ಪ್ರೀತಿ ಝಿಂಟಾ ಹೊರದಬ್ಬಲು ತಂಡದಲ್ಲೇ ಪ್ಲ್ಯಾನ್? – ಪಂಜಾಬ್ ಟೀಂನಿಂದ ಪ್ರೀತಿ ಔಟ್?
PBKS ಬ್ರ್ಯಾಂಡ್ ವ್ಯಾಲ್ಯೂ ಕುಸಿತಾ?

ಪಂಜಾಬ್ ಕಿಂಗ್ಸ್ ತಂಡದ ಒಡತಿ ಪ್ರೀತಿ ಝಿಂಟಾ.. ಐಪಿಎಲ್ ಟೂರ್ನಿ ವೇಳೆ ಪಂಜಾಬ್ ಮ್ಯಾಚ್ ಎಲ್ಲೇ ನಡೆದ್ರೂ, ಸ್ಟೇಡಿಯಂಗೆ ಹಾಜರಾಗ್ತಾರೆ.. ತಂಡದ ಆಟಗಾರರು ಸೋಲಲಿ ಗೆಲ್ಲಲಿ.. ಪ್ರೀತಿ ಸಪೋರ್ಟ್ ಮಾಡ್ತಾನೇ ಇರ್ತಾರೆ.. ಆದ್ರೀಗ ಪಂಜಾಬ್ ಕಿಂಗ್ಸ್ ಫ್ಯಾಂಚೈಸಿಯಲ್ಲಿ ಮಾಲೀಕತ್ವದ ಕಿತ್ತಾಟ ನಡೀತಿದೆ ಅನ್ನೋ ಮಾತು ಕೇಳಿಬರ್ತಿದೆ.. ಇದೀಗ ಪ್ರೀತಿಗೆ ತಂಡದ ಮೇಲಿನ ಹಿಡಿತ ಕಡಿಮೆ ಆಗ್ತಿದ್ಯಾ ಅನ್ನೋ ಪ್ರಶ್ನೆ ಕೂಡ ಎದುರಾಗಿದೆ. ಅಷ್ಟೇ ಅಲ್ಲ ಮುಂದಿನ ಸೀಸನ್ ನಲ್ಲಿ ಪಂಜಾಬ್ ತಂಡ ಪ್ರೀತಿಯ ಕೈತಪ್ಪಿ ಹೋಗುತ್ತಾ ಅನ್ನೋ ಪ್ರಶ್ನೆ ಈಗ ಪ್ರೀತಿ ಫ್ಯಾನ್ಸ್ ನ ಕಾಡ್ತಿದೆ.
ಇದನ್ನೂ ಓದಿ: ವಿಂಡೀಸ್ ಬೇಟೆಯಾಡಿದ RCB ಹೀರೋ – 12 ಓವರ್.. 5 ವಿಕೆಟ್ ಕಿತ್ತ ಜೋಶ್
ಆರ್‌ಸಿಬಿ ಎದುರು ಫೈನಲ್‌ನಲ್ಲಿ ಸೋತರೂ 2025ರ ಐಪಿಎಲ್‌ನಲ್ಲಿ ಪ್ರೀತಿ ಝಿಂಟಾ ಒಡೆತನದ ಪಂಜಾಬ್ ಕಿಂಗ್ಸ್ ಭರ್ಜರಿ ಪ್ರದರ್ಶನವನ್ನೇ ಕೊಟ್ಟಿತ್ತು.. ಈ ವರ್ಷ ಫೈನಲ್ ಸೇರಿದಂತೆ ನಾಲ್ಕು ಮುಖಾಮುಖಿಗಳಲ್ಲಿ ಮೂರು ಬಾರಿ ಆರ್‌ಸಿಬಿ ಎದುರು ಹೊಡೆಸಿಕೊಂಡಿದ್ದ ಪಂಜಾಬ್ ಅಂತಿಮವಾಗಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿತ್ತು ಪಂಜಾಬ್ ತಂಡದ ಕಥೆ. ಅದೆಲ್ಲಾ ಇರಲಿ.. ಈಗ ಪಂಜಾಬ್ ಟೀಮ್ ನಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋ ವಿಚಾರದ ಬ್ಗಗೆ ಭಾರೀ ಚರ್ಚೆಯಾಗ್ತಿದೆ. ಇತ್ತೀಚೆಗಷ್ಟೇ ಪ್ರೀತಿ ಝಿಂಟಾ ತಂಡದ ಸಹ ಮಾಲೀಕನ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ರು. ಹೀಗಾಗಿ ಪಂಜಾಬ್ ಕಿಂಗ್ಸ್ ಟೀಮ್ ಪ್ರೀತಿ ಹಿಡಿತದಲ್ಲಿಲ್ವಾ ಅನ್ನೋ ಅನುಮಾನ ಕಾಡೋದಿಕ್ಕೆ ಶುರುವಾಗಿದೆ.
