಿರ್ಮಾಪಕರ ಕಥೆ ಕೇಳಿದರೆ ಕರುಳು ಕಿವುಚುತ್ತದೆ.. ಪ್ರಶಾಂತ್ ಬನ್ ಬೇಕರಿ ಕೆಲಸ ಬಿಟ್ಟ, ರವಿ ಕೋಳಿ ಫಾರ್ಮ್ ಬಿಟ್ಟು ಸಿನಿಮಾ ಸಹವಾಸಕ್ಕೆ ಬಂದ.. ಇನ್ನು ದೇವೇಂದ್ರ ಸರ್ ಮನೆಯಲ್ಲಿದ್ದ ಅಕ್ಕನ ಬಂಗಾರದ ಒಡವೆಗಳನ್ನೆಲ್ಲಾ ಬ್ಯಾಂಕಿನಲ್ಲಿ ಅಡವಿಟ್ಟು ಸಿನಿಮಾ ಕಟ್ಟಿದರು ಎಂದು.

ಇದನ್ನೂಓದಿ: ಬಿಗ್ ಬಾಸ್ ಮನೆಯಲ್ಲಿ ಶಾಕ್!- ಸಂಗೀತಾ ಭಟ್ ಆಸ್ಪತ್ರೆಗೆ ದಾಖಲು

ಇನ್ನು ಶೂಟಿಂಗ್ ವೇಳೆ ಎದುರಾದ ಕಷ್ಟ ಇನ್ನೂ ಭಾವುಕ.  ಕೊನೆಯ ದಿನದ ಶೂಟಿಂಗ್ ಅಂದ್ರೆ. ಹೀರೋ ಹೀರೋಹಿನ್ ಮನೆಗೆ ಬಂದು ಕಾಲಿಗೆ ಬೀಳುವ ಸೀನ್ ಇದೆ ಅಲ್ವಾ, ಈ ಸೀನ್‌ಗೆ ಕೃತಕ ಮಳೆಗೆ ಬಳಸುತ್ತಿದ್ದ ನೀರು ಮುಗಿದುಹೋಗಿತ್ತು. ಸ್ಥಳೀಯ ಗ್ರಾಮಸ್ಥರು ಬೋರ್‌ವೆಲ್‌ನಿಂದ ನೀರು ಪಂಪ್ ಮಾಡಿ ತಂಡಕ್ಕೆ ಸಹಾಯ ಮಾಡಿದರು. ಅದೇ ಸಮಯದಲ್ಲಿ ಬಜೆಟ್ ಕೂಡ ಮುಗಿದಿತ್ತು. ಲಾಸ್ಟ್ ಡೇ ಶೂಟಿಂಗ್ ಆಗಿತ್ತು. ಇವತ್ತು ಶೂಟಿಂಗ್ ಮುಗಿಯಲ್ಲ ಅನ್ಕೊಂಡ ನಿರ್ದೇಶಕ ಮನೋಜ್ ಕುಮಾರ್ ತಮ್ಮ ತಾಯಿಗೆ ಕಾಲ್ ಮಾಡಿ “ನಾಳೆ ತಾಳಿ ಅಡ ಇಡಲು ಸಿದ್ಧವಾಗಿರಲಿ” ಎಂದು ಹೇಳಿದ್ದನ್ನು ನಟಿ ತಪಸ್ವಿನಿ ಪೂಣಚ್ಚ ಕೇಳಿಸಿಕೊಂಡಿದ್ದರಂತೆ. ಅಂದರೆ ಸಿನಿಮಾ ಮುಂದುವರಿಸಲು ವೈಯಕ್ತಿಕ ಆಸ್ತಿಯನ್ನೇ ಅಡವಿಡುವ ಪರಿಸ್ಥಿತಿ ಎದುರಾಗಿತ್ತು. ಆದ್ರೆ ಇವತ್ತು ಆ ಸಿನಿಮಾ ಬಿಗ್ ಹಿಟ್ ಕೊಟ್ಟಿದೆ.

ಇದು ದೊಡ್ಡ ಸ್ಟಾರ್‌ಗಳ ಸಿನಿಮಾ ಅಲ್ಲ. ದೊಡ್ಡ ಮಟ್ಟದ ಮಾರ್ಕೆಟಿಂಗ್ ಬಜೆಟ್ ಕೂಡ ಇರಲಿಲ್ಲ. ಸಿನಿಮಾ ಬಿಡುಗಡೆಯಾದಾಗ ತಂಡದ ಬಳಿ ಪ್ರಚಾರಕ್ಕೆ ಸಾಕಷ್ಟು ಹಣವೇ ಇರಲಿಲ್ಲ. ಹೀಗಾಗಿ ತಂಡವೇ ಮದುವೆ ಆಮಂತ್ರಣ ಪತ್ರಿಕೆಯ ರೀತಿಯ ಕಾರ್ಡ್‌ಗಳನ್ನು ಮುದ್ರಿಸಿ, ಬಸ್ ಮತ್ತು ರೈಲುಗಳಲ್ಲಿ ಜನರಿಗೆ ಹಂಚಿ, ಆಟೋಗಳ ಮೇಲೆ ಪೋಸ್ಟರ್ ಅಂಟಿಸಿ ಸಿನಿಮಾಗೆ ಪ್ರಚಾರ ಮಾಡಿತು.

ಒಟ್ಟಿನಲ್ಲಿ ‘ಪ್ರೇಮದ ಊರಲಿ’ ಹೇಳುತ್ತಿರುವ ಸಂದೇಶ ಒಂದೇ—ದೊಡ್ಡ ಬಜೆಟ್, ದೊಡ್ಡ ಸ್ಟಾರ್‌ಗಳು ಮಾತ್ರ ಸಿನಿಮಾ ಗೆಲ್ಲಿಸುವುದಿಲ್ಲ. ಒಳ್ಳೆಯ ಕಥೆ, ಭಾವನೆ ಮತ್ತು ಪ್ರೇಕ್ಷಕರ ಬಾಯಿಮಾತು ಇದ್ದರೆ… ಸಣ್ಣ ಸಿನಿಮಾ ಕೂಡ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಇತಿಹಾಸ ಬರೆಯಬಹುದು ಅನ್ನೋದ್ದಕ್ಕೆ ಈ ಸಿನಿಮಾವೇ ಸಾಕ್ಷಿ. 400 -500 ಕೋಟಿ ಸುರಿದು ಬಿಲ್ಡಪ್ ಕೊಟ್ಟು ಲಾಸ್ ಆಗುವುದ್ದಕ್ಕಿಂತ ಕಡಿಮೆ ಬಜೆಟ್‌ನಲ್ಲಿ ಒಳ್ಳೆ ಸಿನಿಮಾ ಕೊಟ್ರೆ ಜನ ನೋಡೇ ನೋಡ್ತಾರೆ ಅನ್ನೋದ್ದಕ್ಕೆ ಪ್ರೇಮದ ಊರಿನಲ್ಲಿ ಸಿನಿಮಾ ಸಾಕ್ಷಿ. ನಮಸ್ಕಾರ.

 

 

 

Kishor KV

Leave a Reply

Your email address will not be published. Required fields are marked *