ಪಂಜಾಬ್ ಕಿಂಗ್ಸ್ ಅನ್ನೋ ಹೆಸರು ಕೇಳಿದಾಗ್ಲೆಲ್ಲಾಆಟಗಾರರಿಗಿಂತ ಫಸ್ಟ್ ತಂಡದ ಮಾಲಕಿ ಪ್ರೀತಿ ಝಿಂಟಾ ನೆನಪಾಗ್ತಾರೆ… ಆದ್ರೆ ತಂಡದ ಖರೀದಿಯ ದಿನದಿಂದಲೂ ಸಂಪೂರ್ಣ ಮಾಲೀಕತ್ವ ಅವರೊಬ್ಬರದ್ದೇ ಆಗಿರಲಿಲ್ಲ. ಪಂಜಾಬ್ ತಂಡವನ್ನ ನಾಲ್ವರು ಮುನ್ನಡೆಸ್ತಿದ್ದಾರೆ.. ಉದ್ಯಮಿ ಮೋಹಿತ್ ಬರ್ಮನ್, ಪ್ರೀತಿ ಜಿಂಟಾ, ಉದ್ಯಮಿ ನೆಸ್ ವಾಡಿಯಾ ಹಾಗೂ ಕರಣ್ ಪಾಲ್.. ಹೀಗೆ ನಾಲ್ಕು ಜನರು ಸೇರಿ ಈ ತಂಡದ ಮಾಲೀಕತ್ವವನ್ನು ಹಂಚಿಕೊಂಡಿದ್ದಾರೆ. ಕಳೆದ ಕೆಲ ದಿನಗಳ ಹಿಂದಷ್ಟೇ ಪ್ರೀತಿ ತಂಡದ ಸಹ ಮಾಲೀಕರಾದ ಮೋಹಿತ್ ಬರ್ಮನ್, ಮತ್ತು ನೆಸ್ ವಾಡಿಯಾ ವಿರುದ್ಧ ಕೋರ್ಟ್ ಮೆಟ್ಟಿಲು ಹತ್ತಿದ್ರು.. ಕಳೆದ ಏಪ್ರಿಲ್ 21 ರಂದು ನಡೆದ ಕೆಪಿಹೆಚ್ ಡ್ರೀಮ್ ಕ್ರಿಕೆಟ್‌ನ ಸಾಮಾನ್ಯ ಸಭೆ ವಿವಾದಕ್ಕೆ ಕಾರಣವಾಗಿದೆ. ಈ ಸಭೆಯಲ್ಲಿ ಮುನೀಶ್ ಖನ್ನಾ ಅವರನ್ನು ಹೊಸ ನಿರ್ದೇಶಕರಾಗಿ ನೇಮಿಸಲಾಯಿತು, ಆದರೆ ಪ್ರೀತಿ ಜಿಂಟಾ ಮತ್ತು ಕರಣ್ ಪಾಲ್ ಈ ನೇಮಕವನ್ನು ವಿರೋಧಿಸಿದ್ದರು. ಸಭೆಯು ಕಂಪನಿಯ ನಿಯಮಗಳು ಮತ್ತು ಕಂಪನೀಸ್ ಆಕ್ಟ್ 2013ರ ಅಡಿಯಲ್ಲಿ ಸರಿಯಾದ ಕಾನೂನು ಪ್ರಕ್ರಿಯೆಯನ್ನು ಅನುಸರಿಸಿಲ್ಲ ಎಂದು ಜಿಂಟಾ ಆರೋಪಿಸಿ, ದೂರು ನೀಡಿದ್ರು. ಇದೀಗ ಟೀಮ್ ನ ಸಹ ಮಾಲೀಕರು ಪ್ರೀತಿನಾ ಸೈಡ್ಲೈನ್ ಮಾಡ್ತಿದ್ದಾರೆ ಅನ್ನೋ ಮಾತು ಕೇಳಿಬಂದಿದೆ.
ಇನ್ನು ತಂಡದ ಸಹಮಾಲೀಕರಲ್ಲಿ ಮನಸ್ತಾಪ ಉಂಟಾಗಲು ಮತ್ತೊಂದು ಕಾರಣ ಅಂದ್ರೆ ತಂಡದ ಮೇಲೆ ಇವ್ರು ಹಾಕಿರೋ ಹೂಡಿಕೆ.. ಹೌದು, ಮಾಧ್ಯಮ ವರದಿಗಳ ಪ್ರಕಾರ, ಪ್ರೀತಿ ಜಿಂಟಾ ತಂಡದಲ್ಲಿ ಶೇ. 23ರಷ್ಟು ಪಾಲುದಾರಿಕೆಯನ್ನು ಹೊಂದಿದ್ದಾರೆ. 2008ರಲ್ಲಿ ತಂಡವನ್ನು ಖರೀದಿಸುವಾಗ ಅವರು ಸುಮಾರು 35 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರು. ತಂಡದ ಅತಿದೊಡ್ಡ ಪಾಲುದಾರ ಉದ್ಯಮಿ ಮೋಹಿತ್ ಬರ್ಮನ್. ಅವರ ಬಳಿ ಬರೋಬ್ಬರಿ ಶೇ. 46ರಷ್ಟು ಷೇರುಗಳಿವೆ. ಇನ್ನು ಉದ್ಯಮಿ ನೆಸ್ ವಾಡಿಯಾ ಅವರ ಬಳಿಯೂ ಪ್ರೀತಿ ಜಿಂಟಾ ಅವರಷ್ಟೇ, ಅಂದರೆ ಶೇ. 23ರಷ್ಟು ಪಾಲಿದೆ. ಮತ್ತೊಬ್ಬ ಮಾಲೀಕರಾದ ಕರಣ್ ಪಾಲ್ ಶೇ. 8ರಷ್ಟು ಪಾಲುದಾರಿಕೆ ಹೊಂದಿದ್ದಾರೆ. ಐಪಿಎಲ್ ಮೊದಲ ಸೀಸನ್ ವೇಳೆ ನೆಸ್ ವಾಡಿಯಾ ಮತ್ತು ಪ್ರೀತಿ ಝಿಂಟಾ ತುಂಬಾ ಒಳ್ಳೆಯ ಬಾಂಧವ್ಯ ಹೊಂದಿದ್ದರು.. ಆದ್ರೆ ನಂತರದ ದಿನಗಳಲ್ಲಿ ವಾಡಿಯಾರಿಂದ ಝಿಂಟಾ ಅಂತರ ಕಾಯ್ದುಕೊಂಡಿರೋದು ಎಲ್ಲರಿಗೂ ಗೊತ್ತಿದೆ. ಅದರ ಮುಂದುವರಿದ ಭಾಗವಾಗಿಯೇ ಈಗ ಮಾಲೀಕರ ಮಧ್ಯೆ ಮನಸ್ತಾಪ ಜಾಸ್ತಿ ಆಗಿದೆಯಾ ಎಂಬ ಅನುಮೂನವೂ ಇದೆ.. ಅಲ್ಲದೆ ತಂಡದಲ್ಲಿ ಪ್ರೀತಿ ಕಡಿಮೆ ಬಂಡವಾಳ ಹೂಡಿಕೆ ಮಾಡಿರೋದ್ರಿಂದ ಆಕೆಯ ನಿರ್ಧಾರಗಳನ್ನ ಲೆಕ್ಕಕ್ಕೆ ತೆಗೆದುಕೊಳ್ತಿಲ್ಲ ಎನ್ನಲಾಗುತ್ತಿದೆ. ಅಲ್ಲದೆ ಮುಂದಿನ ವರ್ಷ ಪಂಜಾಬ್ ಪ್ರೀತಿ ಕೈ ತಪ್ಪಿ ಹೋಗೋ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ.
ಇನ್ನು ಐಪಿಎಲ್ ನಲ್ಲಿ ಪ್ರೀತಿ ಸೋತರೂ, ಬೇರೆ ಲೀಗ್ ನಲ್ಲಿ ಗೆದ್ದಿದ್ದಾರೆ.. ಪ್ರೀತಿ ಜಿಂಟಾ ಕೇವಲ ಐಪಿಎಲ್ ನಲ್ಲಿ ಮಾತ್ರ ಸಕ್ರಿಯವಾಗಿಲ್ಲ. ಕೆರಿಬಿಯನ್ ಪ್ರೀಮಿಯರ್ ಲೀಗ್ ನಲ್ಲೂ ಅವರದ್ದೊಂದು ತಂಡವಿದೆ. ಅಲ್ಲಿನ ಸೇಂಟ್ ಲೂಸಿಯಾ ಕಿಂಗ್ಸ್ ತಂಡದ ಸಹ-ಮಾಲಕಿಯೂ ಹೌದು. ವಿಶೇಷ ಅಂದರೆ, 2024ರಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ ತಂಡ ಸಿಪಿಎಲ್ ಟ್ರೋಫಿಯನ್ನು ಗೆದ್ದು ಬೀಗಿತ್ತು. ಹೀಗಾಗಿ ಮಾಲೀಕತ್ವದಲ್ಲಿ ಅವರಿಗೆ ಯಶಸ್ಸು ಸಿಕ್ಕಿಲ್ಲ ಅಂತ ಹೇಳುವಂತಿಲ್ಲ. ಈಗಾಗ್ಲೇ ಪ್ರೀತಿ ಕ್ರಿಕೆಟ್ ಟೀಮ್ ಮುನ್ನಡೆಸೋದ್ರಲ್ಲಿ ಪಳಗಿದ್ದಾರೆ.. ಸೋತ್ರೂ, ಗೆದ್ರು, ಆಕೆ ಕುಗ್ಗಲ್ಲ.. ಬಂದಿರೋ ಸವಾಲುಗಳನ್ನ ಈಸಿಯಾಗೇ ಫೇಸ್ ಮಾಡ್ತಾ ಬಂದಿದ್ದಾರೆ.. ಅಲ್ಲದೆ ಪಂಜಾಬ್ ಕಿಂಗ್ಸ್ ತಂಡಕ್ಕೆ ಆಟಗಾರರ ಜೊತೆಗೆ ಪ್ರೀತಿ ಝಿಂಟಾ ಕೂಡ ದೊಡ್ಡ ಬ್ರ್ಯಾಂಡ್ ವ್ಯಾಲ್ಯೂ ತಂದುಕೊಂಟಿದ್ದಾರೆ.. ಹೀಗಾಗಿ ಪ್ರೀತಿ ಪಂಜಾಬ್ ತಂಡವನ್ನ ತೊರೆಯೋ ಸಾಧ್ಯತೆ ತೀರಾ ಕಡಿಮೆ.. ಕ್ರಿಕೆಟ್ ಅಭಿಮಾನಿಗಳಿಗೂ ಪ್ರೀತಿ ಕೈಯಲ್ಲಿರೋ ಪಂಜಾಬ್ ಟೀಂ ನೋಡೋದಿಕ್ಕೆ ಖುಷಿ ಅನ್ನೋದ್ರಲ್ಲಿ ಎರಡು ಮಾತಿಲ್ಲ.

ನೋಡಿರಿ

